ಕಮಲ್ ಹಾಸನ್ ಹೇಳಿಕೆ ತಪ್ಪು, ಅದನ್ನು ನಾವು ಒಪ್ಪಬೇಕಿಲ್ಲ: ಸುಮಲತಾ ಅಂಬರೀಷ್

ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಮಾತನಾಡಿರುವುದು ವಿವಾದಕ್ಕೆ ಕಾರಣ ಆಗಿದೆ. ಅಲ್ಲದೇ ಅವರು ಕ್ಷಮೆ ಕೇಳಲು ಕೂಡ ಹಿಂದೇಟು ಹಾಕಿದ್ದಾರೆ. ಇದರಿಂದ ಆಕ್ರೋಶ ಹೆಚ್ಚಿದೆ. ಈ ಬಗ್ಗೆ ನಟಿ ಸುಮಲತಾ ಅಂಬರೀಷ್ ಅವರು ಮಾತನಾಡಿದ್ದಾರೆ. ಕಮಲ್ ಹೇಳಿಕೆಯನ್ನು ಸುಮಲತಾ ಸಹ ಖಂಡಿಸಿದ್ದಾರೆ.

ಕಮಲ್ ಹಾಸನ್ ಹೇಳಿಕೆ ತಪ್ಪು, ಅದನ್ನು ನಾವು ಒಪ್ಪಬೇಕಿಲ್ಲ: ಸುಮಲತಾ ಅಂಬರೀಷ್
Sumalatha Ambareesh, Kamal Haasan

Updated on: May 29, 2025 | 3:55 PM

ತಮಿಳು ಭಾಷೆಯಿಂದ ಕನ್ನಡ (Kannada) ಹುಟ್ಟಿದೆ ಎಂದು ಹೇಳಿರುವ ಕಮಲ್ ಹಾಸನ್ (Kamal Haasan) ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಸುಮಲತಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ‘ಕಮಲ್ ಹಾಸನ್ ಹೇಳಿಕೆ ಸರಿಯಲ್ಲ ಎಂಬುದು ಎಲ್ಲರ ವಿಚಾರ. ಯಾಕೆಂದರೆ, ಕನ್ನಡಿಗರಿಗೆ ಭಾಷೆ ಎಂಬುದು ತುಂಬ ಹೆಮ್ಮೆಯ ವಿಷಯ. ಇದು ಸೂಕ್ಷ್ಮ ವಿಷಯ ಕೂಡ ಹೌದು. ಕಮಲ್ ಹಾಸನ್ ಹಿರಿಯ ನಟ. ಆ ಬಗ್ಗೆ ಗೌರವ ಇದೆ. ಅವರ ಅನಿಸಿಕೆ ಅವರು ತಿಳಿಸಿದ್ದಾರೆ. ಅವರ ಹೇಳಿಕೆ ಕನ್ನಡಿಗರಿಗೆ ನೋವು ಕೊಡುವಂತಹ ವಿಷಯ’ ಎಂದು ಸುಮಲತಾ ಅಂಬರೀಷ್ (Sumalatha Ambareesh) ಅವರು ಹೇಳಿದ್ದಾರೆ.

‘ನಾವು ಯಾರೂ ಕೂಡ ಭಾಷಾ ಪಂಡಿತರಲ್ಲ. ಸಾವಿರಾರು ವರ್ಷಗಳ ಹಿಂದೆ ಹೋಗಿ, ಯಾವ ಭಾಷೆಯಿಂದ ಯಾವುದು ಹುಟ್ಟಿತು ಅಂತ ಹೇಳೋಕೆ ನಮಗೆ ಸಾಧ್ಯವಿಲ್ಲ. ಆ ರೀತಿ ಗೊತ್ತಿಲ್ಲದ ವಿಚಾರದ ಬಗ್ಗೆ ಕಮಲ್ ಹಾಸನ್ ಅವರು ಸ್ವಲ್ಪ ಯೋಚನೆ ಮಾಡಿ ಮಾತನಾಡಿದ್ದರೆ ಚೆನ್ನಾಗಿ ಇರುತ್ತಿತ್ತು ಎನಿಸುತ್ತದೆ’ ಎಂಬುದು ಸುಮಲತಾ ಅಂಬರೀಷ್ ಅಭಿಪ್ರಾಯ.

ಇದನ್ನೂ ಓದಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿಕೆ, ನಟ ಜಗ್ಗೇಶ್​ರಿಂದ ಪಾಠ
ರಾಜ್ಯಸಭೆಗೆ ಕಮಲ್ ಹಾಸನ್; ಮೇಲ್ಮನೆ ಪ್ರವೇಶಕ್ಕೆ ನಾಮ ನಿರ್ದೇಶನ
ಕಮಲ್ ಹಾಸನ್ ವಿವಾದ: ಕನ್ನಡಿಗರ ಕೆರಳಿಸಿದ ನಟನ​ ಚಿತ್ರಕ್ಕೆ ಸಂಕಷ್ಟ
ಸೋನು ನಿಗಮ್ ಬೆನ್ನಲ್ಲೇ ಕಮಲ್ ಹಾಸನ್ ವಿವಾದ: ಕೆರಳಿ ಕೆಂಡವಾದ ಕನ್ನಡಿಗರು

‘ಕಮಲ್ ಹಾಸನ್ ಅವರ ವೈಯಕ್ತಿಕ ಅಭಿಪ್ರಾಯವನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು ಅಂತ ಏನೂ ಇಲ್ಲ. ನಮ್ಮ ಭಾಷೆಯ ಘನತೆ ಯಾರೋ ಒಬ್ಬರ ಹೇಳಿಕೆಯಿಂದ ಕಡಿಮೆ ಆಗಬೇಕಿಲ್ಲ. ರಾಜಕಾರಣಿಗಳಿಗೆ ಭಾಷೆ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಅಂತ ಹೇಳಿದ್ದು ಕೂಡ ಕಮಲ್ ಹಾಸನ್ ಅವರ ವೈಯಕ್ತಿಕ ಅಭಿಪ್ರಾಯ. ಭಾರತದಲ್ಲಿ ಹುಟ್ಟಿದ ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತದೆ. ಅದನ್ನು ತಿಳಿಸುವ ಅಧಿಕಾರ ಕೂಡ ಇದೆ. ಆದರೆ ಸೂಕ್ಷ್ಮವಾದ ಹೇಳಿಕೆಯನ್ನು ಕೊಡುವಾಗ 2 ಸೆಕೆಂಡ್ ಯೋಚಿಸಬೇಕು. ಕಮಲ್ ಹಾಸನ್ ಆ ರೀತಿ ಹೇಳಿದ್ದು ತಪ್ಪು’ ಎಂದಿದ್ದಾರೆ ಸುಮಲತಾ ಅಂಬರೀಷ್.

ಕಮಲ್ ಹಾಸನ್ ಹೇಳಿದ್ದು ಸುಳ್ಳು, ಕನ್ನಡವು ಸಂಸ್ಕೃತ ಆಧಾರಿತ : ಡಾ. ಕೆ ಸುಬ್ರಮೋನಿಯ ಅಯ್ಯರ್

ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಜೂನ್ 5ರಂದು ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ಈ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ‘ಯಾವುದೇ ವಿಷಯವನ್ನು ನಾವು ವಿಪರೀತಕ್ಕೆ ತೆಗೆದುಕೊಂಡು ಹೋಗಬಾರದು. ಆ ಹೇಳಿಕೆಯನ್ನು ಎಷ್ಟರವರೆಗೆ ತೆಗೆದುಕೊಳ್ಳಬೇಕೋ ಅಷ್ಟರವರೆಗೆ ತೆಗೆದುಕೊಂಡು ಬಿಟ್ಟು ಬಿಡಬೇಕು’ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:16 pm, Thu, 29 May 25