ಮುಂಬೈನಲ್ಲಿ ಪ್ರತಿ ವರ್ಷ ಬಹಳ ಸಡಗರದಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ನಟಿ ಸನ್ನಿ ಲಿಯೋನ್ ಅವರು ಕೂಡ ಈ ಬಾರಿ ಸಡಗರದಲ್ಲಿ ಭಾಗಿಯಾಗಿದ್ದಾರೆ. ಅವರ ಮನೆಯಲ್ಲಿಯೂ ಅದ್ದೂರಿಯಾಗಿ ಹಬ್ಬವನ್ನು ಮಾಡಲಾಗಿದೆ.
ಸನ್ನಿ ಲಿಯೋನ್, ಪತಿ ಡೇನಿಯಲ್ ವೆಬರ್ ಹಾಗೂ ಮಕ್ಕಳ ಜೊತೆ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆ ಧರಿಸಿ, ವಿಶೇಷವಾದ ಅಡುಗೆ ಮಾಡಿ ಗಣೇಶನಿಗೆ ಪೂಜೆ ಸಲ್ಲಿಸಿದ್ದಾರೆ. ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಗಣೇಶನ ವಿಗ್ರಹವನ್ನು ಕೂರಿಸಿ, ಹೂವುಗಳಿಂದ ಸಿಂಗರಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಭಕ್ತಿ ಭಾವದಿಂದ ಸಲ್ಲಿ ಲಿಯೋನ್ ಅವರು ಗೌರಿ-ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಅಭಿಮಾನಿಗಳಿಗೆ ಅವರು ಹಬ್ಬದ ಶುಭಾಶಯ ಕೋರಿದ್ದಾರೆ.
ತಾವಷ್ಟೇ ಅಲ್ಲದೇ, ಅತಿಥಿಗಳ ಜೊತೆಗೂ ಸನ್ನಿ ಲಿಯೋನ್ ಅವರು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ್ದಾರೆ. ಸಿನಿಮಾದ ಕೆಲಸಗಳಿಗೆ ಬಿಡುವು ನೀಡಿ ಹಬ್ಬದ ವಾತಾವರಣವನ್ನು ಸನ್ನಿ ಲಿಯೋನ್ ಎಂಜಾಯ್ ಮಾಡಿದ್ದಾರೆ. ಇದು ವಿಶೇಷ ಕ್ಷಣಗಳು.
ಬಾಲಿವುಡ್ನ ಅನೇಕ ಸಿನಿಮಾಗಳಲ್ಲಿ ನಟಿಸಿ ಸನ್ನಿ ಲಿಯೋನ್ ಫೇಮಸ್ ಆಗಿದ್ದಾರೆ. ಹಲವು ಐಟಂ ಸಾಂಗ್ಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ದೇಶ, ವಿದೇಶಗಳಲ್ಲಿ ಅವರಿಗೆ ಅಭಿಮಾನಿಗಳು ಇದ್ದಾರೆ. ಅವರಿಗೆ ಸಖತ್ ಬೇಡಿಕೆ ಇದೆ.