Sunny Leone: ಸನ್ನಿ ಲಿಯೋನ್​ಗೆ ಬಟ್ಟೆ ತೊಡಿಸಲು ಕಷ್ಟಪಟ್ಟ ಆರ್ಮಿ; ವಿಡಿಯೋ ವೈರಲ್​

ಸನ್ನಿ ಲಿಯೋನ್​: ನಾಲ್ಕು ಜನರು ಸೇರಿಕೊಂಡು ಸನ್ನಿ ಲಿಯೋನ್​ ಅವರ ಗೌನ್​ ಜಿಪ್​ ಹಾಕಲು ಪ್ರಯತ್ನಿಸಿದ್ದಾರೆ. ಕಡೆಗೂ ಅವರು ಯಶಸ್ವಿ ಆದರೋ ಇಲ್ಲವೋ ಅಂತ ಹೇಳಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

Sunny Leone: ಸನ್ನಿ ಲಿಯೋನ್​ಗೆ ಬಟ್ಟೆ ತೊಡಿಸಲು ಕಷ್ಟಪಟ್ಟ ಆರ್ಮಿ; ವಿಡಿಯೋ ವೈರಲ್​
ಸನ್ನಿ ಲಿಯೋನ್
Edited By:

Updated on: May 24, 2021 | 9:13 AM

ಒಂದಲ್ಲ ಒಂದು ಕಾರಣಕ್ಕೆ ನಟಿ ಸನ್ನಿ ಲಿಯೋನ್​ ಸುದ್ದಿ ಆಗುತ್ತಲೇ ಇರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಅವರು ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ತಮ್ಮ ಜೀವನದ ಹಲವು ವಿಚಾರಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತ ಇರುತ್ತಾರೆ. ಈಗ ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಮಾದಕ ತಾರೆಗೆ ಬಟ್ಟೆ ತೊಡಿಸಲು ಒಂದು ಗಂಪು ಕಷ್ಟಪಡುತ್ತಿರುವ ದೃಶ್ಯ ಅದರಲ್ಲಿದೆ. ಅದರ ಅಸಲಿಯತ್ತು ಏನು? ಅದನ್ನು ಸ್ವತಃ ಸನ್ನಿ ಲಿಯೋನ್​ ವಿವರಿಸಿದ್ದಾರೆ.

ಒಂದು ಕಾಲದಲ್ಲಿ ನೀಲಿ ಚಿತ್ರಗಳ ನಟಿಯಾಗಿದ್ದ ಸನ್ನಿ ಲಿಯೋನ್​ ನಂತರ ಬಾಲಿವುಡ್​ಗೆ ಕಾಲಿಟ್ಟರು. ಹಲವು ಟಿವಿ ರಿಯಾಲಿಟಿ ಶೋಗಳಲ್ಲೂ ಅವರು ಕಾಣಿಸಿಕೊಂಡರು. ಎಂಟಿವಿಯ ಜನಪ್ರಿಯ Splitsvilla ಶೋಗೆ ಅವರು ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ತಯಾರಾಗುತ್ತಿರುವಾಗ ಕಾಸ್ಟ್ಯೂಮ್​ ಧರಿಸುವ ಕಷ್ಟ ಹೇಗಿತ್ತು ಎಂಬುದನ್ನು ವಿವರಿಸಲು ಸನ್ನಿ ಲಿಯೋನ್​ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಯಾವುದೇ ಸೆಲೆಬ್ರಿಟಿ ಸಾರ್ವಜನಿಕವಾಗಿ ಸುಂದರವಾಗಿ ಕಾಣಲು ಅವರ ಹಿಂದೆ ಒಂದು ತಂಡ ಕೆಲಸ ಮಾಡುತ್ತದೆ. ಅವರ ಮೇಕಪ್​, ಕಾಸ್ಟ್ಯೂಮ್​, ಹೇರ್​ಸ್ಟೈಲ್​ ಎಲ್ಲವನ್ನೂ ಆ ತಂಡವೇ ನೋಡಿಕೊಳ್ಳುತ್ತದೆ. ಸನ್ನಿ ಜೊತೆಗೂ ಅಂತಹ ಒಂದು ಟೀಮ್​ ಇದೆ. Splitsvilla ಕಾರ್ಯಕ್ರಮಕ್ಕಾಗಿ ಸನ್ನಿ ಗೌನ್​ ಧರಿಸುತ್ತಿರುವಾಗ ಬೆನ್ನಿನ ಭಾಗದಲ್ಲಿರುವ ಜಿಪ್​ ಹಾಕುವುದು ಕಷ್ಟವಾಗಿತ್ತು. ಜಿಪ್​ ಮೇಲೇರಿಸಲು ಅವರ ಟೀಮ್​ ಹರಸಾಹಸಪಟ್ಟಿದೆ. ಹೀಗೆ ಸರ್ಕಸ್ ಮಾಡುತ್ತಿರುವ ತಮ್ಮ ತಂಡವನ್ನು ‘ಆರ್ಮಿ’ ಎಂದು ಸನ್ನಿ ಲಿಯೋನ್ ಕರೆದಿದ್ದಾರೆ​.

‘ಗೌನ್​ ಸರಿಯಾಗಿ ಕಾಣುವಂತೆ ಮಾಡಲು ಒಂದು ಆರ್ಮಿಯೇ ಬೇಕಾಗುತ್ತದೆ’ ಎಂದು ಈ ವಿಡಿಯೋಗೆ ಸನ್ನಿ ಲಿಯೋನ್​ ಕ್ಯಾಪ್ಷನ್​ ನೀಡಿದ್ದಾರೆ. ನಾಲ್ಕು ಜನರು ಸೇರಿಕೊಂಡು ಗೌನ್​ ಜಿಪ್​ ಹಾಕಲು ಪ್ರಯತ್ನಿಸಿದ್ದಾರೆ. ಕಡೆಗೂ ಅವರು ಯಶಸ್ವಿ ಆದರೋ ಇಲ್ಲವೋ ಅಂತ ಹೇಳಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸನ್ನಿ ಅಭಿಮಾನಿಗಳು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಸನ್ನಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಅವರು ಬರ್ತ್​ಡೇ (ಮೇ 13) ಆಚರಿಸಿಕೊಂಡರು. ಮಂಡ್ಯದ ಹಳ್ಳಿಯೊಂದರಲ್ಲಿ ಈ ಮಾದಕ ತಾರೆಯ ಹುಟ್ಟುಹಬ್ಬಕ್ಕೆ ದೊಡ್ಡ ಬ್ಯಾನರ್​ ಮೂಲಕ ಶುಭಕೋರಲಾಗಿತ್ತು. ಆ ಫೋಟೋ ಸಖತ್​ ವೈರಲ್​ ಆಗಿತ್ತು.

ಇದನ್ನೂ ಓದಿ:

ಕರ್ನಾಟಕದ ಹಳ್ಳಿಗರ ಅಭಿಮಾನಕ್ಕೆ ಸನ್ನಿ ಲಿಯೋನ್​ ಫಿದಾ; ಅನಾಥ ಮಕ್ಕಳ ತಾಯಿ ಎಂದ ಫ್ಯಾನ್ಸ್​

ದೆಹಲಿಯ 10,000 ವಲಸೆ ಕಾರ್ಮಿಕರಿಗೆ ಆಹಾರ ನೀಡಲು ಸನ್ನಿ ಲಿಯೋನ್ ಮುಂದೆಜ್ಜೆ!

Published On - 8:02 am, Mon, 24 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us