‘ಸೀನ್’ಗೆ ಸಿಕ್ಕಿದೆ ಭರ್ಜರಿ ಒಟಿಟಿ ಡೀಲ್, ರಿಲೀಸ್ ಯಾವಾಗ?

‘ಸೀನ್’ ಸಿನಿಮಾ ಕಳ್ಳ ಮತ್ತು ಪೊಲೀಸ್ ಕತೆಯನ್ನು ಹೊಂದಿದೆ. ಆದರೆ ಈ ಕಳ್ಳ-ಪೊಲೀಸ್ ಕತೆ ಬಹಳ ಭಿನ್ನವಾಗಿದೆ. ಇದೇ ಕಾರಣಕ್ಕೆ ಸಿನಿಮಾ ಜನಮನ ಸೆಳೆಯುತ್ತಿದೆ. ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಈಗಾಗಲೇ 300 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಒಟಿಟಿ ಡೀಲ್ ಇತ್ತೀಚೆಗಷ್ಟೆ ಕುದುರಿದ್ದು ಬರೋಬ್ಬರಿ 88 ಕೋಟಿ ರೂಪಾಯಿಗೆ ಸಿನಿಮಾದ ಒಟಿಟಿ ಹಕ್ಕು ಮಾರಾಟವಾಗಿದೆ.

‘ಸೀನ್’ಗೆ ಸಿಕ್ಕಿದೆ ಭರ್ಜರಿ ಒಟಿಟಿ ಡೀಲ್, ರಿಲೀಸ್ ಯಾವಾಗ?
Scene

Updated on: Nov 23, 2026 | 9:36 AM

ಮುಖ್ಯಾಂಶಗಳು

  • ಒಟಿಟಿಗೆ ಬರುತ್ತಿದೆ ಸೂರ್ಯ ನಟನೆಯ ‘ಸೀನ್’
  • ‘ಸೀನ್’ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ರಿಲೀಸ್ ಆಗಲಿದೆ
  • ಭಾರಿ ದೊಡ್ಡ ಮೊತ್ತಕ್ಕೆ ಸಿನಿಮಾದ ಹಕ್ಕು ಮಾರಾಟಾಗಿದೆ

ಸೂರ್ಯ ನಟನೆಯ ‘ಸೀನ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ‘ರಾಮಾಯಾಣ’ ಅಂತಹ ಭಾರಿ ಬಜೆಟ್​​ನ, ಹಲವು ಸ್ಟಾರ್​​ಗಳಿರುವ ಸಿನಿಮಾಗಳ ಜೊತೆಯಲ್ಲಿ ರಿಲೀಸ್ ಆದರೂ ಸಹ ‘ಸೀನ್’ ದೊಡ್ಡ ಹಿಟ್ ಆಗಿದೆ. ತನ್ನ ಕಂಟೆಂಟ್ ಕಾರಣಕ್ಕೆ ಈ ಸಿನಿಮಾ ಯಶಸ್ಸು ಗಳಿಸುತ್ತಿದೆ. ಈ ವರ್ಷದಲ್ಲಿ ಬಿಡುಗಡೆ ಆಗಿರುವ ಸೂರ್ಯ ಅವರ ಮೂರನೇ ಸಿನಿಮಾ ಇದಾಗಿದ್ದು, ಈ ಸಿನಿಮಾ ಸಹ ಭಾರಿ ದೊಡ್ಡ ಹಿಟ್ ಆಗಿದೆ. ಇದೀಗ ಸಿನಿಮಾದ ಒಟಿಟಿ ರಿಲೀಸ್ ಸಹ ಖಾತ್ರಿ ಆಗಿದ್ದು, ಭಾರಿ ಮೊತ್ತಕ್ಕೆ ಸಿನಿಮಾದ ಒಟಿಟಿ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ.

‘ಸೀನ್’ ಸಿನಿಮಾ ಕಳ್ಳ ಮತ್ತು ಪೊಲೀಸ್ ಕತೆಯನ್ನು ಹೊಂದಿದೆ. ಆದರೆ ಈ ಕಳ್ಳ-ಪೊಲೀಸ್ ಕತೆ ಬಹಳ ಭಿನ್ನವಾಗಿದೆ. ಇದೇ ಕಾರಣಕ್ಕೆ ಸಿನಿಮಾ ಜನಮನ ಸೆಳೆಯುತ್ತಿದೆ. ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಈಗಾಗಲೇ 300 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಒಟಿಟಿ ಡೀಲ್ ಇತ್ತೀಚೆಗಷ್ಟೆ ಕುದುರಿದ್ದು ಬರೋಬ್ಬರಿ 88 ಕೋಟಿ ರೂಪಾಯಿಗೆ ಸಿನಿಮಾದ ಒಟಿಟಿ ಹಕ್ಕು ಮಾರಾಟವಾಗಿದೆ.

Loading...

ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಒಟಿಟಿ ದೈತ್ಯ ನೆಟ್​​ಫ್ಲಿಕ್ಸ್​​, ‘ಸೀನ್’ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು 88 ಕೋಟಿ ರೂಪಾಯಿಗೆ ಖರೀದಿಸಿದೆ. ‘ಸೀನ್’ ಸಿನಿಮಾ ಡಿಸೆಂಬರ್ 4 ರಂದು ನೆಟ್​​ಫ್ಲಿಕ್ಸ್​​ನಲ್ಲಿ ರಿಲೀಸ್ ಆಗಲಿದೆ. ತಮಿಳಿನ ಈ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ತಮಿಳು ಸೇರಿದಂತೆ ಇತರೆ ಕೆಲವು ಭಾಷೆಗಳಲ್ಲಿ ಸಹ ವೀಕ್ಷಣೆಗೆ ಲಭ್ಯವಾಗಲಿದೆ. ‘ಸೀನ್’ ಒಟಿಟಿಗೆ ಚೆನ್ನಾಗಿ ಹೊಂದುವ ಸಿನಿಮಾ ಎನ್ನಲಾಗುತ್ತಿದ್ದು, ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ:‘ಸೀನ್’ ಸಿನಿಮಾ ಯಶಸ್ಸು: ಸಹನಟನಿಗೆ 9 ಲಕ್ಷ ರೂ. ಮೌಲ್ಯದ ವಾಚ್ ನೀಡಿದ ಸೂರ್ಯ

ಸೂರ್ಯ ನಟನೆಯ ‘ಸೀನ್’ ಸಿನಿಮಾನಲ್ಲಿ ನಾಜರಿಯಾ ನಾಯಕಿ. ಮಲಯಾಳಂನ ಸ್ಟಾರ್ ಯುವನಟ ನಸ್ಲಿನ್ ವಿಲನ್ ಆಗಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಕೊಲೆಯ ತನಿಖೆ, ಲವ್ ಸ್ಟೋರಿ ಇನ್ನೂ ಕೆಲವು ಕೋನಗಳಿವೆ. ‘ಸೀನ್’ ಸಾಮಾನ್ಯ ಪೊಲೀಸ್ ಕತೆಯುಳ್ಳ ಸಿನಿಮಾ ಆಗಿರದೆ ಒಂದು ಸಂಪೂರ್ಣ ಭಿನ್ನ ರೀತಿಯ ಸಿನಿಮಾ ಎನ್ನಲಾಗುತ್ತಿದೆ. ಈ ಹಿಂದೆ ಮಲಯಾಳಂನ ಸೂಪರ್ ಹಿಟ್ ಸಿನಿಮಾಗಳಾದ ‘ರೋಮಾಂಚಂ’, ‘ಆವೇಶಂ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಜೀತು ಮಾಧವನ್ ಅವರು ‘ಸೀನ್’ ಸಿನಿಮಾ ಅನ್ನು ನಿರ್ದೇಶನ ಮಾಡಿದ್ದಾರೆ.

ಈ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿರುವ ಸೂರ್ಯ ಅವರ ಮೂರನೇ ಸಿನಿಮಾ ಇದಾಗಿದೆ. ಇದೇ ವರ್ಷದಲ್ಲಿ ಸೂರ್ಯ ನಟನೆಯ ‘ಕರುಪ್ಪು’ ಹಾಗೂ ‘ವಿಶ್ವನಾಥ್ ಆಂಡ್ ಸನ್ಸ್’ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿದ್ದವು. ಇದೀಗ ‘ಸೀನ್’ ಸಿನಿಮಾ ಸಹ ರಿಲೀಸ್ ಆಗಿ ದೊಡ್ಡ ಹಿಟ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us