
ನಟ ಸೂರ್ಯ (Suriya) ಹಾಗೂ ಕಾರ್ತಿ ಅಣ್ಣ ತಮ್ಮ. ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಖೈದಿ 2’ ಸಿನಿಮಾದಲ್ಲಿ ಇವರು ಮುಖಾಮುಖಿ ಆಗಲಿದ್ದಾರೆ. ಇಂದು ಕಾರ್ತಿ (ಮೇ 25) ಬರ್ತ್ಡೇ. ವಿಶೇಷ ಎಂದರೆ ಸೂರ್ಯ ಅವರು ತಮ್ಮನಿಗಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಮೇಯಳಗನ್’ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಕಾರ್ತಿ ಹಾಗೂ ಅರವಿಂದ್ ಸ್ವಾಮಿ ಮುಖ್ಯಭೂಮಿಕೆಯಲ್ಲಿ ಇದ್ದಾರೆ.
ಸೂರ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕಾರ್ತಿ ಅವರು ಎತ್ತಿನ ಎದುರು ನಿಂತಿದ್ದಾರೆ. ಅವರು ನಗುತ್ತಿದ್ದಾರೆ. ಇದು ಹಳ್ಳಿಯ ಕಥೆ ಇರಬಹುದು ಎನ್ನಲಾಗುತ್ತಿದೆ. ಈ ಮೂಲಕ ಬರ್ತ್ಡೇ ವಿಶ್ ತಿಳಿಸಿದ್ದಾರೆ. ಈ ಪೋಸ್ಟರ್ಗೆ ನಾನಾ ರೀತಿಯ ಕಮೆಂಟ್ ಬರುತ್ತಿದೆ. ಮತ್ತೊಂದು ಪೋಸ್ಟರ್ನಲ್ಲಿ ಅರವಿಂದ್ ಸ್ವಾಮಿ ಅವರು ಸೈಕಲ್ ತುಳಿಯುತ್ತಿದ್ದು, ಕಾರ್ತಿ ಸೈಕಲ್ ಕ್ಯಾರಿಯರ್ ಮೇಲೆ ಕುಳಿತಿದ್ದಾರೆ.
One from our Hearts..! #Meiyazhagan #மெய்யழகன் @Karthi_Offl #Arvindswamy #PremKumar #Jyotika #GovindVasantha @SDsridivya @rajsekarpandian @2D_ENTPVTLTD @SakthiFilmFctry pic.twitter.com/yxee04Bq8D
— Suriya Sivakumar (@Suriya_offl) May 24, 2024
‘ಪ್ರೇಮ್ಕುಮಾರ್’ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಸೇತುಪತಿ ಹಾಗೂ ತ್ರಿಷಾ ಕೃಷ್ಣನ್ ನಟನೆಯ ‘96’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ‘96’ ಬಳಿಕ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದು. ಈ ಚಿತ್ರಕ್ಕೆ ‘96’ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಗೋವಿಂದ್ ವಸಂತ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದ ರೀತಿಯೇ ಈ ಸಿನಿಮಾಗೂ ಯಾವುದೇ ಸ್ಟಂಟ್ ಮಾಸ್ಟರ್ ಇಲ್ಲ. ಸೂರ್ಯ ಅವರು ‘ಕಂಗುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ದ್ವಿಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಿರುವಾಗಲೇ ಅವರು ತಮ್ಮನ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
ಇದನ್ನೂ ಓದಿ: ಎರಡು ಭಿನ್ನ ಅವತಾರದಲ್ಲಿ ಸೂರ್ಯ; ‘ಕಂಗುವ’ ಚಿತ್ರದಲ್ಲಿ ಇರಲಿದೆ ದ್ವಿಪಾತ್ರ
‘ವಿಕ್ರಮ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದು ‘ಖೈದಿ’ ಚಿತ್ರದ ಸೀಕ್ವೆಲ್. ‘ವಿಕ್ರಮ್’ ಚಿತ್ರದಲ್ಲಿ ಕಾರ್ತಿ ಅವರ ಧ್ವನಿ ಮಾತ್ರ ಕೇಳುತ್ತದೆ. ಕ್ಲೈಮ್ಯಾಕ್ಸ್ನಲ್ಲಿ ಸೂರ್ಯ ಅವರ ಎಂಟ್ರಿ ಆಗುತ್ತದೆ. ಈಗ ‘ಖೈದಿ 2’ ಸಿನಿಮಾ ಬರಬೇಕಿದೆ. ಈ ಚಿತ್ರದಲ್ಲಿ ಸೂರ್ಯ ಹಾಗೂ ಕಾರ್ತಿ ಮುಖಾಮುಖಿ ಆಗಲಿದ್ದಾರೆ. ಇದನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.