‘ಹಣಕ್ಕಾಗಿ ಆ ರೀತಿಯ ಪಾತ್ರಗಳನ್ನು ಮಾಡಬೇಕಾಯಿತು’; ಅಸಹ್ಯಪಟ್ಟುಕೊಂಡ ನೀನಾ ಗುಪ್ತಾ
‘ನಾನು ದೆಹಲಿಯಿಂದ ಬಂದವಳು. ನನಗೆ ಆರಂಭದಲ್ಲಿ ಮುಂಬೈ ಹೊಂದಾಣಿಕೆ ಆಗಲಿಲ್ಲ. ನಾನು ಮರಳಿ ದೆಹಲಿಗೆ ಹೋಗಿ ಪಿಚ್ಡಿ ಪೂರ್ಣಗೊಳಸಬೇಕು ಎಂದುಕೊಂಡೆ. ಆದರೆ, ಈ ನಗರ ನನ್ನನ್ನು ಬಿಡಲಿಲ್ಲ. ಅನೇಕ ಬಾರಿ ಈ ರೀತಿ ಆಗಿದೆ’ ಎಂದಿದ್ದಾರೆ ಅವರು.

ನೀನಾ ಗುಪ್ತಾ (Neena Gupta) ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಅವರು ‘ಪಂಚಾಯತ್’ ಸೀರಿಸ್ನಲ್ಲಿ ಮಂಜು ದೇವಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ವೆಬ್ ಸೀರಿಸ್ಗೆ ಮೂರನೇ ಸೀಸನ್ ಬರುತ್ತಿದೆ. ಮೇ 28ರಂದು ‘ಪಂಚಾಯತ್ 3’ ರಿಲೀಸ್ ಆಗಲಿದೆ. ಈ ಮಧ್ಯೆ ಅವರು ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ನೀನಾ ಅವರು ಹಲವು ರೀತಿಯ ಪಾತ್ರಗಳನ್ನು ಮಾಡಿದ್ದಾತೆ. ಇದರಲ್ಲಿ ಕೆಲವು ಕೆಟ್ಟ ಪಾತ್ರಗಳೂ ಇವೆ. ಆ ರೀತಿಯ ಪಾತ್ರಗಳ ಆಯ್ಕೆಗೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
1982ರಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ನೀನಾ ಗುಪ್ತಾ ಆ್ಯಕ್ಟೀವ್ ಆಗಿದ್ದಾರೆ. ಮೊದಲು ನಟಿಯಾಗಿ ಮಿಂಚಿದ್ದ ಅವರು ಈಗ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ. ‘ನಾನು ದೆಹಲಿಯಿಂದ ಬಂದವಳು. ನನಗೆ ಆರಂಭದಲ್ಲಿ ಮುಂಬೈ ಹೊಂದಾಣಿಕೆ ಆಗಲಿಲ್ಲ. ನಾನು ಮರಳಿ ದೆಹಲಿಗೆ ಹೋಗಿ ಪಿಚ್ಡಿ ಪೂರ್ಣಗೊಳಸಬೇಕು ಎಂದುಕೊಂಡೆ. ಆದರೆ, ಈ ನಗರ ನನ್ನನ್ನು ಬಿಡಲಿಲ್ಲ. ಅನೇಕ ಬಾರಿ ಈ ರೀತಿ ಆಗಿದೆ’ ಎಂದಿದ್ದಾರೆ ಅವರು.
‘ಮೊದಲು ಹಣದ ಅವಶ್ಯಕತೆ ತುಂಬಾನೇ ಇತ್ತು. ಕೆಟ್ಟ ಪಾತ್ರ, ಸಿನಿಮಾಗಳನ್ನು ಮಾಡಬೇಕಾಯಿತು. ಈ ಸಿನಿಮಾ ರಿಲೀಸ್ ಆಗದೇ ಇರಲಿ ಎಂದು ದೇವರ ಬಳಿ ಕೋರಿಕೊಳ್ಳುತ್ತಿದ್ದೆ. ನಾನು ಈಗ ಸಿನಿಮಾ ಆಫರ್ನ ತಿರಸ್ಕರಿಸಬಹುದು. ನನಗೆ ಇಷ್ಟವಾದ ಸಿನಿಮಾಗಳನ್ನು ಮಾತ್ರ ಮಾಡುತ್ತೇನೆ’ ಎಂದಿದ್ದಾರೆ ನೀನಾ ಗುಪ್ತಾ.
ಇದನ್ನೂ ಓದಿ: ‘ನಿನಗೆಂದೂ ನಾಯಕಿ ಪಾತ್ರ ಸಿಗುವುದಿಲ್ಲ’ ಗಿರೀಶ್ ಕಾರ್ನಾಡ್ ಹೇಳಿದ್ದ ಮಾತು ನೆನಪಿಸಿಕೊಂಡ ನೀನಾ ಗುಪ್ತಾ
‘ಎಲ್ಲರೂ ನನ್ನನ್ನು ರೆಬೆಲ್ ಎಂದು ಏಕೆ ಕರೆಯುತ್ತಾರೆ ಗೊತ್ತಿಲ್ಲ. ನಾನು ಮುಗ್ಧ ಪಾತ್ರಗಳನ್ನು ಮಾಡಿದ್ದೇನೆ. ನಾನು ಸ್ಟ್ರಾಂಗ್ ಅಥವಾ ಗ್ಲಾಮರ್ ಪಾತ್ರ ಮಾಡಿಲ್ಲ. ನಾನು ಗಂಡನಿಲ್ಲದ ಮಹಿಳೆ ಎಂದು ಮಾಧ್ಯಮದವರು ಬಿಂಬಿಸಿದರು. ಆ ರೀತಿಯ ಇಮೇಜ್ ಕ್ರಿಯೇಟ್ ಆಯಿತು ಹೀಗಾಗಿ ಆ ರೀತಿಯ ಪಾಯ್ರ ಸಿಕ್ಕಿಲ್ಲ. ನಾನು ಸತ್ತ ಬಳಿಕವೂ ಅವರು ಬಿಡಲ್ಲ. ಬೋಲ್ಡ್ ನೀನಾ ಗುಪ್ತಾ ಇನ್ನಿಲ್ಲ ಎಂದೇ ಬರೆಯುತ್ತಾರೆ’ ಎಂದು ಬೇಸರ ಹೊರಹಾಕಿದ್ದಾರೆ ಅವರು. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಪಂಚಾಯತ್ 3’ ಸೀರಿಸ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




