ತಮ್ಮನ ಚಿತ್ರಕ್ಕೆ ಅಣ್ಣನ ಬಂಡವಾಳ; ಕಾರ್ತಿ ಬರ್ತ್ಡೇ ದಿನ ಸೂರ್ಯನ್ ಸರ್ಪ್ರೈಸ್ ಘೋಷಣೆ
‘ಪ್ರೇಮ್ಕುಮಾರ್’ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಸೇತುಪತಿ ಹಾಗೂ ತ್ರಿಷಾ ಕೃಷ್ಣನ್ ನಟನೆಯ ‘96’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ‘96’ ಬಳಿಕ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದು.

ನಟ ಸೂರ್ಯ (Suriya) ಹಾಗೂ ಕಾರ್ತಿ ಅಣ್ಣ ತಮ್ಮ. ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಖೈದಿ 2’ ಸಿನಿಮಾದಲ್ಲಿ ಇವರು ಮುಖಾಮುಖಿ ಆಗಲಿದ್ದಾರೆ. ಇಂದು ಕಾರ್ತಿ (ಮೇ 25) ಬರ್ತ್ಡೇ. ವಿಶೇಷ ಎಂದರೆ ಸೂರ್ಯ ಅವರು ತಮ್ಮನಿಗಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಮೇಯಳಗನ್’ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಕಾರ್ತಿ ಹಾಗೂ ಅರವಿಂದ್ ಸ್ವಾಮಿ ಮುಖ್ಯಭೂಮಿಕೆಯಲ್ಲಿ ಇದ್ದಾರೆ.
ಸೂರ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕಾರ್ತಿ ಅವರು ಎತ್ತಿನ ಎದುರು ನಿಂತಿದ್ದಾರೆ. ಅವರು ನಗುತ್ತಿದ್ದಾರೆ. ಇದು ಹಳ್ಳಿಯ ಕಥೆ ಇರಬಹುದು ಎನ್ನಲಾಗುತ್ತಿದೆ. ಈ ಮೂಲಕ ಬರ್ತ್ಡೇ ವಿಶ್ ತಿಳಿಸಿದ್ದಾರೆ. ಈ ಪೋಸ್ಟರ್ಗೆ ನಾನಾ ರೀತಿಯ ಕಮೆಂಟ್ ಬರುತ್ತಿದೆ. ಮತ್ತೊಂದು ಪೋಸ್ಟರ್ನಲ್ಲಿ ಅರವಿಂದ್ ಸ್ವಾಮಿ ಅವರು ಸೈಕಲ್ ತುಳಿಯುತ್ತಿದ್ದು, ಕಾರ್ತಿ ಸೈಕಲ್ ಕ್ಯಾರಿಯರ್ ಮೇಲೆ ಕುಳಿತಿದ್ದಾರೆ.
One from our Hearts..! #Meiyazhagan #மெய்யழகன் @Karthi_Offl #Arvindswamy #PremKumar #Jyotika #GovindVasantha @SDsridivya @rajsekarpandian @2D_ENTPVTLTD @SakthiFilmFctry pic.twitter.com/yxee04Bq8D
— Suriya Sivakumar (@Suriya_offl) May 24, 2024
‘ಪ್ರೇಮ್ಕುಮಾರ್’ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಸೇತುಪತಿ ಹಾಗೂ ತ್ರಿಷಾ ಕೃಷ್ಣನ್ ನಟನೆಯ ‘96’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ‘96’ ಬಳಿಕ ಅವರು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದು. ಈ ಚಿತ್ರಕ್ಕೆ ‘96’ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಗೋವಿಂದ್ ವಸಂತ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದ ರೀತಿಯೇ ಈ ಸಿನಿಮಾಗೂ ಯಾವುದೇ ಸ್ಟಂಟ್ ಮಾಸ್ಟರ್ ಇಲ್ಲ. ಸೂರ್ಯ ಅವರು ‘ಕಂಗುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ದ್ವಿಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಿರುವಾಗಲೇ ಅವರು ತಮ್ಮನ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
ಇದನ್ನೂ ಓದಿ: ಎರಡು ಭಿನ್ನ ಅವತಾರದಲ್ಲಿ ಸೂರ್ಯ; ‘ಕಂಗುವ’ ಚಿತ್ರದಲ್ಲಿ ಇರಲಿದೆ ದ್ವಿಪಾತ್ರ
‘ವಿಕ್ರಮ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದು ‘ಖೈದಿ’ ಚಿತ್ರದ ಸೀಕ್ವೆಲ್. ‘ವಿಕ್ರಮ್’ ಚಿತ್ರದಲ್ಲಿ ಕಾರ್ತಿ ಅವರ ಧ್ವನಿ ಮಾತ್ರ ಕೇಳುತ್ತದೆ. ಕ್ಲೈಮ್ಯಾಕ್ಸ್ನಲ್ಲಿ ಸೂರ್ಯ ಅವರ ಎಂಟ್ರಿ ಆಗುತ್ತದೆ. ಈಗ ‘ಖೈದಿ 2’ ಸಿನಿಮಾ ಬರಬೇಕಿದೆ. ಈ ಚಿತ್ರದಲ್ಲಿ ಸೂರ್ಯ ಹಾಗೂ ಕಾರ್ತಿ ಮುಖಾಮುಖಿ ಆಗಲಿದ್ದಾರೆ. ಇದನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



