ಸುಶಾಂತ್ ಸಿಂಗ್ ರಜಪೂತ್ ನಮ್ಮನ್ನು ಅಗಲಿ ಇಂದಿಗೆ (ಜೂನ್ 14) ಒಂದು ವರ್ಷ ಕಳೆದಿದೆ. ಲಕ್ಷಾಂತರ ಅಭಿಮಾನಿಗಳನ್ನು ಸುಶಾಂತ್ ಬಿಟ್ಟು ಹೋಗಿದ್ದಾರೆ. ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ತನಿಖೆ ಪ್ರಗತಿಯಲ್ಲಿದೆ. ಇನ್ನು, ಅವರು ಸಾವಿಗೂ ಮೊದಲು ತಮ್ಮ ಹೆಸರನ್ನೇ ತಾವು ಗೂಗಲ್ ಮಾಡಿಕೊಂಡಿದ್ದರಂತೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸುಶಾಂತ್ ಸಿಂಗ್ ಅವರ ಶವ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ ಜೂನ್ 14ರಂದು ಪತ್ತೆ ಆಗಿತ್ತು. ಅವರು ಮೃತಪಟ್ಟ ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ, ಸುದ್ದಿ ವಾಹಿನಿಗಳಲ್ಲಿ ಸಾಕಷ್ಟು ವಿಚಾರಗಳು ಹರಿದಾಡಿದ್ದವು. ಇದರಲ್ಲಿ ಸುಶಾಂತ್ ಜೂನ್ 13ರ ರಾತ್ರಿ ತಮ್ಮ ಹೆಸರನ್ನು ಸರ್ಚ್ ಮಾಡಿದ್ದರು ಎಂಬುದು ಕೂಡ ಒಂದಾಗಿತ್ತು.
ಸುಶಾಂತ್ ಸಿಂಗ್ ಸಾಯುವುದಕ್ಕೂ ಮುನ್ನ ಎರಡು ಗಂಟೆ ತಮ್ಮ ಹೆಸರನ್ನು ಸರ್ಚ್ ಮಾಡಿದ್ದರಂತೆ. ಯಾವಯಾವ ವೆಬ್ಸೈಟ್ಗಳಲ್ಲಿ ತಮ್ಮ ಬಗ್ಗೆ ಯಾವ ರೀತಿಯ ಸುದ್ದಿ ಪ್ರಕಟಿಸಿದ್ದಾರೆ ಎಂಬುದನ್ನು ಅವರು ನೋಡಿದ್ದರಂತೆ. ಹೀಗೊಂದು ವಿಚಾರ ವೈರಲ್ ಆಗಿತ್ತು. ಆದರೆ, ನಂತರ ಆಗಿದ್ದೇ ಬೇರೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರದ್ದು ಕೊಲೆ ಎನ್ನುವ ಬಗ್ಗೆ ಚರ್ಚೆ ಜೋರಾಯಿತು. ಸುಶಾಂತ್ ಸಾವಿಗೆ ಬಾಲಿವುಡ್ ದಿಗ್ಗಜರೇ ಕಾರಣ ಎನ್ನುವ ಮಾತು ಕೇಳಿ ಬಂತು. ಆರಂಭದಲ್ಲಿ ಈ ಪ್ರಕರಣವನ್ನು ಮುಂಬೈ ಪೊಲೀಸರು ತೆಗೆದುಕೊಂಡಿದ್ದರು. ಸದ್ಯ, ಸಿಬಿಐ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಸುಶಾಂತ್ ಸಿಂಗ್ ರಜಪೂತ್ ಅವರನ್ನು ಇಂದು ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ನೆನೆಯುತ್ತಿದ್ದಾರೆ. ಅವರ ಫೋಟೋ, ಸಿನಿಮಾದ ಡೈಲಾಗ್, ಅವರ ನಟನೆಯ ಚಿತ್ರದ ಕ್ಲಿಪ್ಗಳನ್ನು ಹಂಚಿಕೊಂಡು ಸುಶಾಂತ್ ಅವರ ನೆನಪನ್ನು ಮಾಡಿಕೊಳ್ಳುತ್ತಿದ್ದಾರೆ. ಸುಶಾಂತ್ ನಮ್ಮನ್ನು ಬಿಟ್ಟು ಹೋದರೂ, ಅವರ ಒಳ್ಳೆತನ ನಮ್ಮನ್ನೊಂದಿಗೆ ಇರುತ್ತದೆ ಅನ್ನೋದು ಅನೇಕರ ಭಾವನೆ.
ಇದನ್ನೂ ಓದಿ:
ಬಾಲಿವುಡ್ನಲ್ಲಿ ಸ್ಟಾರ್ ಆದಮೇಲೂ ಸುಶಾಂತ್ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?
SSR Case: ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?
Published On - 7:17 am, Mon, 14 June 21