ಮೈಸೂರು ಸ್ಯಾಂಡಲ್ ಸೋಪ್​ಗೆ ತಮನ್ನಾ ರಾಯಭಾರಿ; ಕನ್ನಡದ ನಟಿಯರು ಸಿಗಲಿಲ್ಲವಾ ಎಂದು ನೆಟ್ಟಿಗರ ಪ್ರಶ್ನೆ

ಮೈಸೂರು ಸ್ಯಾಂಡಲ್ ಸೋಪ್ ತನ್ನ ಹೊಸ ಬ್ರ್ಯಾಂಡ್ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದಕ್ಕಾಗಿ ಕೋಟಿ ಕೋಟಿ ಸಂಭಾವನೆ ನೀಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕನ್ನಡ ನಟಿಯರನ್ನು ಆಯ್ಕೆ ಮಾಡದಿರುವುದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈಸೂರು ಸ್ಯಾಂಡಲ್ ಸೋಪ್​ಗೆ ತಮನ್ನಾ ರಾಯಭಾರಿ; ಕನ್ನಡದ ನಟಿಯರು ಸಿಗಲಿಲ್ಲವಾ ಎಂದು ನೆಟ್ಟಿಗರ ಪ್ರಶ್ನೆ
ತಮನ್ನಾ

Updated on: May 22, 2025 | 1:38 PM

ಕರ್ನಾಟಕದ ಸರ್ಕಾರದ ಒಡೆತನದಲ್ಲಿರುವ ಮೈಸೂರು ಸ್ಯಾಂಡಲ್ ಸೋಪ್​ಗೆ (Mysore Sandal Soap) ಹೊಸ ರಾಯಭಾರಿ ನೇಮಕ ಆಗಿದೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಈ ಬ್ರ್ಯಾಂಡ್​ಗೆ ಪ್ರಚಾರ ರಾಯಭಾರಿ ಆಗಿರೋದು ವಿಶೇಷ. ಇದಕ್ಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ತಮನ್ನಾ ಬದಲು ಕನ್ನಡದವರನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಅವರ ಸಂಭಾವನೆ ವಿಚಾರವೂ ಅನೇಕ ಹುಬ್ಬೇರುವಂತೆ ಮಾಡಿದೆ.

ತಮನ್ನಾ ಭಾಟಿಯಾ ಅವರು ಬಹುಭಾಷೆಯಲ್ಲಿ ಖ್ಯಾತಿ ಗಳಿಸಿದ್ದಾರೆ. ಇಡೀ ದೇಶಾದ್ಯಂತ ಅವರ ಹೆಸರು ಚಾಲ್ತಿಯಲ್ಲಿದೆ. ಅಲ್ಲದೆ, ಗ್ಲಾಮರ್​ನಲ್ಲಿ ಅವರನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಈ ಕಾರಣಕ್ಕೆ ಅವರಿಗೆ ಮಿಲ್ಕಿ ಬ್ಯೂಟಿ ಎನ್ನುವ ಹೆಸರು ಇದೆ. ಅವರನ್ನು ನೇಮಕ ಮಾಡಿಕೊಂಡರೆ ಈ ಬ್ರ್ಯಾಂಡ್ ಉತ್ಪನ್ನಗಳ ಜನಪ್ರಿಯತೆ ಮತ್ತಷ್ಟು ಹೆಚ್ಚಬಹುದು ಎಂಬುದು ಸರ್ಕಾರದ ಆಲೋಚನೆ ಇರಬಹುದು.

ಇದನ್ನೂ ಓದಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು
‘ತಿಂಗಳಿಗೆ 40 ಲಕ್ಷ ಜೀವನಾಂಶ ಕೊಡಿ’; ಬೇಡಿಕೆ ಇಟ್ಟ ಜಯಮ್​ ರವಿ ಪತ್ನಿ
‘ಸೀತಾ ರಾಮ’ಗೆ ಕೊನೆಯ ದಿನದ ಶೂಟಿಂಗ್; ಸೀರಿಯಲ್ ಪೂರ್ಣಗೊಳ್ಳಲು ಕಾರಣವೇನು?

ಆರು ಕೋಟಿ ರೂಪಾಯಿ

ಈಗಾಗಲೇ ಅನೇಕ ಬ್ಯೂಟಿ ಬ್ರ್ಯಾಂಡ್​ಗಳು ತಮನ್ನಾ ಭಾಟಿಯಾ ಜೊತೆ ಒಪ್ಪಂದ ಮಾಡಿಕೊಂಡಿವೆ. ಈಗ ಮೈಸೂರು ಸ್ಯಾಂಡಲ್​ಸೋಪ್ ಕೂಡ ಈ ನಟಿಯ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಎರಡು ವರ್ಷಗಳ ಕಾಲ ತಮನ್ನಾ ಜೊತೆ ಕರ್ನಾಟ ಸರ್ಕಾರ ಒಪ್ಪಂದ ಇರಲಿದೆ. ಇದಕ್ಕಾಗಿ ನಟಿಗೆ ಬರೋಬ್ಬರಿ 6.20 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುತ್ತೋಲೆ ವೈರಲ್ ಆಗಿದೆ.

Tamanna

ಸೋಶಿಯಲ್ ಮೀಡಿಯಾದಲ್ಲಿ ಟೀಕೆ

ದೀಪಿಕಾ ಪಡುಕೋಣೆ ಅವರು ಕರ್ನಾಟಕದಿಂದ ಬಾಲಿವುಡ್​ಗೆ ಹೋದವರು. ಕನ್ನಡದಲ್ಲಿ ಈ ರೀತಿ ಸಾಕಷ್ಟು ನಟಿಯರು ಇದ್ದಾರೆ. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು ಎನ್ನುವ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.

ಇದನ್ನೂ ಓದಿ: ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಡಲು ಮುಂದಾದ ತಮನ್ನಾ ಭಾಟಿಯಾ

ತಮನ್ನಾ ಜನಪ್ರಿಯತೆ

ನಟಿ ತಮನ್ನಾ ಭಾಟಿಯಾ ಅವರು ದೇಶಾದ್ಯಂತ ಜನಪ್ರಿಯತೆ ಪಡೆದಿದ್ದಾರೆ. ವಿಶೇಷ ಹಾಡುಗಳ ಮೂಲಕ ಅವರು ಇತ್ತೀಚೆಗೆ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಕನ್ನಡದಲ್ಲಿ ಅವರು ‘ಜಾಗ್ವಾರ್’ ಹಾಗೂ ‘ಕೆಜಿಎಫ್’ ಸಿನಿಮಾದ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ‘ರೇಡ್ 2’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.