ತಮನ್ನಾ-ವಿಜಯ್ ಬ್ರೇಕಪ್​ಗೆ ಕಾರಣ ಆಯ್ತು ಮದುವೆ ವಿಚಾರ?

ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರ ಬೇರ್ಪಾಟಿನ ಸುದ್ದಿ ಚಿತ್ರರಂಗದಲ್ಲಿ ಆಘಾತ ಮೂಡಿಸಿದೆ. ಮದುವೆಯ ಬಗ್ಗೆ ತಮನ್ನಾ ಅವರ ಆಸೆಯಿಂದಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಬೇರ್ಪಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಒಳ್ಳೆಯ ಸ್ನೇಹಿತರಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.

ತಮನ್ನಾ-ವಿಜಯ್ ಬ್ರೇಕಪ್​ಗೆ ಕಾರಣ ಆಯ್ತು ಮದುವೆ ವಿಚಾರ?
ವಿಜಯ್-ತಮನ್ನಾ
Edited By:

Updated on: Mar 06, 2025 | 11:10 AM

ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ (Vijay Verma) ಇಬ್ಬರೂ ಬೇರೆ ಆಗಿರುವ ವಿಚಾರವು ತಿಳಿದೇ ಇದೆ. ಈ ಜೋಡಿ ಕೆಲವು ಕಾಲ ಒಟ್ಟಾಗಿ ಸುತ್ತಾಟ ನಡೆಸಿ ಈಗ ಬೇರೆ ಆದರು. ಒಟ್ಟಾಗಿ ಇದ್ದ ಸಂದರ್ಭದಲ್ಲಿ ವಿಜಯ್ ವರ್ಮಾ ಹಾಗೂ ತಮನ್ನಾ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾ ಇದ್ದರು. ಈಗ ಇಬ್ಬರೂ ಗೆಳೆಯರಾಗಿ ಮುಂದುವರಿಯುತ್ತಾ ಇದ್ದಾರೆ. ಇವರಿಬ್ಬರೂ ಬೇರೆ ಆಗಲು ಕಾರಣ ನೀಡಿಲ್ಲ. ಈಗ ಇವರ ಬ್ರೇಕಪ್​ಗೆ ಕಾರಣ ಏನು ಎಂಬುದು ತಿಳಿದು ಬಂದಿದೆ.

ತಮನ್ನಾ ಭಾಟಿಯಾ ಅವರಿಗೆ ಈಗ 35 ವರ್ಷ. ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರೋ ಅವರು ತಮ್ಮದೇ ಆದ ಸಂಸಾರ ಕಟ್ಟಿಕೊಳ್ಳುವ ಆಸೆ ಹೊಂದಿದ್ದರು. ಹೀಗಾಗಿ, ಮದುವೆ ಆಗುವ ಬಗ್ಗೆ ಆಲೋಚನೆ ಮಾಡಿದರು. ಆದರೆ, ಇದಕ್ಕೆ ವಿಜಯ್ ವರ್ಮಾ ರೆಡಿ ಇರಲಿಲ್ಲ ಎನ್ನಲಾಗಿದೆ. ಈ ವಿಚಾರ ಇಬ್ಬರ ಮಧ್ಯೆ ಸಾಕಷ್ಟು ಕಿತ್ತಾಟಕ್ಕೆ ಕಾರಣ ಆಯಿತು.

‘ಲಸ್ಟ್ ಸ್ಟೋರೀಸ್ 2’ ಚಿತ್ರದಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ ನಟಿಸಿದ್ದಾರೆ. ಇವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಇದೆ. ‘ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ವಾರದ ಹಿಂದೆ ಬೇರೆ ಆಗಿದ್ದಾರೆ. ಅವರು ಒಳ್ಳೆಯ ಗೆಳೆಯರಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ಮುಂದಿನ ಜೀವನಕ್ಕಾಗಿ ಇವರು ಬೇರೆ ಆಗಲೇಬೇಕಿತ್ತು’ ಎಂದು ಮೂಲಗಳು ಹೇಳಿರೋದಾಗಿ ವರದಿ ಆಗಿದೆ. ಆದರೆ, ಈ ಬಗ್ಗೆ ಈ ಜೋಡಿ ಮಾಹಿತಿ ನೀಡಿಲ್ಲ.

ಇದನ್ನೂ ಓದಿ
ತಮನ್ನಾ ಭಾಟಿಯಾ, ವಿಜಯ್ ವರ್ಮಾ ಬ್ರೇಕಪ್; ಇನ್ಮುಂದೆ ಕೇವಲ ಫ್ರೆಂಡ್ಸ್
2.40 ಕೋಟಿ ವಂಚನೆ ಪ್ರಕರಣ: ತಮನ್ನಾ ಭಾಟಿಯಾ, ಕಾಜಲ್​ಗೆ ಪೊಲೀಸರ ನೊಟೀಸ್
ಮಹಾಕುಂಭ ಮೇಳಕ್ಕೆ ಜೊತೆಯಾಗಿ ತೆರಳಿದ ವಿರಾಟ್ ಕೊಹ್ಲಿ-ತಮನ್ನಾ ಭಾಟಿಯಾ?

ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ 2022ರಲ್ಲಿ ಡೇಟಿಂಗ್ ಆರಂಭಿಸಿದರು. ಇವರು ‘ಲಸ್ಟ್ ಸ್ಟೋರೀಸ್ 2’ ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು ಎನ್ನಲಾಗಿದೆ. ಈಗ ತಮನ್ನಾ ಅವರು ಶೀಘ್ರವೇ ವಿವಾಹ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ತಮನ್ನಾ ಭಾಟಿಯಾ, ವಿಜಯ್ ವರ್ಮಾ ಬ್ರೇಕಪ್; ಇನ್ಮುಂದೆ ಕೇವಲ ಫ್ರೆಂಡ್ಸ್

ವಿವಾಹದ ವಿಚಾರದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಆಲೋಚನೆ ಇರುತ್ತದೆ. ಕೆಲವರು ಒಬ್ಬರನ್ನು ಪ್ರೀತಿಸಿ, ಅವರನ್ನೇ ಮದುವೆ ಆಗಿ ಬೇಗ ಮಗು ಮಾಡಿಕೊಂಡು ಚಿತ್ರರಂಗದಿಂದ ದೂರ ಉಳಿದ ಉದಾಹರಣೆ ಇದೆ. ಇನ್ನೂ ಕೆಲವರು ಮದುವೆ ಬಗ್ಗೆ ಆತುರ ತೋರಿಸುತ್ತಿಲ್ಲ. ತಮನ್ನಾ ಭಾಟಿಯಾಗೆ ಈಗ ವಿವಾಹ ಆಗೋ ಆಲೋಚನೆ ಬಂದಂತೆ ಇದೆ. ಅವರು ಯಾರನ್ನು ವಿವಾಹ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:09 am, Thu, 6 March 25