Vijaykanth: ಖ್ಯಾತ ನಟ ವಿಜಯ್​ಕಾಂತ್ ಅವರ ಮೂರು ಬೆರಳು ಕತ್ತರಿಸಿದ ವೈದ್ಯರು..!

| Updated By: ಝಾಹಿರ್ ಯೂಸುಫ್

Updated on: Jun 22, 2022 | 7:28 PM

Tamil Actor-Politician Vijaykanth: ಕ್ಯಾಪ್ಟನ್ ಪ್ರಭಾಕರ್, ಮಹಾನಗರ ಕಾವಲ್, ವಾನತ್ತೆಪೊಲ, ರಮಣ, ಚಿನ್ನ ಗೌಂಡರ್, ನರಸಿಂಹ ಸೇರಿದಂತೆ 150 ಕ್ಕೂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Vijaykanth: ಖ್ಯಾತ ನಟ ವಿಜಯ್​ಕಾಂತ್ ಅವರ ಮೂರು ಬೆರಳು ಕತ್ತರಿಸಿದ ವೈದ್ಯರು..!
Captain Vijaykanth
Follow us on

ಕಾಲಿವುಡ್​ನ ಹೆಸರಾಂತ ನಟ, ಡಿಎಂಡಿಕೆ ಪಕ್ಷದ ಅಧ್ಯಕ್ಷರೂ ಆಗಿರುವ ವಿಜಯ್​ಕಾಂತ್ (Vijaykanth) ಇತ್ತೀಚೆಗೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಧುಮೇಹದಿಂದ ಬಳಲುತ್ತಿರುವ ಅವರನ್ನು ಪರಿಶೀಲಿಸಿರುವ ವೈದ್ಯರು, ಕಾಲು ಬೆರಳುಗಳಿಗೆ ರಕ್ತ ಪರಿಚಲನೆ ಸುವ್ಯವಸ್ಥಿತವಾಗಿಲ್ಲ, ಹೀಗಾಗಿ ಅದನ್ನು ಬೇರ್ಪಡಿಸಬೇಕೆಂದು ತಿಳಿಸಿದ್ದಾರೆ. ಅದರಂತೆ ಬಲಗಾಲಿನ ಮೂರು ಕಾಲ್ಬೆರಳುಗಳನ್ನು ಕತ್ತರಿಸಲಾಗಿದೆ ಎಂದು ಡಿಎಂಡಿಕೆ ಪಕ್ಷ ಬಹಿರಂಗಪಡಿಸಿದೆ. ಕೆಲ ವರ್ಷಗಳಿಂದ ವಿಜಯ್​ಕಾಂತ್ ಅವರ ಆರೋಗ್ಯ ಹದಗೆಟ್ಟಿದ್ದು, 2016ರಿಂದ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸದೇ ರಾಜಕೀಯದಿಂದ ದೂರವೇ ಉಳಿದಿದ್ದರು. ಇದೀಗ ಆಸ್ಪತ್ರೆಗೆ ದಾಖಲಾಗಿರುವ ಅಭಿಮಾನಿಗಳ ಪಾಲಿನ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿರುವ ವಿಜಯಕಾಂತ್ ಆರೋಗ್ಯದ ಬಗ್ಗೆ ಫ್ಯಾನ್ಸ್​, ಕಾರ್ಯಕರ್ತರು ತೀವ್ರ ಚಿಂತಾಕ್ರಾಂತರಾಗಿದ್ದಾರೆ.

ಈ ಬಗ್ಗೆ ಡಿಎಂಡಿಕೆ ಪಕ್ಷವು ಪ್ರಕಟಣೆ ಹೊರಡಿಸಿದ್ದು, ಕ್ಯಾಪ್ಟನ್ ವಿಜಯ್​ಕಾಂತ್ ಅವರನ್ನು ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಅವರು ಆರೋಗ್ಯವಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಯಾವುದೇ ವದಂತಿಗಳನ್ನು ನಂಬಬೇಡಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಮುಗಿದ ಬಳಿಕ ಒಂದೆರಡು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ ನಟನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಾನಾ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಇಂತಹ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳು ಮತ್ತು ಅನುಯಾಯಿಗಳಲ್ಲಿ ಡಿಎಂಡಿಕೆ ಪಕ್ಷವು ವಿನಂತಿಸಿದೆ.

ಕ್ಯಾಪ್ಟನ್ ಪ್ರಭಾಕರ್, ಮಹಾನಗರ ಕಾವಲ್, ವಾನತ್ತೆಪೊಲ, ರಮಣ, ಚಿನ್ನ ಗೌಂಡರ್, ನರಸಿಂಹ ಸೇರಿದಂತೆ 150 ಕ್ಕೂ ಚಿತ್ರಗಳಲ್ಲಿ ಅಭಿನಯಿಸಿರುವ ವಿಜಯ್​ಕಾಂತ್, ಒಂದು ಕಾಲದಲ್ಲಿ ಆ್ಯಕ್ಷನ್ ಹೀರೋ ಆಗಿ ಗುರುತಿಸಿಕೊಂಡಿದ್ದರು. ಇದಾದ ಬಳಿಕ ಕೌಟುಂಬಿಕ ಕಥಾಹಂದರದ ಸಿನಿಮಾಗಳಲ್ಲೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ
KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ
Rashmika Mandanna: ಮಿಂಚಿಂಗೊ ಮಿಂಚಿಂಗ್…ಸದ್ಯಕ್ಕಂತು ಕನ್ನಡಕ್ಕಿಲ್ಲ ರಶ್ಮಿಕಾ ಮಂದಣ್ಣ..!

ಈ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ವಿಜಯ್​ಕಾಂತ್ 2005ರಲ್ಲಿ ತಮ್ಮ ರಾಜಕೀಯ ಪಕ್ಷ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಮ್‌ಡಿಕೆ) ಅನ್ನ ಹುಟ್ಟುಹಾಕಿದ್ದರು. ಅಲ್ಲದೆ ಪಕ್ಷವು 2006 ರ ಚುನಾವಣೆಯಲ್ಲಿ ಸ್ಪರ್ಧಿಸಿ 8.4% ಮತಗಳನ್ನು ಪಡೆಯಿತು. ಈ ಮೂಲಕ ತಮಿಳುನಾಡಿನಲ್ಲಿ ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತಾ ನಂತರ ರಾಜಕೀಯದಲ್ಲಿ ಹೊಸ ಶಕೆಯನ್ನು ಆರಂಭಿಸಿದ್ದರು. ಆದರೆ ಆಗಿನ ಮುಖ್ಯಮಂತ್ರಿ ಜಯಲಲಿತಾ ಅವರೊಂದಿಗಿನ ವಿವಾದದ ನಂತರ, ಡಿಎಂಡಿಕೆ ಎಐಎಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತು. ಇನ್ನು 2016 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನೊಂದಿಗೆ ಡಿಎಂಡಿಕೆ ಪಕ್ಷದ ಅವನತಿ ಪ್ರಾರಂಭವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

 

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.