Arun Vaidyanathan: ‘ಕೊವಿಡ್​ ಮಸಾಲಾ ಫಿಲ್ಮ್​ ಇದ್ದಂತೆ; ಲಾಜಿಕ್ ಇರೋದೇ ಇಲ್ಲ’ ಎಂದ ನಿರ್ದೇಶಕ!

| Updated By: shivaprasad.hs

Updated on: Dec 29, 2021 | 8:06 AM

Kollywood: ತಮಿಳು ನಿರ್ದೇಶಕ ಅರುಣ್ ವೈದ್ಯನಾಥನ್ ಅವರಿಗೆ ಕೊರೊನಾ ಪಾಸಿಟಿಬವ್ ಬಂದಿದೆ. ಈ ಕುರಿತು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

Arun Vaidyanathan: ‘ಕೊವಿಡ್​ ಮಸಾಲಾ ಫಿಲ್ಮ್​ ಇದ್ದಂತೆ; ಲಾಜಿಕ್ ಇರೋದೇ ಇಲ್ಲ’ ಎಂದ ನಿರ್ದೇಶಕ!
ಅರುಣ್ ವೈದ್ಯನಾಥನ್
Follow us on

ವಿದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವಂತೆಯೇ, ಅಲ್ಲಿಂದ ಆಗಮಿಸಿದವರಲ್ಲೂ ಕೊರೊನಾ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇದಕ್ಕೆ ತಾರೆಯರೂ ಹೊರತಾಗಿಲ್ಲ. ಇತ್ತೀಚೆಗೆ ತಮಿಳು ಚಿತ್ರರಂಗದ ನಿರ್ದೇಶಕ ಅರುಣ್ ವೈದ್ಯನಾಥನ್ (Arun Vaidyanathan) ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಕುರಿತು ನಿರ್ದೇಶಕ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಅಮೇರಿಕಾ (US) ಟ್ರಿಪ್​ ಕಾರಣದಿಂದ ಕೊರೊನಾ ಬಂದಿದೆ ಎನ್ನುವುದನ್ನೂ ಹೇಳಿಕೊಂಡಿದ್ದಾರೆ. ಆದರೆ ಎಲ್ಲರ ಗಮನ ಸೆಳೆದಿರುವುದು ಅವರು ನೀಡಿರುವ ಕೊರೊನಾವನ್ನು ವ್ಯಾಖ್ಯಾನಿಸಿದ ಬಗೆ.

ಕೊರೊನಾ ಕುರಿತು ಅರುಣ್ ವೈದ್ಯನಾಥನ್ ಬರೆದುಕೊಂಡಿದ್ದು ಹೀಗೆ. ‘‘ನಾನು ಕುಂಭಮೇಳಕ್ಕೆ ತೆರಳಿ 28 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇನೆ. ಆಗ 160 ಮಂದಿ ಸೆಟ್​ನಲ್ಲಿದ್ದರು. ಬೋಧ್​​ಗಯಾಕ್ಕೂ ತೆರಳಿದ್ದೆ. ಆದರೆ ನಾನು ಅಮೇರಿಕಾ ಟ್ರಿಪ್​ನಿಂದ ಮರಳಿದ ತಕ್ಷಣ ಕೊರೊನಾ ಪಾಸಿಟಿವ್ ಬಂದಿದೆ’’ ಎಂದಿದ್ದಾರೆ ಅರುಣ್. ಕೊರೊನಾವನ್ನು ಮಸಾಲಾ ಫಿಲ್ಮ್​ಗೆ ಹೋಲಿಸಿರುವ ಅವರು, ‘‘ಕೊವಿಡ್ ಅನ್ನುವುದು ಮಸಾಲಾ ಚಿತ್ರವಿದ್ದಂತೆ. ಲಾಜಿಕ್ ಎನ್ನುವುದು ಇರುವುದೇ ಇಲ್ಲ’’ ಎಂದು ಬರೆದಿದ್ದಾರೆ.

ಇದಕ್ಕೂ ಮುಂಚಿನ ಪೋಸ್ಟ್​​ನಲ್ಲಿ ಅರುಣ್ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರಿಗೂ ಟೆಸ್ಟ್ ಮಾಡಿಸಿಕೊಳ್ಳುವಂತೆ ಕೋರಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ‘‘ನಮ್ಮ ಮನೆಗೆ ಹೊಸ ಅತಿಥಿ ಬಂದಿದೆ. ಬಹುಶಃ ಅವನ ಹೆಸರು ಒಮಿಕ್ರಾನ್. ಆತ ಪಾಪದವನಾಗಿದ್ದು, ಇದುವರೆಗೆ ಯಾವ ಲಕ್ಷಣವನ್ನೂ ತೋರಿಸಿಲ್ಲ. ವಾಟ್ಸಾಪ್, ಫೇಸ್​ಬುಕ್ ಮುಖಾಂತರ ನನ್ನ ಸಂಪರ್ಕಕ್ಕೆ ಬಂದವರು ರಿಲ್ಯಾಕ್ಸ್ ಆಗಿರಿ’’ ಎಂದು ಅವರು ತಮಾಷೆಯಾಗಿ ಬರೆದಿದ್ದರು.

ಅರುಣ್ ವೈದ್ಯನಾಥನ್ ಅವರು ಕ್ರೈಮ್ ಡ್ರಾಮಾ ‘ಅಚ್ಚಮುಂಡು’ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು. ಆ ಚಿತ್ರದಲ್ಲಿ ಪ್ರಸನ್ನ ಮತ್ತು ಸ್ನೇಹಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರುಣ್ ನಂತರ ‘ಪೆರುಚಾಳಿ’ ​​ಮತ್ತು ‘ನಿಬುನನ್’ ಚಿತ್ರಗಳನ್ನು ನಿರ್ದೇಶಿಸಿದರು.

ಅರುಣ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ವಿದೇಶಿ ಪ್ರವಾಸದ ನಂತರ ಕರೋನವೈರಸ್ ಸೋಂಕಿಗೆ ಒಳಗಾದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅರುಣ್ ಕೂಡ ಸೇರಿದ್ದಾರೆ. ಇತ್ತೀಚೆಗೆ, ಹಾಸ್ಯ ನಟ ವಡಿವೇಲು ಲಂಡನ್‌ನಿಂದ ಚೆನ್ನೈಗೆ ಹಿಂದಿರುಗಿದ ನಂತರದಲ್ಲಿ ಸೋಂಕಿಗೆ ತುತ್ತಾಗಿದ್ದರು. ಕೆಲ ಕಾಲದ ಹಿಂದೆ ಕಮಲ್ ಹಾಸನ್​ಗೆ ಕೂಡ ಅಮೇರಿಕಾದಿಂದ ಮರಳಿದಾಗ ಕೊರೊನಾ ಪಾಸಿಟಿಬ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

ಸಾಯಿ ಧರಮ್ ತೇಜ್​ಗೆ ಮತ್ತೆ ಸಂಕಷ್ಟ; ಹೈದರಾಬಾದ್​ ಪೊಲೀಸರಿಂದ ಬಂತು ನೋಟಿಸ್​

Karan Johar: ‘ಯಾವುದೇ ಯಶಸ್ಸು ಪಡೆಯದವರೂ ₹ 20- 30 ಕೋಟಿ ಡಿಮ್ಯಾಂಡ್ ಮಾಡುತ್ತಾರೆ’; ಕರಣ್ ತಿವಿದಿದ್ದು ಯಾರಿಗೆ?