ತಮಿಳು ನಿರ್ದೇಶಕ ಎಲ್ಲರೆದುರು ಕಪಾಳಕ್ಕೆ ಹೊಡೆದಿದ್ದ: ನಟಿ ಪದ್ಮಪ್ರಿಯಾ

Padmapriya: ಖ್ಯಾತ ನಟಿ ಪದ್ಮಪ್ರಿಯಾ ತಮಗೆ ತಮಿಳು ಚಿತ್ರರಂಗದಲ್ಲಿ ಆಗಿದ್ದ ಅವಮಾನದ ಬಗ್ಗೆ ಮಾತನಾಡಿದ್ದಾರೆ. ತಮಿಳಿನ ‘ಮೃಗಂ’ ಸಿನಿಮಾದಲ್ಲಿ ನಟಿಸಬೇಕಾದರೆ ಆ ಸಿನಿಮಾದ ನಿರ್ದೇಶಕ ಸ್ವಾಮಿ ನಟಿಯ ಕಪಾಳಕ್ಕೆ ಹೊಡೆದಿದ್ದರಂತೆ.

ತಮಿಳು ನಿರ್ದೇಶಕ ಎಲ್ಲರೆದುರು ಕಪಾಳಕ್ಕೆ ಹೊಡೆದಿದ್ದ: ನಟಿ ಪದ್ಮಪ್ರಿಯಾ
Follow us
|

Updated on: Oct 02, 2024 | 8:01 AM

ಹೇಮಾ ಕಮಿಟಿ ವರದಿ ಬಹಿರಂಗವಾದ ಬಳಿಕ ಮತ್ತೊಮ್ಮೆ ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಬಹಿರಂಗ ಚರ್ಚೆಗೆ ವೇದಿಕೆ ಒದಗಿದೆ. ಹೇಮಾ ವರದಿ ಬಹಿರಂಗದ ಬಳಿಕ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಯರು ತಮ್ಮ ಮೇಲಾಗಿದ್ದ, ಆಗುತ್ತಿರುವ ದೈಹಿಕ, ಮಾನಸಿಕ ದೌರ್ಜನ್ಯದ ಕುರಿತು ಮಾತನಾಡುತ್ತಿದ್ದಾರೆ. ತಮ್ಮ ಚಿತ್ರರಂಗಗಳಲ್ಲಿಯೂ ಹೇಮಾ ಕಮಿಟಿ ರೀತಿಯ ಕಮಿಟಿ ರಚನೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿಯೂ ಈ ಬೇಡಿಕೆ ನಿರ್ಮಾಣವಾಗಿದೆ. ಇದರ ನಡುವೆ ಖ್ಯಾತ ನಟಿ ಪದ್ಮಪ್ರಿಯಾ ತಮಿಳು ಚಿತ್ರರಂಗದಲ್ಲಿ ತಮಗೆ ಆಗಿದ್ದ ಅವಮಾನದ ಬಗ್ಗೆ ಮಾತನಾಡಿದ್ದಾರೆ.

ಏಳು ಭಾಷೆಗಳಲ್ಲಿ ನಟಿಸಿರುವ ಮಲಯಾಳಂ ನಟಿ ಪದ್ಮಪ್ರಿಯಾ, 2004 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟವರು. ಹಲವು ಭಾಷೆಗಳಲ್ಲಿ ಖ್ಯಾತ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಅತ್ಯುತ್ತಮ ನಟನೆಗೆ ಹಲವು ಪ್ರಶಸ್ತಿಗಳನ್ನು ಸಹ ಅವರು ತಮ್ಮದಾಗಿಸಿಕೊಂಡಿದ್ದಾರೆ. ಕಾಲೇಜು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪದ್ಮಪ್ರಿಯಾ, ‘2007 ರಲ್ಲಿ ಬಿಡುಗಡೆ ಆದ ತಮಿಳಿನ ‘ಮೃಗಂ’ ಸಿನಿಮಾದಲ್ಲಿ ನಟಿಸುವಾಗ, ಚಿತ್ರೀಕರಣದ ಕೊನೆಯ ದಿನ ಎಲ್ಲರ ಎದುರು ನಿರ್ದೇಶಕ ಸ್ವಾಮಿ ನನ್ನ ಕಪಾಳಕ್ಕೆ ಹೊಡೆದಿದ್ದರು’ ಎಂದಿದ್ದಾರೆ.

ಇದನ್ನೂ ಓದಿ:ಕನ್ನಡದಲ್ಲೂ ‘ಹೇಮಾ ಸಮಿತಿ’ ರೀತಿ ವರದಿ ಬೇಕು ಎಂಬ ಮಾತಿಗೆ ರಕ್ಷಿತ್​ ಶೆಟ್ಟಿ ಹೇಳಿದ್ದೇನು?

‘ಆ ಘಟನೆ ನನಗೆ ಆಘಾತ ಉಂಟು ಮಾಡಿತ್ತು. ಆದರೆ ಮಾಧ್ಯಮಗಳು ಘಟನೆ ಬಗ್ಗೆ ಉಲ್ಟಾ ವರದಿ ಮಾಡಿದವು. ನಾನೇ ನಿರ್ದೇಶಕನ ಕಪಾಳಕ್ಕೆ ಹೊಡೆದಿದ್ದೇನೆ ಎಂದು ವರದಿ ಬರೆದವು, ಇದು ನನಗೆ ಆಘಾತ ತಂದಿತು. ಅದಾದ ಬಳಿಕ ಘಟನೆ ಬಗ್ಗೆ ನಾನು ತಮಿಳು ಸಿನಿಮಾ ಸಂಘಗಳಿಗೆ ದೂರು ನೀಡಿದೆ. ಆದರೆ ಅದರಿಂದ ಯಾವುದೇ ಉಪಯೋಗ ಆಗಲಿಲ್ಲ. ಆ ನಂತರ ನನ್ನನ್ನೇ ಕೆಲವು ಸಿನಿಮಾಗಳಿಂದ ಕೈ ಬಿಡಲಾಯ್ತು. ಅದಾಗಲೇ ಒಪ್ಪಿಕೊಂಡಿದ್ದ ಸಿನಿಮಾಗಳಿಂದಲೂ ನನ್ನನ್ನು ತೆಗೆಯಲಾಯ್ತು’ ಎಂದಿದ್ದಾರೆ.

ಆದರೆ ‘ಮೃಗಂ’ ಸಿನಿಮಾದ ನಟನೆಗೆ ನನಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ದೊರಕಿತು. ನನ್ನ ನಟನೆಯನ್ನು ಜನ ಮೆಚ್ಚಿಕೊಂಡರು. ನನ್ನ ವಿರುದ್ಧ ಏನೇ ಪಿತೂರಿ ಮಾಡಿದರೂ ಸಹ ನಾನು ಮಾಡಿದ ಕೆಲಸದಿಂದ ನನಗೆ ಗೌರವ ಪ್ರಾಪ್ತಿಯಾಯ್ತು’ ಎಂದಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲಿ ಇರುವ ಲಿಂಗ ಭೇದದ ಬಗ್ಗೆಯೂ ನಟಿ ಪದ್ಮಪ್ರಿಯಾ ಮಾತನಾಡಿದ್ದು, ಲಿಂಗ ಭೇದದ ಬಗ್ಗೆ ನಾನು ವರ್ಷಗಳಿಂದಲೂ ಮಾತನಾಡುತ್ತಲೇ ಇದ್ದೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nithya Bhavishya: ಈ ರಾಶಿಯವರಿಗೆ ಇಂದು ಮಾನಸಿಕ ನೆಮ್ಮದಿ
Nithya Bhavishya: ಈ ರಾಶಿಯವರಿಗೆ ಇಂದು ಮಾನಸಿಕ ನೆಮ್ಮದಿ
ಬೆಂಗಳೂರಿನಲ್ಲಿ ಮಳೆ ಆರ್ಭಟ; ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!
ಬೆಂಗಳೂರಿನಲ್ಲಿ ಮಳೆ ಆರ್ಭಟ; ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!
ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್​-ಸುರೇಶ್ ನಡುವೆ ಜಟಾಪಟಿ
ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್​-ಸುರೇಶ್ ನಡುವೆ ಜಟಾಪಟಿ
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್