ನವೆಂಬರ್ 1 ರಿಂದ ತಮಿಳು ಸಿನಿಮಾ ಚಿತ್ರೀಕರಣ ಬಂದ್: ನಿರ್ಮಾಪಕ ನಿರ್ಧಾರ

|

Updated on: Jul 29, 2024 | 9:11 PM

Tamil Movie Industry: ತಮಿಳು ಸಿನಿಮಾರಂಗ ನವೆಂಬರ್ 1 ರ ಬಳಿಕ ಬಂದ್ ಆಗಲಿದೆ. ನವೆಂಬರ್ 1 ರ ಬಳಿಕ ಸಿನಿಮಾಗಳ ಚಿತ್ರೀಕರಣವನ್ನು ನಿಲ್ಲಿಸಲಾಗುತ್ತದೆಯಂತೆ. ಈ ಬಗ್ಗೆ ಇಂದು ನಡೆದ ಮಹತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನವೆಂಬರ್ 1 ರಿಂದ ತಮಿಳು ಸಿನಿಮಾ ಚಿತ್ರೀಕರಣ ಬಂದ್: ನಿರ್ಮಾಪಕ ನಿರ್ಧಾರ
Follow us on

ತಮಿಳು ಚಿತ್ರರಂಗ ಭಾರತದ ಟಾಪ್ ಚಿತ್ರರಂಗಗಳಲ್ಲಿ ಒಂದು. ಭಾರತದ ಮೂರನೇ ಅತಿ ದೊಡ್ಡ ಚಿತ್ರರಂಗವೂ ಸಹ ಹೌದು. ಲಕ್ಷಾಂತರ ಜನಕ್ಕೆ ಉದ್ಯೋಗವನ್ನು ತಮಿಳು ಚಿತ್ರರಂಗ ನೀಡಿದೆ. ಆದರೆ ನವೆಂಬರ್ 1 ರಿಂದ ತಮಿಳು ಸಿನಿಮಾಗಳ ಚಿತ್ರೀಕರಣ ನಿಲ್ಲಲಿದೆ. ನವೆಂಬರ್ 1 ರಿಂದ ಬಂದ್ ಮಾಡುವ ನಿರ್ಣವನ್ನು ತಮಿಳು ಚಿತ್ರರಂಗದ ನಿರ್ಮಾಪಕರು ತೆಗೆದುಕೊಂಡಿದ್ದಾರೆ. ಇಂದು ಸಭೆ ನಡೆಸಿದ ತಮಿಳು ಚಿತ್ರರಂಗದ ನಿರ್ಮಾಪಕರು ಹಲವು ವಿಷಯಗಳನ್ನು ಚರ್ಚಿಸಿದ್ದು, ನಿರ್ಮಾಪಕರು ಎದುರಿಸುತ್ತಿರುವ ಸಮಸ್ಯೆ, ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ನವೆಂಬರ್ 1 ರಿಂದ ಚಿತ್ರೀಕರಣ ನಿಲ್ಲಿಸುವ ನಿರ್ಧಾರ ಪ್ರಕಟಿಸಿದ್ದಾರೆ.

ಸಿನಿಮಾ ನಟರ ಸಂಭಾವನೆ ಏರಿಕೆ, ನಟ-ನಟಿಯರ ಅನಧಿಕೃತ ಬೇಡಿಕೆಗಳು, ಫೈನ್ಯಾನ್ಸ್ ಸಮಸ್ಯೆಗಳು, ಸರ್ಕಾರದ ಸಹಾಯ, ಚಿತ್ರರಂಗದಲ್ಲಿ ದುಡಿಯುತ್ತಿರುವವವ ಸಂಭಾವನೆ ಏರಿಕೆ, ಬೆಲೆ ಏರಿಕೆ ಇನ್ನಿತರೆ ಸಮಸ್ಯೆಗಳ ಬಗ್ಗೆ ನಿರ್ಮಾಪಕರು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳು ಈಡಏರದೇ ಇದ್ದರೆ ನವೆಂಬರ್ 1 ರಿಂದ ಚಿತ್ರೀಕರಣವನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಿದೆ. ಇಂದು ನಡೆದ ಸಭೆಯಲ್ಲಿ ತಮಿಳುನಾಡು ಸಿನಿಮಾ ನಿರ್ಮಾಪಕರ ಸಂಘ, ತಮಿಳುನಾಡು ಸಿನಿಮಾ ಪ್ರದರ್ಶಕರ ಸಂಘ, ತಮಿಳುನಾಡು ಸಿನಿಮಾ ವಿತರಕರ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಪ್ರತಿಯೊಂದು ಸಂಘಟನೆಯೂ ಸಹ ತಾವು ಚಿತ್ರರಂಗದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು.

ಇದನ್ನೂ ಓದಿ:Shivarajkumar: ತಮಿಳು ಸಿನಿಮಾಗೆ ಶಿವಣ್ಣ ಸಾಥ್; ಈ ಚಿತ್ರದಲ್ಲಿದೆ ರೆಟ್ರೋ ಕಥೆ  

ಯಾವುದೇ ದೊಡ್ಡ ನಟನ ಸಿನಿಮಾಗಳು ಚಿತ್ರರಂಗದಲ್ಲಿ ಬಿಡುಗಡೆ ಆದ ಎರಡು ತಿಂಗಳ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಆಗಬೇಕು. ಯಾವುದೇ ಸ್ಟಾರ್ ನಟ ಒಂದು ಸಿನಿಮಾಕ್ಕೆ ಅಡ್ವಾನ್ಸ್ ಪಡೆದನೆಂದರೆ ಆ ಸಿನಿಮಾ ಮುಗಿಯುವ ವರೆಗೂ ಹೊಸ ಸಿನಿಮಾದ ಅಡ್ವಾನ್ಸ್ ಪಡೆಯುವಂತಿಲ್ಲ. ಸಿನಿಮಾ ನಟರ ಸಿಬ್ಬಂದಿಯ ಖರ್ಚನ್ನು ನಟರೇ ಭರಿಸಬೇಕು. ಹೊಸ ತಮಿಳು ಸಿನಿಮಾಗಳ ಬಿಡುಗಡೆ ಬಗ್ಗೆ ಹೊಸ ನಿಯಮಗಳನ್ನು ಜಾರಿ ಮಾಡಬೇಕು. ಆಗಸ್ಟ್ 16 ರಿಂದ ವಾರಕ್ಕೆ ಇಂತಿಷ್ಟೆ ಸಿನಿಮಾಗಳು ಬಿಡುಗಡೆ ಆಗಬೇಕೆಂಬ ನಿಯಮ ಜಾರಿ ಆಗಬೇಕು.

ಇದರ ಜೊತೆಗೆ ಸಿನಿಮಾದ ಮುಖ್ಯ ನಟರ ಸಂಭಾವನೆ ಭಾರಿ ಏರಿಕೆ ಆಗಿದ್ದು, ನಟರ ಸಂಭಾವನೆ ಇಳಿಕೆ ಆಗಬೇಕು. ಈಗ ಚಾಲ್ತಿಯಲ್ಲಿರುವ ದೊಡ್ಡ ಸಿನಿಮಾಗಳ ಚಿತ್ರೀಕರಣ ಅಕ್ಟೋಬರ್ 30ಕ್ಕೆ ಬಹುತೇಕ ಅಂತ್ಯವಾಗಲಿದೆ. ಅದಾದ ಬಳಿಕ ನವೆಂಬರ್ 1 ರಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಿತ್ರರಂಗ ಬಂದ್ ಮಾಡಲಾಗುವುದು. ತಮಿಳು ಚಿತ್ರರಂಗ ಮಾತ್ರವೇ ಅಲ್ಲದೆ ಬಾಲಿವುಡ್​ನಲ್ಲೂ ಸಹ ನಿರ್ಮಾಪಕರು ಸಭೆ ನಡೆಸಿ ಇದೇ ಕೆಲವು ವಿಷಯಗಳನ್ನು ಚರ್ಚಿಸಿದ್ದಾರೆ. ಅಲ್ಲೂ ಸಹ ನಟರ ಸಂಭಾವನೆ ಬಗ್ಗೆ ತಕರಾರುಗಳು ಎತ್ತಲಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ