AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟನ ಪತ್ನಿಯ ಪ್ರಯತ್ನದಿಂದ ಸಿಕ್ಕಿಬಿದ್ದ Tamil Rockers ಏಜೆಂಟ್; ಹೊರಬೀಳಲಿದೆ ಕಿಂಗ್​ಪಿನ್ ಹೆಸರು?

ತನಿಖೆ ನಡೆಸಿ ಸ್ಟೀಫನ್ ರಾಜ್​ನ ಬಂಧಿಸಿದ್ದಾರೆ ಪೊಲೀಸರು. ಇತ್ತೀಚೆಗೆ ರಿಲೀಸ್ ಆದ ಸಿನಿಮಾಗಳ ಪೈರೇಟೆಡ್ ಕಾಪಿಗಳು ಈತನ ಬಳಿ ಇದ್ದವು. ಸ್ಟೀಫನ್ ರಾಜ್ ಸಿನಿಮಾನ ಶೂಟ್ ಮಾಡಲು ಸಾಕಷ್ಟು ತಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ಸ್ಟೀಫನ್ ರಾಜ್ ತಿರುವನಂತಪುರದ ಗೆಸ್ಟ್​ಹೌಸ್​ನಲ್ಲಿ ವರ್ಷದಿಂದ ಈಚೆಗೆ ವಾಸವಾಗಿದ್ದಾನೆ. ತಮಿಳ್ ರಾಕರ್ಸ್​ ಗ್ರೂಪ್ ಜೊತೆ ಈತನಿಗೆ ನಂಟಿದೆ ಎನ್ನಲಾಗಿದೆ.

ನಟನ ಪತ್ನಿಯ ಪ್ರಯತ್ನದಿಂದ ಸಿಕ್ಕಿಬಿದ್ದ Tamil Rockers ಏಜೆಂಟ್; ಹೊರಬೀಳಲಿದೆ ಕಿಂಗ್​ಪಿನ್ ಹೆಸರು?
ನಟನ ಪತ್ನಿಯ ಪ್ರಯತ್ನದಿಂದ ಸಿಕ್ಕಿಬಿದ್ದ Tamil Rockers ಏಜೆಂಟ್; ಹೊರಬೀಳಲಿದೆ ಕಿಂಗ್ ಪಿನ್ ಹೆಸರು?
ರಾಜೇಶ್ ದುಗ್ಗುಮನೆ
|

Updated on:Jul 30, 2024 | 7:02 AM

Share

ಯಾವುದೇ ಸಿನಿಮಾ ರಿಲೀಸ್ ಆದರೂ ಕೆಲವೇ ಗಂಟೆಗಳಲ್ಲಿ ಅದು ಆನ್​ಲೈನ್​ನಲ್ಲಿ ಲಭ್ಯವಾಗುತ್ತದೆ. ಈ ಮೊದಲು ಬಿಗ್ ಬಜೆಟ್ ಸಿನಿಮಾಗಳಿಗೆ ಮಾತ್ರ ಈ ಕಾಟ ಇತ್ತು. ಈಗ ರಿಲೀಸ್ ಆಗುವ ಪ್ರತಿ ಸಿನಿಮಾಗೂ ಇದೇ ಸಮಸ್ಯೆ ಉಂಟಾಗುತ್ತಿದೆ. ಇದನ್ನು ತಡೆಯುವ ಪ್ರಯತ್ನ ನಡೆಯುತ್ತಿದೆಯಾದರೂ ಸಾಧ್ಯವಾಗಿಲ್ಲ. ಈ ಮಧ್ಯೆ ಕೇರಳ ಸೈಬರ್ ಕ್ರೈಮ್ ಪೊಲೀಸರು ಪೈರಸಿ ವೆಬ್​ಸೈಟ್​ನಲ್ಲಿ ಸಾಕಷ್ಟು ಕುಖ್ಯಾತಿ ಗಳಿಸಿರುವ Tamil Rockers ಏಜೆಂಟ್​ನ ಬಂಧಿಸಿದ್ದಾರೆ. ಈತ ಮಧುರೈನಲ್ಲಿ ಧನುಷ್ ನಟನೆಯ ‘ರಾಯನ್’ ಸಿನಿಮಾ ರೆಕಾರ್ಡ್​ ಮಾಡುತ್ತಿದ್ದ. ಈತನ ವಿಚಾರಣೆ ವೇಳೆ Tamil Rockers ಸೈಟ್​ನ ಕಿಂಗ್​ಪಿನ್ ಹೆಸರು ಹೊರ ಬೀಳಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

Tamil Rockers ಮೊದಲಿನಿಂದಲೂ ಸಿನಿಮಾನ ಪೈರಸಿ ಮಾಡುತ್ತಾ ಬರುತ್ತಿದೆ. ಸಿನಿಮಾ ರಿಲೀಸ್ ಆದ ದಿನವೇ ಈ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಆದ ಉದಾಹರಣೆ ಇದೆ. ಇತ್ತೀಚೆಗೆ ಮಲಯಾಳಂನಲ್ಲಿ ಪೃಥ್ವಿರಾಜ್ ನಟನೆಯ ‘ಗುರವಾಯುರಪ್ಪನ್ ಅಂಬಲನಾದೈ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದ ಪೈರಸಿ ಕಾಪಿ ತಮಿಳ್ ರಾಕರ್ಸ್​ ಸೈಟ್​ನಲ್ಲಿ ಲಭ್ಯವಾಗಿತ್ತು. ಇದು ನಿರ್ಮಾಪಕಿ ಹಾಗೂ ಸ್ಟಾರ್ ಹೀರೋ ಪೃಥ್ವಿರಾಜ್​ ಸುಕುಮಾರನ್ ಅವರ ಪತ್ನಿ ಸುಪ್ರಿಯಾ ಮೆನನ್ ಕೋಪಕ್ಕೆ ಕಾರಣ ಆಗಿತ್ತು. ಈ ಬಗ್ಗೆ ಅವರು ದೂರು ನೀಡಿ ವಿಚಾರಣೆ ನಡೆಸಲು ಕೋರಿದ್ದರು.

ಪೊಲೀಸರು ತನಿಖೆ ನಡೆಸಿ ಸ್ಟೀಫನ್ ರಾಜ್​ನ ಬಂಧಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾಗಳ ಪೈರೇಟೆಡ್ ಕಾಪಿಗಳು ಈತನ ಬಳಿ ಇದ್ದವು. ಸ್ಟೀಫನ್ ರಾಜ್ ಸಿನಿಮಾನ ಶೂಟ್ ಮಾಡಲು ಸಾಕಷ್ಟು ಮೆಥಡ್​ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ಥಿಯೇಟರ್ ಸೀಟ್ ಮೇಲೆ ಇರುವ ಕಪ್ ಹೋಲ್ಡರ್ ಮೇಲೆ ಮೊಬೈಲ್ ಇಟ್ಟು ಸಿನಿಮಾ ರೆಕಾರ್ಡ್ ಮಾಡುತ್ತಿದ್ದ. ಈತನಿಗೆ ತಮಿಳ್ ರಾಕರ್ಸ್​ ಕಡೆಯಿಂದ ಪ್ರತಿ ಸಿನಿಮಾಗೆ 5 ಸಾವಿರ ರೂಪಾಯಿ ಸಿಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ‘ಬಡೇ ಮಿಯಾ ಚೋಟೆ ಮಿಯಾ’ ಟ್ವಿಟರ್ ವಿಮರ್ಶೆ; ಅಕ್ಷಯ್, ಟೈಗರ್​ಗಿಂತ ಪೃಥ್ವಿರಾಜ್​ಗೆ ಹೆಚ್ಚು ಅಂಕ

ಸ್ಟೀಫನ್ ರಾಜ್ ತಿರುವನಂತಪುರದ ಗೆಸ್ಟ್​ಹೌಸ್​ನಲ್ಲಿ ವರ್ಷದಿಂದ ಈಚೆಗೆ ವಾಸವಾಗಿದ್ದಾನೆ. ತಮಿಳ್ ರಾಕರ್ಸ್​ ಗ್ರೂಪ್ ಜೊತೆ ಈತನಿಗೆ ನಂಟಿದೆ ಎನ್ನಲಾಗಿದೆ. ಈತನ ಮೊಬೈಲ್ ಬೆಲೆ ಲಕ್ಷದ ಮೇಲಿದೆ. ಈತನಿಂದ ತಮಿಳ್ ರಾಕರ್ಸ್ ಕಿಂಗ್​ಪಿನ್ ಅರೆಸ್ಟ್ ಆಗುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:02 am, Tue, 30 July 24

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More