ಒಟ್ಟಿಗೆ ಏಳು ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಿದ ಸರ್ಕಾರ

State film awards: ರಾಜ್ಯ ಸರ್ಕಾರಗಳು ಚಲನಚಿತ್ರ ಪ್ರಶಸ್ತಿಗಳನ್ನು ನೀಡುವುದರಲ್ಲಿ ವಿಳಂಬ ಮಾಡುತ್ತವೆ. ಕರ್ನಾಟಕವೂ ಸರ್ಕಾರ ಸಹ ಈ ವಿಷಯದಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಲೇ ಬಂದಿದೆ. ಇದೀಗ ನೆರೆಯ ತಮಿಳುನಾಡಿನಲ್ಲಿ ಒಂದೇ ಬಾರಿಗೆ ಏಳು ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಒಟ್ಟಿಗೆ ಘೋಷಿಸಲಾಗಿದೆ.

ಒಟ್ಟಿಗೆ ಏಳು ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಿದ ಸರ್ಕಾರ
State Film Award

Updated on: Jan 30, 2026 | 6:07 PM

ರಾಜ್ಯ ಸರ್ಕಾರಗಳು, ಆಯಾ ರಾಜ್ಯದ ಚಿತ್ರರಂಗಕ್ಕೆ (Movie Industry) ಉತ್ತೇಜನ ನೀಡಲು ಆಯಾ ವರ್ಷದ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ಕೊಡುತ್ತಾ ಬಂದಿವೆ. ಆದರೆ ಬಹಳ ಕಡಿಮೆ ಸರ್ಕಾರಗಳು ಈ ಪ್ರಶಸ್ತಿಗಳನ್ನು ಚಾಚು ತಪ್ಪದೆ ಆಯಾ ವರ್ಷವೇ ಕೊಡುತ್ತವೆ, ಕರ್ನಾಟಕದಲ್ಲಿಯೂ ಸಹ ಸರ್ಕಾರಗಳು ಈ ವಿಷಯದಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಲೇ ಬಂದಿದೆ. ಇದೀಗ ನೆರೆಯ ತಮಿಳುನಾಡಿನಲ್ಲಿ ಒಂದೇ ಬಾರಿಗೆ ಏಳು ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಒಟ್ಟಿಗೆ ಘೋಷಿಸಲಾಗಿದೆ.

ತಮಿಳುನಾಡಿನಲ್ಲಿ 2016 ರಿಂದಲೂ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ ಬಾಕಿ ಉಳಿದಿತ್ತು. ಇದೀಗ ಒಂದೇ ಬಾರಿಗೆ 2016 ರಿಂದ 2021ರ ವರೆಗಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ತಮಿಳುನಾಡು ಸರ್ಕಾರ ಘೋಷಣೆ ಮಾಡಿದೆ. ಕೆಲವೇ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ಘೋಷಣೆ ಆಗಲಿದ್ದು, ಇದೇ ಕಾರಣಕ್ಕೆ ಇದೀಗ ತರಾತುರಿಯಲ್ಲಿ ಈ ಪ್ರಶಸ್ತಿಗಳನ್ನು ಸರ್ಕಾರ ಘೋಷಿಸಿದಂತಿದೆ.

2016ರ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ‘ಮಾನಗರಂ’, ‘ಪುರಿಯಾತ್ತ ಪುತ್ತಿರ್’, ‘ಮಾವೀರನ್ ಕಿಟ್ಟು’ ಸಿನಿಮಾಗಳು ಅನುಕ್ರಮವಾಗಿ ಪಡೆದುಕೊಂಡಿವೆ. ಅದೇ ವರ್ಷದ ಅತ್ಯುತ್ತಮ ನಟ ಪ್ರಶಸ್ತಿ ವಿಜಯ್ ಸೇತುಪತಿ, ಅತ್ಯುತ್ತಮ ನಟಿ ಕೀರ್ತಿ ಸುರೇಶ್ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲೋಕೇಶ್ ಕನಗರಾಜ್ ಅವರಿಗೆ ಧಕ್ಕಿದೆ.

ಇದನ್ನೂ ಓದಿ:ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್

2017ರ ಅತ್ಯುತ್ತಮ ಮೂರು ಸಿನಿಮಾಗಳು ಕ್ರಮವಾಗಿ ‘ಅರಂ’, ‘ವಿಕ್ರಂ ವೇದ’ ಮತ್ತು ‘ತರಮಣಿ’. ಅತ್ಯುತ್ತಮ ನಟ ಕಾರ್ತಿ, ಅತ್ಯುತ್ತಮ ನಟಿ ನಯನತಾರಾ. ಅತ್ಯುತ್ತಮ ನಿರ್ದೇಶಕ ಪುಷ್ಕರ್-ಗಾಯತ್ರಿ (ವಿಕ್ರಂ-ವೇದ). 2018ರ ಅತ್ಯುತ್ತಮ ಸಿನಿಮಾಗಳು ‘ಪರಿಯೇರುಮ್ ಪೆರುಮಾಳ್’, ‘ಕಡೈಕುಟ್ಟಿ ಸಿಂಗಂ’, ‘96’. ಅತ್ಯುತ್ತಮ ನಟ ಧನುಶ್ (ವಡ ಚೆನ್ನೈ), ಅತ್ಯುತ್ತಮ ನಟಿ ಜ್ಯೋತಿಕ (ಚಕ್ಕ ಚಿವಂತಿ ವಾನಂ). ಅತ್ಯುತ್ತಮ ನಿರ್ದೇಶಕ ಮಾರಿ ಸೆಲ್ವರಾಜ್ (ಪರಿಯೇರುಮ್ ಪೆರುಮಾಳ್).

2019ರ ಅತ್ಯುತ್ತಮ ಸಿನಿಮಾ ‘ಅಸುರನ್’, ‘ಒತ್ತ ಸೆರಪ್ಪು ಸೈಜ್ 7’, ‘ಕೋಮಲಿ’. ಅತ್ಯುತ್ತಮ ನಟ ಕಾರ್ತಿ (ಕೈದಿ), ಅತ್ಯುತ್ತಮ ನಟಿ ಮಂಜು ವಾರಿಯರ್ (ಅಸುರನ್). ಅತ್ಯುತ್ತಮ ನಿರ್ದೇಶಕ ಆರ್ ಪಾರ್ತಿಬನ್ (ಒತ್ತ ಸೆರಪ್ಪು ಸೈಜ್ 7) 2020ರ ಅತ್ಯುತ್ತಮ ಸಿನಿಮಾಗಳು ಕ್ರಮವಾಗಿ, ‘ಕೂಳಂಗಳ್’, ‘ಸೂರರೈ ಪೋಟ್ರು’, ‘ಸಂಡಕಾರಿ’. ಅತ್ಯುತ್ತಮ ನಟ ಸೂರ್ಯ (ಸೂರರೈ ಪೊಟ್ರು), ಅಪರ್ಣಾ ಬಾಲಮುರಳಿ (ಸೂರರೈ ಪೊಟ್ರು). ಅತ್ಯುತ್ತಮ ನಿರ್ದೇಶಕ ಸುಧಾ ಕೊಂಗರ (ಸೂರರೈ ಪೊಟ್ರು).

2021ರ ಸಾಲಿನ ಅತ್ಯುತ್ತಮ ಸಿನಿಮಾಗಳು ‘ಜೈ ಭೀಮ್’, ‘ಕಡೈಸಿ ವ್ಯವಸಾಯಿ’, ‘ಕರ್ಣನ್’. ಅತ್ಯುತ್ತಮ ನಟ ಆರ್ಯ (ಸರ್ಪಟ್ಟ ಪರಂಬರೈ), ಅತ್ಯುತ್ತಮ ನಟಿ ಲಿಜೊಮಲ್ ಜೋಸ್ (ಜೈ ಭೀಮ್). ಅತ್ಯುತ್ತಮ ನಿರ್ದೇಶಕ ಥಾ ಸೆ ಜ್ಞಾನವೇಲ್ (ಜೈ ಭೀಮ್).

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Fri, 30 January 26