AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chowkidar Review: ಅಪ್ಪನ ಅಗಾಧ ಪ್ರೀತಿಯ ಪ್ಲಸ್, ಮೈನಸ್ ತೋರಿಸುವ ‘ಚೌಕಿದಾರ್’

Chowkidar Review: ಅಪ್ಪನ ಅಗಾಧ ಪ್ರೀತಿಯ ಪ್ಲಸ್, ಮೈನಸ್ ತೋರಿಸುವ ‘ಚೌಕಿದಾರ್’
Chowkidar Movie ReviewImage Credit source: Tv9 Kannada
ಚೌಕಿದಾರ್
UA
  • Time - 145 Minutes
  • Released - January 30, 2026
  • Language - Kannada
  • Genre - Family Drama, Action
Cast - ಸಾಯಿಕುಮಾರ್, ಪೃಥ್ವಿ ಅಂಬಾರ್, ಶ್ವೇತಾ ವಿನೋಧಿನಿ, ಸುಧಾರಾಣಿ, ಧನ್ಯಾ ರಾಮ್​​ಕುಮಾರ್, ಗಿಲ್ಲಿ ನಟ, ಮುನಿ, ಧರ್ಮ ಮುಂತಾದವರು.
Director - ಚಂದ್ರಶೇಖರ್ ಬಂಡಿಯಪ್ಪ
3
Critic's Rating
ಮದನ್​ ಕುಮಾರ್​
|

Updated on:Jan 30, 2026 | 3:22 PM

Share

ಪೃಥ್ವಿ ಅಂಬಾರ್, ಸಾಯಿ ಕುಮಾರ್ (Sai Kumar), ಸುಧಾರಾಣಿ, ಶ್ವೇತಾ ವಿನೋಧಿನಿ ಮುಂತಾದವರು ನಟಿಸಿರುವ ‘ಚೌಕಿದಾರ್’ ಸಿನಿಮಾ ರಿಲೀಸ್ (ಜನವರಿ 30) ಆಗಿದೆ. ಈ ಸಿನಿಮಾದಲ್ಲಿ ತಂದೆ-ಮಗನ ಬಾಂಧವ್ಯದ ಕಥೆ ಇದೆ. ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಡಾ. ಕಲ್ಲಹಳ್ಳಿ ಚಂದ್ರಶೇಖರ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುವ ರೀತಿಯಲ್ಲಿ ‘ಚೌಕಿದಾರ್’ ಸಿನಿಮಾ ಮೂಡಿಬಂದಿದೆ. ಸಿನಿಮಾದ ವಿಮರ್ಶೆ (Chowkidar Review) ಇಲ್ಲಿದೆ..

ಸಾಯಿ ಕುಮಾರ್ ಅವರು ಒಂದೇ ರೀತಿಯ ಪಾತ್ರಕ್ಕೆ ಗಂಟುಬಿದ್ದವರಲ್ಲ. ಚಿತ್ರರಂಗದಲ್ಲಿ ಅವರು 50 ವರ್ಷಗಳ ಅನುಭವ ಹೊಂದಿದ್ದಾರೆ. ‘ಚೌಕಿದಾರ್’ ಸಿನಿಮಾದಲ್ಲಿ ಅವರದ್ದೇ ಪ್ರಮುಖ ಪಾತ್ರ. ಹೀರೋ ತಂದೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಪ್ಪ ಎಂದರೆ ಇಡೀ ಕುಟುಂಬವನ್ನು ಕಾಯುವ ಚೌಕಿದಾರ ಎಂಬುದು ಗೊತ್ತೇ ಇದೆ. ಆ ಎಳೆಯನ್ನೇ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ. ಮಗನ ಪಾತ್ರದಲ್ಲಿ ಪೃಥ್ವಿ ಅಂಬಾರ್ ನಟಿಸಿದ್ದಾರೆ.

ಸಾಯಿ ಕುಮಾರ್ ಅವರಿಗೆ ಹೀರೋ ತಂದೆಯ ಪಾತ್ರ ಹೊಸದಲ್ಲ. ಆದರೆ ‘ಚೌಕಿದಾರ್’ ಸಿನಿಮಾದಲ್ಲಿ ಇರುವ ಅಪ್ಪನ ಪಾತ್ರ ಸ್ವಲ್ಪ ಡಿಫರೆಂಟ್. ಮಗನ ಮೇಲೆ ಈತನಿಗೆ ವಿಪರೀತ ಪ್ರೀತಿ. ಬಾಲ್ಯದಲ್ಲಿ ನಡೆಯಲು ಕಲಿಯುವಾಗ ಮಗ ಬಿದ್ದರೂ ಕೂಡ ಈತನಿಗೆ ವಿಪರೀತ ಸಂಕಟ ಆಗುತ್ತದೆ. ಮಗ ದೊಡ್ಡವನಾಗಿ ಮದುವೆಯ ವಯಸ್ಸಿಗೆ ಬಂದರೂ ತಂದೆಯ ಪ್ರೀತಿ ಕಡಿಮೆ ಆಗಲ್ಲ. ಅಪ್ಪನ ಅತಿಯಾಗಿ ಪ್ರೀತಿಯಿಂದ ಕೆಲವು ಅನಾಹುತಗಳು ನಡೆದುಹೋಗುತ್ತವೆ. ಆ ಸಂಗತಿಗಳು ಏನು? ಅದರಿಂದ ಹೀರೋ ಹೇಗೆ ಹೊರಬರುತ್ತಾನೆ ಎಂಬುದೇ ಈ ಸಿನಿಮಾದ ಕಥೆಯ ತಿರುಳು.

ಪೃಥ್ವಿ ಅಂಬಾರ್ ಅವರು ‘ಚೌಕಿದಾರ್’ ಸಿನಿಮಾದಲ್ಲಿ ಕಿಂಚಿತ್ತೂ ಜವಾಬ್ದಾರಿ ಇಲ್ಲದ ಮಗನಾಗಿ ಕಾಣಿಸಿಕೊಂಡಿದ್ದಾರೆ. ಅತಿಯಾದ ಪ್ರೀತಿಯಿಂದ ಬೆಳೆದ ಮಕ್ಕಳು ಹೇಗಿರುತ್ತಾರೆ ಎಂಬುದನ್ನು ಅವರು ಈ ಪಾತ್ರದ ಮೂಲಕ ಕಣ್ಣಿಗೆ ಕಟ್ಟುವಂತೆ ಪ್ರೇಕ್ಷಕರಿಗೆ ತೋರಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಈ ಪಾತ್ರದ ನೆಗೆಟಿವ್ ಶೇಡ್ ಹೆಚ್ಚಾಗಿ ಕಾಣಿಸುತ್ತದೆ. ಪೃಥ್ವಿ ಅಂಬಾರ್ ಅವರು ಇಮೇಜ್ ಬದಿಗಿಟ್ಟು ಅಂಥ ಪಾತ್ರವನ್ನು ಮಾಡಿದ್ದಾರೆ.

ಒಟ್ಟಾರೆಯಾಗಿ ನೋಡಿದರೆ ಈ ಸಿನಿಮಾದ ಕಥೆಯಲ್ಲಿ ಸಂಪೂರ್ಣ ಹೊಸತನವನ್ನು ನಿರೀಕ್ಷಿಸಲಾಗದು. ಕೆಲವು ದೃಶ್ಯಗಳನ್ನು ಮೊದಲೇ ಊಹಿಸಬಹುದು. ಹಾಗಿದ್ದರೂ ಕೂಡ ಈ ಕಾಲಕ್ಕೆ ಪ್ರಸ್ತುತ ಎಂಬಂತೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಮೊಬೈಲ್​ನಲ್ಲಿ ಮುಳುಗಿದ್ದು, ಜವಾಬ್ದಾರಿ ನಿಭಾಯಿಸದೇ, ಅಪ್ಪ-ಅಮ್ಮನ ಕಷ್ಟ ಅರ್ಥ ಮಾಡಿಕೊಳ್ಳದೇ ತಿರುಗಾಡುವ ಮಕ್ಕಳಿಗೆ ಈ ಸಿನಿಮಾದಲ್ಲಿ ಅಗತ್ಯವಾದ ಸಂದೇಶ ನೀಡಲಾಗಿದೆ.

ಪೃಥ್ವಿ ಅಂಬಾರ್ ಅವರು ಲುಕ್ ಮತ್ತು ನಟನೆಯ ಮೂಲಕ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಡೀ ಸಿನಿಮಾದಲ್ಲಿ ಸಾಯಿ ಕುಮಾರ್ ಮತ್ತು ಪೃಥ್ವಿ ಅಂಬಾರ್ ಅವರ ಕಾಂಬಿನೇಷನ್ ಇಷ್ಟ ಆಗುತ್ತದೆ. ತಾಯಿ ಪಾತ್ರದಲ್ಲಿ ಶ್ವೇತಾ ವಿನೋಧಿನಿ ಅವರು ಮೆಚ್ಚುಗೆ ಗಳಿಸುತ್ತಾರೆ. ಸುಧಾರಾಣಿ, ಧನ್ಯಾ ರಾಮ್​ಕುಮಾರ್ ಅವರು ಕೆಲವು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ನಟರಾದ ಮುನಿ ಮತ್ತು ಧರ್ಮ ಅವರಿಗೆ ಕಡಿಮೆ ಸ್ಕ್ರೀನ್ ಸ್ಪೇಸ್ ಇದ್ದರೂ ಕೂಡ ಗಮನ ಸೆಳೆಯುತ್ತಾರೆ. ಕೇವಲ ಒಂದು ದೃಶ್ಯದಲ್ಲಿ ಗಿಲ್ಲಿ ನಟ ಬಂದು ಹೋಗುತ್ತಾರೆ.

ಇದನ್ನೂ ಓದಿ: ‘ವಲವಾರ’ ಸಿನಿಮಾ ವಿಮರ್ಶೆ; ಹಾಸ್ಯ, ಭಾವನೆಗಳ ಮಿಶ್ರಣ; ಬಾಲ್ಯ ನೆನಪಿಸೋ ಪಯಣ

ತಾಂತ್ರಿಕವಾಗಿ ಈ ಸಿನಿಮಾ ಅಚ್ಚುಕಟ್ಟಾಗಿದೆ. ಅಪ್ಪನ ಕಷ್ಟವನ್ನು ತೋರಿಸಲು ಇಡೀ ಸಿನಿಮಾದಲ್ಲಿ ಹೆಚ್ಚು ಸಮಯ ಮೀಸಲಿಡಲಾಗಿದೆ. ಆದರೆ ತುಂಬಾ ಗಡಿಬಿಡಿಯಲ್ಲಿ ಕ್ಲೈಮ್ಯಾಕ್ಸ್ ತೋರಿಸಲಾಗಿದೆ. ಆ ಬಗ್ಗೆ ನಿರ್ದೇಶಕರು ಒಂದಷ್ಟು ಗಮನ ಹರಿಸುವ ಅಗತ್ಯವಿತ್ತು ಎನಿಸುತ್ತದೆ. ಉಳಿದಂತೆ, ಒಂದು ಫ್ಯಾಮಿಲಿ ಎಂಟರ್​ಟೇನರ್ ಚಿತ್ರವಾಗಿ ‘ಚೌಕಿದಾರ್’ ನೋಡಿಸಿಕೊಳ್ಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:19 pm, Fri, 30 January 26

ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ