‘ಹನುಮಾನ್​’ ಚಿತ್ರಕ್ಕೆ ಸಿಕ್ತು ಧ್ರುವ ಸರ್ಜಾ ಬೆಂಬಲ; ತೇಜ ಸಜ್ಜಾಗೆ ‘ಆ್ಯಕ್ಷನ್​ ಪ್ರಿನ್ಸ್​’ ಶುಭ ಹಾರೈಕೆ

ಎಲ್ಲರಿಗೂ ತಿಳಿದಿರುವಂತೆ ಧ್ರುವ ಸರ್ಜಾ ಅವರು ಆಂಜನೇಯನ ಪರಮ ಭಕ್ತ. ತೇಜ ಸಜ್ಜಾ ನಟಿಸಿರುವ ‘ಹನುಮಾನ್​’ ಸಿನಿಮಾದಲ್ಲೂ ಆಂಜನೇಯನ ಕುರಿತ ಕಹಾನಿ ಇದೆ. ಹಾಗಾಗಿ ಬೆಂಗಳೂರಿನಲ್ಲಿ ಧ್ರುವ ಸರ್ಜಾ ಅವರನ್ನು ‘ಹನುಮಾನ್​’ ತಂಡ ಭೇಟಿ ಮಾಡಿದೆ. ತೆಲುಗಿನ ಈ ಸಿನಿಮಾ ಜನವರಿ 12ರಂದು ಕನ್ನಡದಲ್ಲೂ ಬಿಡುಗಡೆ ಆಗಲಿದೆ.

‘ಹನುಮಾನ್​’ ಚಿತ್ರಕ್ಕೆ ಸಿಕ್ತು ಧ್ರುವ ಸರ್ಜಾ ಬೆಂಬಲ; ತೇಜ ಸಜ್ಜಾಗೆ ‘ಆ್ಯಕ್ಷನ್​ ಪ್ರಿನ್ಸ್​’ ಶುಭ ಹಾರೈಕೆ
ಧ್ರುವ ಸರ್ಜಾ ಭೇಟಿ ಮಾಡಿದ ‘ಹನುಮಾನ್​’ ಚಿತ್ರತಂಡ

Updated on: Jan 07, 2024 | 1:48 PM

ಟಾಲಿವುಡ್​ ನಿರ್ದೇಶಕ ಪ್ರಶಾಂತ್ ವರ್ಮಾ ಆ್ಯಕ್ಷನ್​-ಕಟ್​ ಹೇಳಿರುವ ‘ಹನುಮಾನ್’ ಸಿನಿಮಾ (Hanuman Movie) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ನಾಯಕ ನಟನಾಗಿ ತೇಜ ಸಜ್ಜಾ (Teja Sajja) ಅಭಿನಯಿಸಿದ್ದಾರೆ. ಕನ್ನಡದ ಹುಡುಗಿ ಅಮೃತಾ ಐಯ್ಯರ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಅಂಜನಾದ್ರಿ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕತೆಯನ್ನು ‘ಹನುಮಾನ್‌’ ಸಿನಿಮಾ ಒಳಗೊಂಡಿದೆ. ಪ್ರಚಾರದ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಚಿತ್ರತಂಡದವರು ಧ್ರುವ ಸರ್ಜಾ (Dhruva Sarja) ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಗೆ ಕಾರಣ ಕೂಡ ಇದೆ.

ಎಲ್ಲರಿಗೂ ತಿಳಿದಿರುವಂತೆ ಧ್ರುವ ಸರ್ಜಾ ಅವರು ಆಂಜನೇಯನ ಪರಮ ಭಕ್ತ. ಪ್ರತಿ ಮಾತಿನ ಬಳಿಕವೂ ಅವರು ಜೈ ಆಂಜನೇಯ ಎನ್ನುತ್ತಾರೆ. ತೇಜ ಸಜ್ಜಾ ನಟಿಸಿರುವ ‘ಹನುಮಾನ್​’ ಸಿನಿಮಾದಲ್ಲೂ ಆಂಜನೇಯನ ಕುರಿತ ಕಹಾನಿ ಇದೆ. ಹಾಗಾಗಿ ಬೆಂಗಳೂರಿನಲ್ಲಿ ಧ್ರುವ ಸರ್ಜಾ ಅವರನ್ನು ‘ಹನುಮಾನ್​’ ತಂಡ ಭೇಟಿ ಮಾಡಿದೆ. ತೆಲುಗಿನ ಈ ಸಿನಿಮಾ ಕನ್ನಡದಲ್ಲೂ ಜನವರಿ 12ರಂದು ಬಿಡುಗಡೆ ಆಗಲಿದೆ. ವರಲಕ್ಷಿ ಶರತ್ ಕುಮಾರ್, ರಾಜ್ ದೀಪಕ್ ಶೆಟ್ಟಿ, ವಿನಯ್ ರೈ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಅಪ್ಪು ಜೊತೆ ನಟಿಸಬೇಕೆಂಬ ಆಸೆ ಇತ್ತಂತೆ ಅಮೃತಾ ಐಯ್ಯರ್​ಗೆ

ಧ್ರುವ ಸರ್ಜಾ ಜೊತೆ ‘ಹನುಮಾನ್​’ ತಂಡ ಒಂದಷ್ಟು ಹೊತ್ತು ಕಾಲ ಕಳೆದಿದೆ. ಸಿನಿಮಾಗಳ ಕುರಿತು ಅವರು ಚರ್ಚೆ ನಡೆಸಿದ್ದಾರೆ. ‘ಹನುಮಾನ್’ ಟ್ರೇಲರ್ ಆಕರ್ಷಕವಾಗಿ ಮೂಡಿಬಂದಿದ್ದು, ತಾವು ಕೂಡ ಈ ಸಿನಿಮಾ ನೋಡುವುದಾಗಿ ಅವರು ತಿಳಿಸಿದ್ದಾರೆ. ಕನ್ನಡದಲ್ಲಿ ಈ ಚಿತ್ರವನ್ನು ‘ಕೆಆರ್​ಜಿ ಸ್ಟುಡಿಯೋಸ್​’ ಬಿಡುಗಡೆ ಮಾಡುತ್ತಿದೆ. ಧ್ರುವ ಸರ್ಜಾ ಅವರ ಮುಂಬರುವ ಸಿನಿಮಾಗಳಾದ ‘ಕೆಡಿ’ ಮತ್ತು ‘ಮಾರ್ಟಿನ್’ಗೆ ತೇಜ ಸಜ್ಜಾ ಶುಭ ಹಾರೈಸಿದ್ದಾರೆ.

ಧ್ರುವ ಸರ್ಜಾ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ‘ಹನುಮಾನ್​’ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಇದರಲ್ಲಿ ನಿರ್ಮಾಪಕಿ ಚೈತನ್ಯಾ ರೆಡ್ಡಿ ಕೂಡ ಭಾಗಿ ಆಗಿದ್ದರು. ಈ ಸಿನಿಮಾ ಮೇಲೆ ತೇಜ ಸಜ್ಜಾ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಇದು ಆಂಜನೇಯನ ಬಗ್ಗೆ ಇರುವ ಚಿತ್ರವಲ್ಲ. ದೇವರ ಕಾರಣದಿಂದ ಒಬ್ಬ ವ್ಯಕ್ತಿಗೆ ಪವರ್ ಬಂದರೆ ಆತ ಸೂಪರ್ ಹೀರೋ ಆಗುತ್ತಾನೆ. ಆ ರೀತಿಯ ಕಥೆ ಇದರಲ್ಲಿದೆ. ಕಾಮಿಡಿ , ಆಕ್ಷನ್, ಲವ್​ಸ್ಟೋರಿ’ ಕೂಡ ಇದರಲ್ಲಿ ಇದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us