ತೆಲುಗು ಚಿತ್ರರಂಗಕ್ಕೆ ಷರತ್ತು ವಿಧಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

|

Updated on: Jul 03, 2024 | 2:22 PM

ಟಾಲಿವುಡ್ ನಿರ್ಮಾಪಕರು ಸಿನಿಮಾ ಟಿಕೆಟ್ ಹೆಚ್ಚಿಸುವಂತೆ ತೆಲಂಗಾಣ ಸರ್ಕಾರಕ್ಕೆ ಬೇಡಿಕೆ ಇಡುತ್ತಿರುತ್ತಾರೆ. ಇದೀಗ ತೆಲಂಗಾಣ ಸಿಎಂ ಟಾಲಿವುಡ್ ಮಂದಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಷರತ್ತು ಪೂರೈಸಿದಲ್ಲಿ ಮಾತ್ರ ಸರ್ಕಾರವು ಸಿನಿಮಾ ಮಂದಿಗೆ ಸಹಾಯ ಮಾಡಲಿದೆ ಎಂದಿದ್ದಾರೆ.

ತೆಲುಗು ಚಿತ್ರರಂಗಕ್ಕೆ ಷರತ್ತು ವಿಧಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ
Follow us on

ಆಂಧ್ರ ಪ್ರದೇಶದ ಸಿಎಂ ಆಗಿದ್ದ ಜಗನ್ ಮೋಹನ್ ರೆಡ್ಡಿ ತೆಲುಗು ಚಿತ್ರರಂಗದ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿದ್ದರು. ಚಿತ್ರರಂಗದವರನ್ನು ಸಂಪರ್ಕಿಸದೆ ಚಿತ್ರಮಂದಿರದ ಟಿಕೆಟ್ ದರವನ್ನು ಧಾರುಣವಾಗಿ ತಗ್ಗಿಸಿದ್ದರು. ಬೆನಿಫಿಟ್ ಶೋ, ಸ್ಪೆಷನ್ ಶೋಗಳನ್ನು ರದ್ದು ಮಾಡಿದ್ದರು. ಚಿತ್ರಮಂದಿರಗಳ ಆಡಿಟಿಂಗ್ ಮಾಡಿಸಲು ಮುಂದಾಗಿದ್ದರು. ನಿರ್ಮಾಣ ಸಂಸ್ಥೆಗಳ ವ್ಯವಹಾರದ ಮೇಲೆ ಕಣ್ಣಿರಿಸಲು ಮುಂದಾಗಿದ್ದರು. ಇದಕ್ಕೆ ತೆಲುಗು ಚಿತ್ರರಂಗ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಈಗ ಜಗನ್ ಅವರದ್ದೇ ಸರ್ಕಾರಿದಂದ ಕೆಳಗಿಳಿಸಿ ಚಿತ್ರರಂಗಕ್ಕೆ ಆತ್ಮೀಯರಾಗಿರುವ ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಅವರನ್ನು ಅಧಿಕಾರಕ್ಕೇರಿಸಲಾಗಿದೆ. ಈ ನಡುವೆ ನೆರೆಯ ತೆಲಂಗಾಣ ರಾಜ್ಯದ ಸಿಎಂ ಇದೀಗ ಟಾಲಿವುಡ್​ಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಸಿಎಂ ರೇವಂತ್ ರೆಡ್ಡಿ ಸಹ ಚಿತ್ರರಂಗಕ್ಕೆ ಬೆಂಬಲ ನೀಡುವ ವ್ಯಕ್ತಿ ಎನ್ನಲಾಗಿತ್ತು. ಆದರೆ ಇದೀಗ ರೇವಂತ್ ರೆಡ್ಡಿಯವರು, ಚಿತ್ರರಂಗದವರಿಗೆ ಸರ್ಕಾರದಿಂದ ಸಹಾಯವಾಗಬೇಕೆಂದರೆ ಅವರು ಕೆಲವು ಷರತ್ತುಗಳನ್ನು ಪಾಲಿಸಬೇಕು ಎಂದಿದ್ದಾರೆ. ಕೆಲವು ಸುಲಭವಾದ, ಕೆಲವು ಕಠಿಣವಾದ ಷರತ್ತುಗಳನ್ನು ರೇವಂತ್ ರೆಡ್ಡಿ ವಿಧಿಸಿದ್ದಾರೆ.

ಇದನ್ನೂ ಓದಿ:ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್​ ಭೇಟಿಯಾದ ಟಾಲಿವುಡ್ ದಿಗ್ಗಜ ನಿರ್ಮಾಪಕರು

ದೊಡ್ಡ ಬಜೆಟ್ ಸಿನಿಮಾಗಳ ಟಿಕೆಟ್ ದರ ಹೆಚ್ಚಿಸುವಂತೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಸರ್ಕಾರಕ್ಕೆ ಚಿತ್ರರಂಗದವರು ಮನವಿಗಳನ್ನು ಮಾಡುತ್ತಲೇ ಬಂದಿದ್ದಾರೆ. ಸಿನಿಮಾದ ಬಜೆಟ್ ಆಧರಿಸಿ ಸರ್ಕಾರಗಳು ಸಹ ಅನುಮತಿಗಳನ್ನು ನೀಡುತ್ತಾ ಬಂದಿದೆ. ಇದೀಗ ‘ಕಲ್ಕಿ 2898 ಎಡಿ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಎರಡೂ ರಾಜ್ಯಗಳಲ್ಲಿಯೂ ಅನುಮತಿ ದೊರೆತಿತ್ತು. ಆದರೆ ಇದೀಗ ಸಿಎಂ ರೇವಂತ್ ರೆಡ್ಡಿ, ಟಾಲಿವುಡ್​ನವರು ಟಿಕೆಟ್ ದರ ಹೆಚ್ಚಳ ಮನವಿ ಬಗ್ಗೆ ಮಾತನಾಡಿದ್ದಾರೆ.

‘ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ಟಿಕೆಟ್ ದರ ಹೆಚ್ಚಳಕ್ಕೆ ಮನವಿ ಮಾಡುವುದು ಸರಿಯೇ ಒಪ್ಪೋಣ ಆದರೆ ನಿಮಗೆ ಸಾಮಾಜಿಕ ಕಳಕಳಿಯೂ ಸಹ ಇರಬೇಕಾಗುತ್ತದೆ. ಸಿನಿಮಾ ನಟ-ನಟಿಯರು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಮಾದಕ ವಸ್ತು ಬಳಕೆ ವಿರುದ್ಧ, ಸೈಬರ್ ಕ್ರೈಂ ವಿರುದ್ಧ ಇನ್ನಿತರೆ ಸಾಮಾಜಿಕ ಪಿಡುಗುಗಳ ವಿರುದ್ಧ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳಬೇಕಾಗುತ್ತದೆ. ಅಲ್ಲದೆ ಸಿನಿಮಾ ಪ್ರಸಾರಕ್ಕೂ ಮುನ್ನ ಇದನ್ನು ತೋರಿಸಬೇಕಾಗುತ್ತದೆ. ಆಗಷ್ಟೆ ಸರ್ಕಾರವು ಚಿತ್ರರಂಗಕ್ಕೆ ಅಗತ್ಯವಾದ ನೆರವು ನೀಡಲಿದೆ’ ಎಂದಿದ್ದಾರೆ ರೇವಂತ್ ರೆಡ್ಡಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ