AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ ಖ್ಯಾತಿಯ ಅಬ್ದು ರೋಜಿಕ್ ಮದುವೆ; ಆ ಲಕ್ಕಿ ಹುಡುಗಿ ಯಾರು?

ಅಬ್ದು ಅವರು ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಚಾರ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ನನ್ನನ್ನು ಗೌರವಿಸುವ, ಪ್ರೀತಿಸುವ ಹುಡುಗಿ ಸಿಗುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ರೋಜಿಕ್.

‘ಬಿಗ್ ಬಾಸ್’ ಖ್ಯಾತಿಯ ಅಬ್ದು ರೋಜಿಕ್ ಮದುವೆ; ಆ ಲಕ್ಕಿ ಹುಡುಗಿ ಯಾರು?
ರೋಜಿಕ್
ರಾಜೇಶ್ ದುಗ್ಗುಮನೆ
|

Updated on: May 10, 2024 | 7:07 AM

Share

‘ಬಿಗ್ ಬಾಸ್’ (Bigg Boss) ಮೂಲಕ ಖ್ಯಾತಿ ಪಡೆದವರು ಅಬ್ದು ರೋಜಿಕ್. ಅವರನ್ನು ಹೊಸದಾಗಿ ಪರಿಚಯಿಸೋ ಅಗತ್ಯ ಇಲ್ಲ. ಕೋಟ್ಯಧಿಪತಿ ಆಗಿರೋ ಅವರು ಬಿಗ್ ಬಾಸ್​ನಲ್ಲಿ ಸಖತ್ ಸುದ್ದಿ ಆಗಿದ್ದರು. ತಜಿಕಿಸ್ತಾನ್​ ದೇಶದ ಈ ಗಾಯಕ ಈಗ ಮದುವೆ ಆಗುತ್ತಿದದ್ದಾರೆ. ಶಾರ್ಜಾದ ಅಮಿರಾ ಎಂಬ 19 ವರ್ಷದ ಯುವತಿಯನ್ನು ಅಬ್ದು ವಿವಾಹ ಆಗುತ್ತಿದ್ದಾರೆ. ಅಬ್ದು ಅವರಿಗೆ ಈಗ 20 ವರ್ಷ. ಅವರು ಕುಳ್ಳಗಿದ್ದಾರೆ. ಆದಾಗ್ಯೂ ಅಮಿರಾ ಅವರು ಇದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅಬ್ದುನ ಮದುವೆ ಆಗಲು ಒಪ್ಪಿದ್ದಾರೆ.

ಡೈಮಂಡ್ ರಿಂಗ್ ಹಿಡಿದುಕೊಂಡಿರೋ ಫೋಟೋನ ಅಬ್ದು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ನನ್ನನ್ನು ಗೌರವಿಸುವ, ಪ್ರೀತಿಸುವ ಹುಡುಗಿ ಸಿಗುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ರೋಜಿಕ್.

‘ನಿಮಗೆಲ್ಲ ಗೊತ್ತಿರುವಂತೆ ನನಗೆ 20 ವರ್ಷ. ಪ್ರೀತಿಯಲ್ಲಿ ಬೀಳಬೇಕು, ನಾನು ಪ್ರೀತಿಸೋ ಹುಡುಗಿ ನನ್ನನ್ನು ಗೌರವಿಸಬೇಕು, ಅತಿಯಾಗಿ ಪ್ರೀತಿ ಮಾಡಬೇಕು ಎನ್ನುವ ಆಸೆ ಇತ್ತು. ಆಗ ಈ ಹುಡುಗಿ ಸಿಕ್ಕಳು. ಹೇಗೆ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ. ನಾನು ಸಖತ್ ಎಗ್ಸೈಟ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಒಂದು ಸರ್​ಪ್ರೈಸ್​ಇದೆ’ ಎಂದಿರುವ ಅವರು ರಿಂಗ್ ಓಪನ್ ಮಾಡಿ ತೋರಿಸಿದ್ದಾರೆ.

ಅಬ್ದು ರೋಜಿಕ್ ಅವರು ಗಾಯಕನಾಗಿ, ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಆಗಿ ಖ್ಯಾತಿ ಪಡೆದಿದ್ದಾರೆ. ಅವರು ತಜಕಿಸ್ತಾನ್​ದವರು. ಅವರು ‘ಬಿಗ್ ಬಾಸ್ ಸೀಸನ್ 16’ರಲ್ಲಿ (2022) ಭಾಗಿ ಆಗಿ ದೊಡ್ಡ ಮಟ್ಟದ ಖ್ಯಾತಿ ಪಡೆದರು. ‘ಫಿಯರ್ ಫ್ಯಾಕ್ಟರ್: ಖತ್ರೋಂ ಕೆ ಖಿಲಾಡಿ’ಯಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಅವರಿಗೆ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಶುರು; ಇಡೀ ಥಿಯೇಟರ್ ಬುಕ್ ಮಾಡಿದ ಅಬ್ದು ರೋಜಿಕ್

ಫೆಬ್ರವರಿ ತಿಂಗಳಲ್ಲಿ ಅಬ್ದು ಸಾಕಷ್ಟು ಸುದ್ದಿ ಆಗಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅವರನ್ನು ವಿಚಾರಣೆ ಮಾಡಿದ್ದರು. ‘ಬಿಗ್ ಬಾಸ್ 16’ರ ಸ್ಪರ್ಧಿ ಶಿವ್ ಠಾಕ್ರೆ ಅವರ ಪ್ರಕರಣದಲ್ಲಿ ಅಬ್ದು ಸಾಕ್ಷಿ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.