ಕಿರುತೆರೆಗೆ ಮರಳಿದ ನಟಿ ಮಯೂರಿ; ‘ನನ್ನ ದೇವ್ರು’ ಧಾರಾವಾಹಿಗೆ ನರಸಿಂಹರಾಜು ಮೊಮ್ಮಗ ಹೀರೋ
ನಟಿ ಮಯೂರಿ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದವರು. ಅವರು ‘ನನ್ನ ದೇವ್ರು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಾಯಕನಾಗಿ ಅವಿನಾಶ್ ದಿವಾಕರ್ ನಟಿಸುತ್ತಿದ್ದಾರೆ. ಇವರು ನರಸಿಂಹರಾಜು ಅವರ ಮೊಮ್ಮಗ ಎಂಬುದು ವಿಶೇಷ. ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಸಂಜೆ 6:30ಕ್ಕೆ ವೀಕ್ಷಿಸಬಹುದು.
‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದವರು ನಟಿ ಮಯೂರಿ. ಈ ಧಾರಾವಾಹಿ ಪೂರ್ಣಗೊಂಡ ಬಳಿಕ ಅವರು ಹಿರಿತೆರೆಯಲ್ಲಿ ಬ್ಯುಸಿ ಆದರು. ಈಗ ಅವರು ಮತ್ತೆ ಕಿರುತೆರೆಗೆ ಮರಳಿದ್ದಾರೆ. ‘ನನ್ನ ದೇವ್ರು’ ಹೆಸರಿನ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಜುಲೈ 8ರಿಂದ ಈ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿಯನ್ನು ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಸಂಜೆ 6:30ಕ್ಕೆ ವೀಕ್ಷಿಸಬಹುದು. ಖ್ಯಾತ ಹಾಸ್ಯ ನಟ ನರಸಿಂಹರಾಜು ಅವರ ಮೊಮ್ಮಗ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
‘ನನ್ನ ದೇವ್ರು’ ಧಾರಾವಾಹಿಯಲ್ಲಿ ಸಣ್ಣ ಊರೊಂದರ ಬಡ ನರ್ಸ್ ಪಾತ್ರ ಮಾಡಿದ್ದಾರೆ ಮಯೂರಿ. ಅತ್ತ ಇಡೀ ಊರು ಉದ್ಯಮಿ ಸಚ್ಚಿದಾನಂದನ ಮೆಚ್ಚಿಕೊಳ್ಳುತ್ತದೆ. ಈ ವ್ಯಕ್ತಿಗೆ ಸೇರಿದ ಆಸ್ಪತ್ರೆಯಲ್ಲಿ ಕಥಾ ನಾಯಕಿ ಕೆಲಸ ಮಾಡುತ್ತಾಳೆ. ಸಚ್ಚಿದಾನಂದ ಬಳಿ ಎಲ್ಲವೂ ಇದೆ. ಆದರೆ, ಮಗಳು ದೂರ ಆಗಿದ್ದಾಳೆ. ಅವಳ ವಿಶ್ವಾಸ ಗಳಿಸಲು ಸಚ್ಚಿದಾನಂದನ ಹಂಬಲಿಸುತ್ತಿರುತ್ತಾನೆ. ಆಗ ಸಚ್ಚಿದಾನಂದನ ಬದುಕಲ್ಲಿ ಮಯೂರಿಯ ಪ್ರವೇಶವಾಗುತ್ತದೆ. ಸಚ್ಚಿದಾನಂದ್ ಬಾಳನ್ನು ಸರಿದಾರಿಗೆ ತರುವ ಹಾದಿಯಲ್ಲಿ ಮಯೂರಿ ಎದುರಿಸುವ ಸವಾಲುಗಳೇನು ಎಂಬುದೇ ಮುಂದಿನ ಕಥೆ
‘ಅಶ್ವಿನಿ ನಕ್ಷತ್ರ’ ಧಾರಾವಾಹಿಯಿಂದ ಹೆಸರಾದ ಮಯೂರಿ ಹಲವು ವರ್ಷಗಳ ಬಳಿಕ ಟಿವಿಗೆ ಮರಳುತ್ತಿದ್ದಾರೆ. ನಾಯಕನಾಗಿ ಅವಿನಾಶ್ ದಿವಾಕರ್ ನಟಿಸುತ್ತಿದ್ದಾರೆ. ಇವರು ನರಸಿಂಹರಾಜು ಅವರ ಮೊಮ್ಮಗ ಎಂಬುದು ವಿಶೇಷ. ಇವರೊಟ್ಟಿಗೆ ಯುಕ್ತಾ ಮಲ್ನಾಡ್, ವಿ ಮನೋಹರ್, ಸ್ವಾತಿ, ನಿಶ್ಚಿತಾ ಗೌಡ, ರೇಖಾದಾಸ್, ಮಾಲತಿ ಸುಧೀರ್, ರವಿ ಬ್ರಹ್ಮ, ಯಮುನಾ ಶ್ರೀನಿಧಿ, ಅಭಿಷೇಕ್ ಶ್ರೀಕಾಂತ್ ಸೇರಿ ಅನೇಕರು ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಈ ಸುಂದರ ದೃಶ್ಯ ನೋಡಿದ ಮರುಕ್ಷಣವೇ ನಾನು ಕಳೆದು ಹೋದೆ, ಹೇಗಿದೆ ನೋಡಿ ಮಯೂರಿ ನೃತ್ಯ
ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ಅವರು ‘ನನ್ನ ದೇವ್ರು’ ಧಾರಾವಾಹಿಯನ್ನು ನಿರ್ಮಿಸಿದ್ದಾರೆ. ಇತ್ತೀಚಿಗೆ ಬೆಳ‌್ಳಿ ತೆರೆಯ ಮೇಲೆ ಖಳನಟನಾಗಿ ಗಮನ ಸೆಳೆಯುತ್ತಿರುವ ರಮೇಶ್ ಇಂದಿರಾ ‘ನನ್ನ ದೇವ್ರು’ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.