‘ಮೋದಿ ಮೀಟ್ ಮಾಡೋಕೆ ಎಷ್ಟು ಹಣ ಪಡೆದ್ರಿ’ ಎಂದವರಿಗೆ ಅಯ್ಯೋ ಶ್ರದ್ಧಾ ಕೊಟ್ಟ ಖಡಕ್ ಉತ್ತರ ಇದು

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಅನುಭವವನ್ನು ಕಾಮಿಡಿಯನ್ ಅಯ್ಯೋ ಶ್ರದ್ಧಾ ಅವರು ಹಂಚಿಕೊಂಡಿದ್ದಾರೆ. ಯಶ್ ಮತ್ತು ರಿಷಬ್ ಶೆಟ್ಟಿ ಅವರೊಂದಿಗೆ ನಡೆದ ಈ ಭೇಟಿಯ ನಂತರ, ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಬಂದ ಕೆಲವು ಪ್ರತಿಕ್ರಿಯೆಗಳು ಅವರನ್ನು ಆಶ್ಚರ್ಯಗೊಳಿಸಿವೆ. ಈ ಬಗ್ಗೆ ಅವರು ವಿವರಿಸಿದ್ದರು.

‘ಮೋದಿ ಮೀಟ್ ಮಾಡೋಕೆ ಎಷ್ಟು ಹಣ ಪಡೆದ್ರಿ’ ಎಂದವರಿಗೆ ಅಯ್ಯೋ ಶ್ರದ್ಧಾ ಕೊಟ್ಟ ಖಡಕ್ ಉತ್ತರ ಇದು
ಶ್ರದ್ಧಾ-ಮೋದಿ

Updated on: Sep 17, 2025 | 12:41 PM

ಪ್ರಧಾನಿ ನರೇಂದ್ರ ಮೊದಿ (Narendra Modi) ಅವರಿಗೆ ಇಂದು (ಸೆಪ್ಟೆಂಬರ್ 17) ಜನ್ಮದಿನ. ಈ ವಿಶೇಷ ದಿನದಂದು ಅನೇಕ ಸೆಲೆಬ್ರಿಟಿಗಳು ಅವರಿಗೆ ಬರ್ತ್​ಡೇ ವಿಶ್ ತಿಳಿಸುತ್ತಿದ್ದಾರೆ. ಅಲ್ಲದೆ, ಮೋದಿ ಜೊತೆ ನಡೆದ ಹಲವು ಘಟನೆಗಳನ್ನು ವಿವರಿಸುತ್ತಿದ್ದಾರೆ. ಈ ವೇಳೆ ಕಾಮಿಡಿಯನ್ ಅಯ್ಯೋ ಶ್ರದ್ಧಾ ಅವರು ವಿವರಿಸಿದ ಒಂದು ಘಟನೆಯನ್ನು ನೆನಪಿಸಿಕೊಳ್ಳಲೇಬೇಕು. ಆ ಘಟನೆಯ ಬಗ್ಗೆ ಒಂದು ನೆನಪು.

ಅಯ್ಯೋ ಶ್ರದ್ಧಾ ಅವರು ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದರು. ಈ ಭೇಟಿ ವೇಳೆ ಯಶ್ ಹಾಗೂ ರಿಷಬ್ ಶೆಟ್ಟಿ ಕೂಡ ಇದ್ದರು. ಇದು ಶ್ರದ್ಧಾಗೆ ಸಾಕಷ್ಟು ಎಗ್ಸೈಟಿಂಗ್ ಅನಿಸಿತ್ತು. ಭೇಟಿ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಅವರು ಫೋಟೋ ಹಂಚಿಕೊಂಡಿದ್ದರು. ಈ ಫೋಟೋಗೆ ನಾನಾ ರೀತಿಯ ಕಮೆಂಟ್​ಗಳು ಬಂದವು. ಅದರಲ್ಲಿ ಕೆಲವು ಕಮೆಂಟ್​ಗಳು ಶ್ರದ್ಧಾ ಅವರಿಗೆ ಅಚ್ಚರಿ ತಂದಿತ್ತು.

ಶ್ರದ್ಧಾ ಸ್ಟ್ಯಾಂಡಪ್ ಕಾಮಿಡಿ ವಿಡಿಯೋ

ಇದನ್ನೂ ಓದಿ
ಊಟದ ವಿಚಾರದಲ್ಲಿ ಸಖತ್ ಮೂಡಿ ಆಗಿದ್ದ ವಿಷ್ಣುವರ್ಧನ್
‘ಪ್ರಿಯಾಂಕಾ ಗಂಭೀರ ಅಫೇರ್ ಹೊಂದಿದ್ದು ನಿಜ’; ನಿರ್ದೇಶಕನ ದೊಡ್ಡ ಹೇಳಿಕೆ
ಒಟಿಟಿಗೆ ಬಂದರೂ ಥಿಯೇಟರ್​​ನಲ್ಲಿ ಪ್ರದರ್ಶನ ಕಾಣುತ್ತಿದೆ ‘ಸು ಫ್ರಮ್ ಸೋ’
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

‘ಮೋದಿ ಭೇಟಿ ಮಾಡಿದ್ದಕ್ಕೆ ಎಷ್ಟು ಹಣ ಕೊಟ್ಟರು’ ಎಂದು ಯಾವುದೋ ವ್ಯಕ್ತಿ ಕೇಳಿದ್ದನಂತೆ. ಈ ವಿಚಾರ ಶ್ರದ್ಧಾಗೆ ಶಾಕ್ ಹಾಗೂ ಅಚ್ಚರಿ ಎರಡನ್ನೂ ತಂದಿತ್ತು. ಹೀಗಾಗಿ, ಅವರು ಈ ಬಗ್ಗೆ ಮಾತನಾಡಿದ್ದರು. ‘ಆ ವ್ಯಕ್ತಿಯ ಕಮೆಂಟ್ ನೋಡಿ ನನಗೆ ಶಾಕ್ ಆಯ್ತು. ಹಣ ಎಷ್ಟು ಕೊಟ್ಟರು ಎಂದು ಕೇಳಿದ್ದ. ನಾನು ಯಶ್ ಹಾಗೂ ರಿಷಬ್​ಗೆ ಕರೆ ಮಾಡಿ ಹಣ ಕೊಡ್ತಾ ಇದ್ರ ಎಂದು ಕೇಳೋಣ ಎಂದುಕೊಂಡಿದ್ದೆ. ಚೆಕ್​ನಲ್ಲಿ ಕೊಟ್ರಾ ಅಥವಾ ಕ್ಯಾಶ್ ಅಲ್ಲಿ ಕೊಟ್ರ ಎಂದು ಕೇಳಬೇಕಿತ್ತು’ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ: ಮೋದಿ ವಿಶೇಷ ವ್ಯಕ್ತಿ ಏಕೆ ಎಂಬುದನ್ನು ಸ್ವ ಅನುಭವದಲ್ಲಿ ವಿವರಿಸಿದ ಮಾಧವನ್

‘ಮೀಟಿಂಗ್ ದಿ ಪ್ರೈಮ್ ಮಿನಿಸ್ಟರ್’ ಹೆಸರಿನ ಸ್ಟ್ಯಾಂಡಪ್​ ಕಾಮಿಡಿಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ರಾಜ್ ಭವನದಲ್ಲಿ ಅನಿಲ್ ಕುಂಬ್ಳೆ, ಜಾವಾಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್​ನ ಒಟ್ಟಿಗೆ ಭೇಟಿ ಮಾಡಿದ್ದೆ’ ಎಂದು ಅಯ್ಯೋ ಶ್ರದ್ಧಾ ಹೇಳಿದರು. ರಾಜಭವನದಲ್ಲಿ ಈ ಭೇಟಿ ನಡೆದಿತ್ತು. ಅದು ಸಾಕಷ್ಟು ಅದ್ಭುತವಾಗಿತ್ತು ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:14 pm, Wed, 17 September 25