ಒಟಿಟಿಗೆ ಬಂದರೂ ಥಿಯೇಟರ್ನಲ್ಲಿ ಪ್ರದರ್ಶನ ಕಾಣುತ್ತಿದೆ ‘ಸು ಫ್ರಮ್ ಸೋ’; ಸಿಕ್ಕ ಶೋಗಳೆಷ್ಟು?
‘ಸು ಫ್ರಮ್ ಸೋ’ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾದ ನಂತರವೂ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯ 54ನೇ ದಿನದಂದು 1 ಲಕ್ಷ ರೂಪಾಯಿಗಳನ್ನು ಗಳಿಸಿದೆ. ಒಟ್ಟಾರೆ 122.59 ಕೋಟಿ ರೂಪಾಯಿಗಳನ್ನು ಗಳಿಸಿದ ಈ ಚಿತ್ರವು ರಾಜ್ ಬಿ. ಶೆಟ್ಟಿ ಅವರಿಗೆ ದೊಡ್ಡ ಗೆಲುವನ್ನು ತಂದುಕೊಟ್ಟಿದೆ.

ಒಂದು ಸಿನಿಮಾ ಒಟಿಟಿಗೆ ಬಂತು ಎಂದರೆ ಥಿಯೇಟರ್ನಲ್ಲಿ ಅದರ ಪ್ರದರ್ಶನ ಕೊನೆಯಾಯಿತು ಎಂದೇ ಅರ್ಥ. ಆದರೆ, ಕೆಲವು ಸಿನಿಮಾಗಳ ವಿಚಾರದಲ್ಲಿ ಈ ರೀತಿ ಆಗೋದಿಲ್ಲ. ಕೆಲವು ಸಿನಿಮಾಗಳು ಒಟಿಟಿಗೆ ಕಾಲಿಟ್ಟ ಬಳಿಕವೂ ಥಿಯೇಟರ್ನಲ್ಲಿ ಒಳ್ಳೆಯ ಪ್ರದರ್ಶನ ಕಂಡ ಉದಾಹರಣೆ ಇದೆ. ಇದಕ್ಕೆ ‘ಸು ಫ್ರಮ್ ಸೋ’ (Su From So) ಉತ್ತಮ ಉದಾಹರಣೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿ ಒಟಿಟಿಗೆ ಕಾಲಿಟ್ಟಿದೆ. ವಿಶೇಷ ಎಂದರೆ, ಈಗಲೂ ಚಿತ್ರ ಥಿಯೇಟರ್ನಲ್ಲಿ ಪ್ರದರ್ಶನ ಕಾಣುತ್ತಿದೆ.
‘ಸು ಫ್ರಮ್ ಸೋ’ ಸಿನಿಮಾ ಸೆಪ್ಟೆಂಬರ್ 9ರಂದು ಒಟಿಟಿಗೆ ಬಂದಿದೆ. ಆದ ಬಳಿಕವೂ ಚಿತ್ರ ಥಿಯೇಟರ್ನಲ್ಲಿ ಪ್ರದರ್ಶನ ಕಾಣೋದನ್ನು ಮುಂದುವರಿಸಿದೆ. ಬೆಂಗಳೂರಿನಲ್ಲಿ ಚಿತ್ರಕ್ಕೆ 15ಕ್ಕೂ ಅಧಿಕ ಶೋಗಳನ್ನು ನೀಡಲಾಗಿದೆ. ಈಗಲೂ ಕೆಲವರು ಈ ಚಿತ್ರವನ್ನು ಥಿಯೇಟರ್ನಲ್ಲಿ ನೋಡೋದನ್ನು ಮುಂದುವರಿಸಿದ್ದಾರೆ. ಈ ಕಾರಣದಿಂದಲೇ ಸಿನಿಮಾಗೆ ಕೆಲವು ಶೋಗಳನ್ನು ನೀಡಲಾಗಿದೆ.
ಸಿನಿಮಾ ಸಣ್ಣ ಪ್ರಮಾಣದಲ್ಲಿ ಗಳಿಕೆಯನ್ನು ಕೂಡ ಮಾಡುತ್ತಿದೆ. ಹೌದು, ‘ಸು ಫ್ರಮ್ ಸೋ’ ಸಿನಿಮಾ 54ನೇ ದಿನಕ್ಕೆ 1 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಒಟಿಟಿಗೆ ಬಂದ ಬಳಿಕವೂ ಚಿತ್ರ ಇಷ್ಟು ಒಳ್ಳೆಯ ಕಲೆಕ್ಷನ್ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ಇದನ್ನೂ ಓದಿ: ‘ಸು ಫ್ರಮ್ ಸೋ’ ಬಳಿಕ ಭಾನು ಜೊತೆ ಹೊಸ ಪ್ರಾಜೆಕ್ಟ್ ಘೋಷಿಸಿದ ರಾಜ್ ಬಿ ಶೆಟ್ಟಿ
‘ಸು ಫ್ರಮ್ ಸೋ’ ಒಟ್ಟಾರೆ ಕಲೆಕ್ಷನ್ ವಿವರ
‘ಸು ಫ್ರಮ್ ಸೋ’ ಸಿನಿಮಾ ವಿಶ್ವ ಬಕ್ಸ್ ಆಫೀಸ್ನಲ್ಲಿ 122.59 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಈ ಚಿತ್ರ 92.1 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಭಾರತದ ಗ್ರಾಸ್ ಕಲೆಕ್ಷನ್ 108 ಕೋಟಿ ರೂಪಾಯಿ ಆಗಿದೆ. ಇನ್ನು, ಮುಂದಿನ ದಿನಗಳಲ್ಲಿ ಸಿನಿಮಾದಿಂದ ಕಲೆಕ್ಷನ್ ನಿರೀಕ್ಷಿಸೋದು ಅಸಾಧ್ಯ.
ರಾಜ್ ಬಿ. ಶೆಟ್ಟಿಗೆ ದೊಡ್ಡ ಗೆಲುವು
ರಾಜ್ ಬಿ. ಶೆಟ್ಟಿ ಅವರು ‘ಸು ಫ್ರಮ್ ಸೋ’ ಸಿನಿಮಾ ದೊಡ್ಡ ಗೆಲುವು ಕಂಡಿದೆ. ಈ ಚಿತ್ರದ ಮೂಲಕ ರಾಜ್ ಬಿ ಶೆಟ್ಟಿ ಅವರು ಗೆದ್ದು ಬೀಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನು ನೀಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








