‘ನೀನು ಏನು ಅನ್ನೋದು ಇಲ್ಲಿ ಯಾರಿಗೂ ಗೊತ್ತಿಲ್ಲ, ನಿನ್ನದು ಮಗು ಮನಸ್ಸು’; ವಿನಯ್​ಗೆ​ ಪತ್ನಿಯ ಧೈರ್ಯ

ಮುಂಜಾನೆಯೇ ದೊಡ್ಮನೆಗೆ ಅಕ್ಷತಾ ಅವರ ಆಗಮನ ಆಗಿದೆ. ವಿನಯ್ ಇನ್ನೂ ಮಲಗಿದ್ದಾಗಲೇ ಅವರು ಆಗಮಿಸಿದರು. ವಿನಯ್​ನ ಎಬ್ಬಿಸಿ ಸರ್​ಪ್ರೈಸ್ ಕೊಟ್ಟರು. ಪತ್ನಿಯನ್ನು ನೋಡಿ ವಿನಯ್ ಖುಷಿಪಟ್ಟರು.

‘ನೀನು ಏನು ಅನ್ನೋದು ಇಲ್ಲಿ ಯಾರಿಗೂ ಗೊತ್ತಿಲ್ಲ, ನಿನ್ನದು ಮಗು ಮನಸ್ಸು’; ವಿನಯ್​ಗೆ​ ಪತ್ನಿಯ ಧೈರ್ಯ
ಅಕ್ಷತಾ-ವಿನಯ್

Updated on: Dec 29, 2023 | 7:59 AM

ವಿನಯ್ ಗೌಡ (Vinay Gowda) ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಶ್ರಮ ಹಾಕಿ ಆಟ ಆಡುತ್ತಿದ್ದಾರೆ. ಅವರು ಈ ಮೊದಲು ಸಖತ್ ವೈಲೆಂಟ್ ಆಗಿ ನಡೆದುಕೊಂಡಿದ್ದರು. ಅವರ ಆಟ ನೋಡಿ ಎಲ್ಲರಿಗೂ ಶಾಕ್ ಆಗಿತ್ತು. ಅವರು ನಡೆದುಕೊಂಡ ರೀತಿಯನ್ನು ಅನೇಕರು ಟೀಕೆ ಮಾಡಿದ್ದರು. ಮನೆಯವರಿಗೆ ಬೆದರಿಕೆ ಬಂದಿದೆ ಎಂಬ ವಿಚಾರವನ್ನು ಪವಿ ಪೂವಪ್ಪ ಅವರು ವಿನಯ್ ಬಳಿ ಹಂಚಿಕೊಂಡಿದ್ದರು. ಈ ವಿಚಾರ ಕೇಳಿ ವಿನಯ್ ಶಾಕ್ ಆಗಿದ್ದರು. ಬಾತ್​ರೂಂಗೆ ಹೋಗಿ ಕಣ್ಣೀರು ಹಾಕಿದ್ದರು. ಈಗ ವಿನಯ್ ಅವರ ಪತ್ನಿ ದೊಡ್ಮನೆಗೆ ಬಂದು ಪತಿಗೆ ಬೆಂಬಲ ಸೂಚಿಸಿದ್ದಾರೆ.

ಮುಂಜಾನೆಯೇ ದೊಡ್ಮನೆಗೆ ಅಕ್ಷತಾ ಅವರ ಆಗಮನ ಆಗಿದೆ. ವಿನಯ್ ಇನ್ನೂ ಮಲಗಿದ್ದಾಗಲೇ ಅವರು ಆಗಮಿಸಿದರು. ವಿನಯ್​ನ ಎಬ್ಬಿಸಿ ಸರ್​ಪ್ರೈಸ್ ಕೊಟ್ಟರು. ಪತ್ನಿಯನ್ನು ನೋಡಿ ವಿನಯ್ ಖುಷಿಪಟ್ಟರು. ಆ ಬಳಿಕ ಗಾರ್ಡನ್ ಏರಿಯಾದಲ್ಲಿ ಕುಳಿತು ಕಷ್ಟ ಸುಖ ಮಾತನಾಡಿದರು ಅಕ್ಷತಾ ಹಾಗೂ ವಿನಯ್.

ಹೊರಗೆ ತುಂಬಾ ಕೆಟ್ಟದಾಗಿ ಕಾಣುತ್ತಿದೆಯೇ ಎಂದು ವಿನಯ್ ಪ್ರಶ್ನೆ ಮಾಡಿದರು. ‘ನೀನು ತುಂಬಾ ಚೆನ್ನಾಗಿ ಆಡ್ತಾ ಇದೀಯಾ. ನೀನು ಏನು ಅನ್ನೋದು ಇಲ್ಲಿಯವರಿಗೆ ತಿಳಿದಿಲ್ಲ. ನೀನು ಮಗು ಅನ್ನೋದು ಇಲ್ಲಿಯವರಿಗೆ ಗೊತ್ತಿಲ್ಲ. ನೀನು ಹೇಗೆ ಇದ್ದರೂ ಚೆನ್ನಾಗಿ ಕಾಣಸ್ತೀಯಾ. ಹೀಗೆಯೇ ಆಡು’ ಎಂದರು ಅಕ್ಷತಾ.

ಇದನ್ನೂ ಓದಿ: ‘ಪ್ಲೀಸ್ ಶಟ್​ಅಪ್​’; ಸಂಗೀತಾ ಹಾಗೂ ವಿನಯ್ ಗೌಡ ಮಧ್ಯೆ ಮತ್ತೆ ದ್ವೇಷದ ಕಿಡಿ

ವಿನಯ್ ಗೌಡ ಅವರಿಗೋಸ್ಕರ ಮಟನ್ ಬಿರ್ಯಾನಿ ತಂದಿದ್ದಾರೆ ಅವರ ಪತ್ನಿ. ಇದನ್ನು ಖುಷಿ ಖುಷಿಯಿಂದ ತಿಂದರು. ಆ ಬಳಿಕ ಎಲ್ಲರ ಜೊತೆಯೂ ವೈಯಕ್ತಿಕವಾಗಿ ಮಾತನಾಡಿದರು. ವಿನಯ್ ಅವರ ಮಗ ಕೂಡ ಬಂದರು. ಖುಷಿ ಖುಷಿಯಿಂದ ಅವರು ಸಮಯ ಕಳೆದು ಹೋದರು. ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ