ಟಿವಿಗೆ ಬಂತು ‘ಪುಷ್ಪ 2’, ಎಲ್ಲಿ ಮತ್ತು ಯಾವಾಗ ನೋಡಬಹುದು?

Allu Arjun movies: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಚಿತ್ರಮಂದಿರದಲ್ಲಿ ಹಲವು ದಾಖಲೆಗಳನ್ನು ಬರೆದಿದೆ, ಒಟಿಟಿಯಲ್ಲಿಯೂ ಸಹ ದಾಖಲೆಯ ಸಮಯ ವೀಕ್ಷಣೆ ಕಂಡಿದೆ. ಇದೀಗ ಈ ಸಿನಿಮಾ ಟಿವಿಗೆ ಬಂದಿದ್ದು, ಹಲವು ಭಾಷೆಗಳಲ್ಲಿ ಒಂದೇ ದಿನ ಟಿವಿಯಲ್ಲಿ ಪ್ರದರ್ಶನ ಕಾಣಲಿದೆ.

ಟಿವಿಗೆ ಬಂತು ‘ಪುಷ್ಪ 2’, ಎಲ್ಲಿ ಮತ್ತು ಯಾವಾಗ ನೋಡಬಹುದು?
Pushpa 2

Updated on: Apr 06, 2025 | 8:03 AM

ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿ, ಸುಕುಮಾರ್ ನಿರ್ದೇಶನ ಮಾಡಿರುವ ‘ಪುಷ್ಪ 2’ ಸಿನಿಮಾ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್​ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ‘ಪುಷ್ಪ 2’ ಸಿನಿಮಾದ ಅಬ್ಬರಕ್ಕೆ ಹಲವು ಹಳೆಯ ದಾಖಲೆಗಳು ದೂಳಿಪಟವಾಗಿವೆ. ಆ ನಂತರ ಒಟಿಟಿಯಲ್ಲಿ ಬಿಡುಗಡೆ ಆಗಿ ಅಲ್ಲಿಯೂ ಸಹ ದಾಖಲೆಗಳನ್ನು ರಚಿಸಿದೆ ಈ ಸಿನಿಮಾ. ಇದೀಗ ‘ಪುಷ್ಪ 2’ (Pushpa 2) ಸಿನಿಮಾ ಟಿವಿಯಲ್ಲಿ ಬಿಡುಗಡೆ ಆಗಲು ರೆಡಿಯಾಗಿದೆ. ಇದಕ್ಕಾಗಿ ನೆಟ್​ಫ್ಲಿಕ್ಸ್​ ರೀತಿಯ ಯೋಜನೆಯನ್ನು ಮಾಡಲಾಗಿದೆ.

ಏಪ್ರಿಲ್ 13 ರಂದು ‘ಪುಷ್ಪ 2’ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಿದೆ. ಇದೇ ಮೊದಲ ಬಾರಿಗೆ ‘ಪುಷ್ಪ 2’ ಸಿನಿಮಾ ಟಿವಿಯಲ್ಲಿ ಪ್ರಸಾರ ಆಗಲಿದ್ದು, ದಾಖಲೆ ಮೊತ್ತದ ಟಿಆರ್​ಪಿಯನ್ನು ಬಾಚುವ ನಿರೀಕ್ಷೆ ಹುಟ್ಟಿಸಿದೆ. ವಿಶೇಷವೆಂದರೆ, ‘ಪುಷ್ಪ 2’ ಕಳೆದ ಡಿಸೆಂಬರ್​ನಲ್ಲಿ ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಅಂತೆಯೇ ಟಿವಿಗೂ ಸಹ ಏಕಕಾಲದಲ್ಲಿ ಒಂದೇ ದಿನ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಏಪ್ರಿಲ್ 13 ರಂದು ‘ಪುಷ್ಪ 2’ ಸಿನಿಮಾ ತೆಲುಗು, ಕನ್ನಡ, ತಮಿಳು ಇನ್ನೂ ಕೆಲ ಭಾಷೆಗಳಲ್ಲಿ ವಿವಿಧ ಚಾನೆಲ್​ಗಳಲ್ಲಿ ಪ್ರದರ್ಶನವಾಗಲಿದೆ. ‘ಪುಷ್ಪ 2’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆದಾಗ ಅದಕ್ಕಾಗಿ ವಿಶೇಷ ಜಾಹೀರಾತುಗಳನ್ನು ನಿರ್ಮಿಸಿ ಪ್ರದರ್ಶಿಸಲಾಗಿತ್ತು. ಅಂತೆಯೇ ‘ಪುಷ್ಪ 2’ ಟಿವಿ ಪ್ರೀಮಿಯರ್​ಗಾಗಿ ತೆಲುಗಿನಲ್ಲಿ ವಿಶೇಷ ಜಾಹಿರಾತುಗಳನ್ನು ನಿರ್ಮಿಸಿ ಪ್ರದರ್ಶಿಸಲಾಗುತ್ತಿದೆ. ತೆಲುಗಿನಲ್ಲಿ ‘ಪುಷ್ಪ 2’ ಸ್ಟಾರ್ ಮಾನಲ್ಲಿ ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ:ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ ಸೂಪರ್ ಹಿಟ್ ಸಿನಿಮಾ ‘ಪುಷ್ಪ 2’

ಕನ್ನಡದಲ್ಲಿಯೂ ಸಹ ‘ಪುಷ್ಪ 2’ ಸಿನಿಮಾ ಏಪ್ರಿಲ್ 13 ರಂದೇ ಪ್ರದರ್ಶನಗೊಳ್ಳಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಏಪ್ರಿಲ್ 13 ರ ಸಂಜೆ ಏಳು ಗಂಟೆಗೆ ‘ಪುಷ್ಪ 2’ ಸಿನಿಮಾ ಕನ್ನಡದಲ್ಲಿ ಪ್ರಸಾರವಾಗಲಿದೆ. ಅದೇ ದಿನವೇ ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ಸಹ ‘ಪುಷ್ಪ 2’ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಲಿದೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು ಸಿನಿಮಾ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್. ಸಿನಿಮಾದಲ್ಲಿ ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್, ಅನುಪಮಾ, ಶ್ರೀಲೀಲಾ ಇನ್ನೂ ಹಲವು ಪ್ರಮುಖ ನಟ-ನಟಿಯರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:25 am, Sun, 6 April 25