ವೀರುವನ್ನು ನಂಬಬೇಡಿ ಎಂದ ಸೌರವ್, ನನ್ನ ಮೇಲೆ ಕರುಣೆಯಿರಲಿ ಎಂದ ಅಮಿತಾಭ್; ಅಚ್ಚರಿಗಳನ್ನು ಹೊತ್ತುತಂದ ಕೆಬಿಸಿ

| Updated By: shivaprasad.hs

Updated on: Sep 02, 2021 | 2:17 PM

Sourav Ganguly and Virendra Sehwag: ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್​ಪತಿ’ಯಲ್ಲಿ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದರ ಹಾಸ್ಯಭರಿತ ಪ್ರೊಮೊಗಳನ್ನು ಚಾನಲ್ ಹಂಚಿಕೊಳ್ಳುತ್ತಿದ್ದು, ವೀಕ್ಷಕರು ಅವುಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ವೀರುವನ್ನು ನಂಬಬೇಡಿ ಎಂದ ಸೌರವ್, ನನ್ನ ಮೇಲೆ ಕರುಣೆಯಿರಲಿ ಎಂದ ಅಮಿತಾಭ್; ಅಚ್ಚರಿಗಳನ್ನು ಹೊತ್ತುತಂದ ಕೆಬಿಸಿ
ಗಂಗೂಲಿ, ಸೆಹ್ವಾಗ್​, ಅಮಿತಾಭ್
Follow us on

ಕೌನ್ ಬನೇಗಾ ಕರೋಡ್​ಪತಿ(Kaun Banega Crorepathi- KBC) ಸೀಸನ್ 13​ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಈ ಬಾರಿ ಕ್ರಿಕೆಟ್ ತಾರೆಯರಾದ ಸೌರವ್ ಗಂಗೂಲಿ(Sourav Ganguly) ಹಾಗೂ ವೀರೇಂದ್ರ ಸೆಹ್ವಾಗ್(Virendra Sehwag) ಹಾಟ್​ ಸೀಟ್​ನಲ್ಲಿ ಬಂದು ಕುಳಿತಿದ್ದಾರೆ. ಈ ಹಿಂದೆ ಚಾನಲ್ ಬಿಡುಗಡೆ ಮಾಡಿದ್ದ ಪ್ರೊಮೊದಲ್ಲಿ ಗಂಗೂಲಿ ಹಾಗೂ ವೀರು ಹಾಸ್ಯ ಚಟಾಕಿ ಹಾರಿಸುತ್ತಾ ಮಾತನಾಡಿದ್ದು ಸಖತ್ ಸೌಂಡ್ ಮಾಡಿತ್ತು. ಇದೀಗ ಗಂಗೂಲಿ ಅಮಿತಾಭ್ ಸೀಟಿನಲ್ಲಿ ಕುಳಿತು, ಬಿಗ್​ಬಿಯನ್ನು ಹಾಟ್​ ಸೀಟ್​ನಲ್ಲಿ ಕುಳ್ಳಿರಿಸಿದ್ದಾರೆ. ಈ ನೂತನ ಪ್ರೊಮೊ ಅಭಿಮಾನಿಗಳ ಮನಗೆದ್ದಿದ್ದು, ಕ್ರಿಕೆಟ್- ಸಿನಿ ದಿಗ್ಗಜರ ಮಾತಿನ ವರಸೆ ಗಮನ ಸೆಳೆದಿದೆ.

ದಾದಾ ಬಿಗ್​ಬಿ ಸ್ಥಾನದಲ್ಲಿ ಕುಳಿತು ಅಮಿತಾಭ್​ಗೆ ಖಡಕ್ ಷರತ್ತುಗಳನ್ನು ಹಾಕಿದ್ದಾರೆ. ಅಮಿತಾಭ್​ಗಿರುವ ಏಕೈಕ ಲೈಫ್​ಲೈನ್ ಸೆಹ್ವಾಗ್ ಮಾತ್ರ ಎಂದಿರುವ ದಾದಾ, ಬಿಗ್​ಬಿಗೆ ಸ್ಪರ್ಧೆಯ ನಿಯಮಗಳನ್ನು ವಿವರಿಸಿದ್ದಾರೆ. ಆಗ ಅಮಿತಾಭ್ ವೀರು ಕಡೆ ತಿರುಗಿ, ‘ದಯವಿಟ್ಟು ಉತ್ತರಗಳನ್ನು ಹೇಳಿಕೊಟ್ಟು ನನಗೆ ಸಹಾಯ ಮಾಡಿ’ ಎಂದು ಕೋರಿಕೊಂಡಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ಸೌರವ್, ‘ಆತನನ್ನು (ಸೆಹ್ವಾಗ್) ನಂಬಬೇಡಿ’ ಎಂದು ಕಾಲೆಳೆದು ತಮಾಷೆ ಮಾಡಿದ್ದಾರೆ.

ಸೌರವ್​ ಪ್ರಶ್ನೆ ಕೇಳುವ ಮುನ್ನ ಅವರ ಬಳಿಯೇ ತಮಾಷೆಯಾಗಿ ಕೋರಿಕೊಂಡ ಅಮಿತಾಭ್, ‘ದಯವಿಟ್ಟು ನನ್ನೆಡೆಗೆ ತುಸು ಕರುಣೆಯಿರಲಿ’ ಎಂದಿದ್ದಾರೆ. ನಂತರ ಹಾಟ್​ಸೀಟ್​ನ ಅನುಭವ ಹೇಳಿಕೊಂಡ ಅಮಿತಾಭ್, ‘ಇಲ್ಲಿ ಕುಳಿತಾಗ ಸ್ಪರ್ಧಿಗಳಿಗೆ ಯಾವ ಅನುಭವವಾಗುತ್ತದೆ ಎಂದು ನನಗೀಗ ಅರಿವಾಗುತ್ತಿದೆ’ ಎಂದಿದ್ದಾರೆ. ಇದಕ್ಕೆ ವೀರು ಹಾಗೂ ದಾದಾ ಮನಸಾರೆ ನಕ್ಕಿದ್ದಾರೆ.

ಈ ಹಿಂದೆ ಹಂಚಿಕೊಳ್ಳಲಾಗಿದ್ದ ಪ್ರೊಮೊದಲ್ಲಿ ಬಹುತೇಕರಿಗೆ ಗೊತ್ತಿಲ್ಲದ ಸಂಗತಿಯೊಂದನ್ನು ತೆರೆದಿಡಲಾಗಿತ್ತು. ಅದೇನೆಂದರೆ,  ಸೆಹ್ವಾಗ್​ ಅವರು ಕ್ರಿಕೆಟ್​ ಮೈದಾನದಲ್ಲಿ ಬಾಲಿವುಡ್​ ಹಾಡುಗಳನ್ನು ಗುನುಗುತ್ತಿದ್ದರಂತೆ! ಆ ಬಗ್ಗೆ ಅಮಿತಾಭ್​ ವಿಚಾರಿಸಿದಾಗ ಹಲವು ಫನ್ನಿ ಸಂಗತಿಗಳನ್ನು ಸೆಹ್ವಾಗ್​ ವಿವರಿಸಿದ್ದರು. ಯಾವ ಯಾವ ಸಂದರ್ಭಕ್ಕೆ ಯಾವ ಯಾವ ಹಾಡು ಮತ್ತು ಡೈಲಾಗ್​ ಸೂಕ್ತ ಆಗುತ್ತದೆ ಎಂದು ಅವರು ಅಣಕ ಮಾಡಿ ತೋರಿಸಿದ್ದರು.

ಈ ಬಾರಿಯ ಕೌನ್ ಬನೇಗಾ ಕರೋಡ್​ಪತಿಯಲ್ಲಿ ಈಗಾಗಲೇ ಹಿಇಮಾನಿ ಬಂಡೇಲಾ 1 ಕೋಟಿ ರೂಗಳನ್ನು ಗೆದ್ದಿದ್ದಾರೆ. 7 ಕೋಟಿ ರೂಗಳ ಪ್ರಶ್ನೆಗೆ ಖಚಿತ ಉತ್ತರ ತಿಳಿದಿರದ ಕಾರಣ, ಅವರು ಆ ಪ್ರಶ್ನೆಯನ್ನು ಕ್ವಿಟ್ ಮಾಡಿ 1 ಕೋಟಿ ರೂ ಪಡೆದುಕೊಂಡರು. 2000ನೇ ಇಸವಿಯಲ್ಲಿ ಕೌನ್ ಬನೇಗಾ ಕರೋಡ್​ಪತಿ ಪ್ರಾರಂಭವಾಗಿದ್ದು, ಅಮಿತಾಭ್ ಅದರ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪಾರ ಯಶಸ್ಸನ್ನು ಗಳಿಸಿರುವ ಈ ಕಾರ್ಯಕ್ರಮದಲ್ಲಿ, ಎಲ್ಲಾ ಪ್ರಶ್ನೆಗಳಿಗೆ ಸರಿಯುತ್ತರ ನೀಡಿದವರು 1 ಕೋಟಿ ರೂಗಳ ಬೃಹತ್ ಮೊತ್ತವನ್ನು ಗೆಲ್ಲುತ್ತಿದ್ದರು. ಪ್ರಸ್ತುತ ಈ ಮೊತ್ತ 7 ಕೋಟಿ ರೂಗಳಿಗೆ ಏರಿಕೆಯಾಗಿದೆ.

ಇದನ್ನೂ ಓದಿ:

‘ಕರೋಡ್​ಪತಿ’ ಶೋನಲ್ಲಿ ಗಂಗೂಲಿ, ಸೆಹ್ವಾಗ್​; ಅಮಿತಾಭ್​ ಎದುರು ಕ್ರಿಕೆಟ್​ ದಿಗ್ಗಜರ ಸಖತ್ ಮಸ್ತಿ

Bheemla Nayak Song: ಖದರ್ ಲುಕ್​ನಲ್ಲಿ ಪವನ್ ಕಲ್ಯಾಣ್; ‘ಭೀಮ್ಲಾ ನಾಯಕ್’ ಟೈಟಲ್ ಟ್ರಾಕ್ ಬಿಡುಗಡೆ

(Amitabh Bachchan in Hot seat and Virendra Sehwag is his life line Sourav Ganguly host the KBC in a special episode)