KBC 13: ₹ 50 ಲಕ್ಷ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?

Amitabh Bachchan: ಕೆಬಿಸಿ 13ರಲ್ಲಿ ಇತ್ತೀಚೆಗೆ ಸ್ಪರ್ಧಿಯೋರ್ವರು ₹ 25 ಲಕ್ಷ ಹಣವನ್ನು ಗೆದ್ದಿದ್ದಾರೆ. ಆದರೆ ಅವರಿಗೆ ₹ 50 ಲಕ್ಷ ಮೊತ್ತದ ಪ್ರಶ್ನೆಗೆ ಉತ್ತರ ತೋಚಲಿಲ್ಲ. ನಿಮಗೆ ಉತ್ತರ ತಿಳಿದಿದೆಯೇ? ಪ್ರಶ್ನೆ ಇಲ್ಲಿದೆ.

KBC 13: ₹ 50 ಲಕ್ಷ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?
ಅಮಿತ್​ಭಾಯ್ ಹಾಗೂ ಅಮಿತಾಭ್ ಬಚ್ಚನ್
Follow us
TV9 Web
| Updated By: shivaprasad.hs

Updated on: Nov 03, 2021 | 10:12 AM

ಕೆಬಿಸಿ 13: ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿಯ 13ನೇ ಸೀಸನ್ ಚೆನ್ನಾಗಿ ಮೂಡಿಬರುತ್ತಿದ್ದು, ಇದುವರೆಗೆ ಇಬ್ಬರು ಕೋಟ್ಯಧಿಪತಿಗಳು ಹೊರಹೊಮ್ಮಿದ್ದಾರೆ. ಇದರೊಂದಿಗೆ ಹಲವು ಸ್ಪರ್ಧಿಗಳು ಉತ್ತಮ ಆಟವಾಡಿ, ಒಳ್ಳೆಯ ಮೊತ್ತವನ್ನು ಗಳಿಸುತ್ತಿದ್ದಾರೆ. ಇತ್ತೀಚೆಗೆ ಗುಜರಾತ್​ ರಾಜ್ಯದ ಸಿಹೋರ್​​ನ ಸ್ಪರ್ಧಿಯೋರ್ವರು ಭಾಗವಹಿಸಿದ್ದರು. 39 ವರ್ಷದ ಅಮಿತ್​ಭಾಯ್ ದೀಪಕ್​ಭಾಯ್ ಜಾಧವ್ ಹಾಟ್​​ಸೀಟ್​ನಲ್ಲಿ ಕುಳಿತು ₹ 25 ಲಕ್ಷದ ಒಡೆಯರಾದರು. ಅಚ್ಚರಿಯ ಸಂಗತಿಯೆಂದರೆ ₹ 6.4 ಲಕ್ಷದ ಪ್ರಶ್ನೆಗೆ ಉತ್ತರಿಸುವ ವೇಳೆಗಾಗಲೇ ಅಮಿತ್​ಭಾಯ್ ತಮ್ಮೆಲ್ಲಾ ಲೈಫ್​ಲೈನ್​ಗಳನ್ನು ಕಳೆದುಕೊಂಡಿದ್ದರು. ಆದ್ದರಿಂದಲೇ ಅವರಿಗೆ ₹ 50 ಲಕ್ಷದ ಪ್ರಶ್ನೆಗೆ ಉತ್ತರ ತಿಳಿಯದೇ ₹ 25 ಲಕ್ಷಕ್ಕೆ ತೃಪ್ತಿಪಡಬೇಕಾಯಿತು.

ಅಮಿತ್​ಭಾಯ್ ₹ 20,000ದ ಪ್ರಶ್ನೆಯ ಮೂಲಕ ತಮ್ಮ ಗೆಲುವಿನ ಓಟವನ್ನುಆರಂಭಿಸಿದರು. ಆದರೆ ಅವರ ಹಾದಿ ಸುಲಭದ್ದೇನೂ ಆಗಿರಲಿಲ್ಲ. ಕೆಲವು ಪ್ರಶ್ನೆಗಳಿಗೆ ಸುಲಭದಲ್ಲಿ ಉತ್ತರಿಱಉತ್ತಿದ್ದ ಅವರು, ಮಹಾತ್ಮಾ ಗಾಂಧಿ ಕುರಿತಾದ ಪ್ರಶ್ನೆಗೆ ಲೈಫ್ ಲೈನ್ ಬಳಸಿದರು. ಆದರೆ ಅವರಿಗೆ ₹ 50 ಲಕ್ಷದ ಪ್ರಶ್ನೆ ಸಮೀಪಿಸುವ ವೇಳೆ ಯಾವುದೇ ಲೈಫ್ ಲೈನ್ ಉಳಿದಿರಲಿಲ್ಲ. ಅದಕ್ಕೆ ಸರಿಯಾದ ಉತ್ತರ ತಿಳಿಯದ ಕಾರಣ, ಸ್ಪರ್ಧೆಯನ್ನು ಕ್ವಿಟ್ ಮಾಡುವ ನಿರ್ಧಾರಕ್ಕೆ ಬಂದರು.

ಅಮಿತ್​ಭಾಯ್ ಅವರಿಗೆ ₹ 50 ಲಕ್ಷ ಮೊತ್ತದ ಪ್ರಶ್ನೆ ಹೀಗಿತ್ತು. ‘ಗಿನ್ನೆಸ್ ದಾಖಲೆಯ ಪ್ರಕಾರ, ಯಾವ ದೇಶಗಳು ಅತ್ಯಧಿಕ ಅಧಿಕೃತ ರಾಷ್ಟ್ರೀಯ ಭಾಷೆಗಳನ್ನು ಹೊಂದಿವೆ?’ ಈ ಪ್ರಶ್ನೆಗೆ ಜಿಂಬಾಬ್ವೆ, ಇಥಿಯೋಪಿಯಾ, ಮಡಗಾಸ್ಕರ್ ಹಾಗೂ ಎರಿಟ್ರಿಯಾ ಎಂಬ ನಾಲ್ಕು ಆಯ್ಕೆಗಳಿದ್ದವು. ಆದರೆ ಇದಕ್ಕೆ ಖಚಿತ ಉತ್ತರ ತಿಳಿಯದ ಕಾರಣ ಹಾಗೂ ಯಾವುದೇ ಲೈಫ್ ಲೈನ್ ಇರದ ಕಾರಣ, ಅಮಿತ್​​ಭಾಯ್ ಕ್ವಿಟ್ ಮಾಡುವ ನಿರ್ಧಾರ ಕೈಗೊಂಡರು. ಈ ಪ್ರಶ್ನೆಗೆ ಸರಿಯಾದ ಉತ್ತರ ಜಿಂಬಾಬ್ವೆಯಾಗಿತ್ತು.

ಅಮಿತ್​ಭಾಯ್ ತಾವು ಗೆದ್ದ ₹ 25 ಲಕ್ಷ ಹಣವನ್ನು ಹೇಗೆ ವಿನಿಯೋಗಿಸುತ್ತೇನೆ ಎಂಬುದನ್ನೂ ವೇದಿಕೆಯಲ್ಲಿ ತಿಳಿಸಿದ್ದಾರೆ. ಬ್ಯುಸಿನೆಸ್​​ಗೆಂದು ತೆಗೆದುಕೊಂಡಿದ್ದ ಲೋನ್ ತೀರಿಸುತ್ತಾರಂತೆ. ಜೊತೆಗೆ ಅವರ ಪತ್ನಿಗೆ ಬಂಗಾರದ ಮಂಗಳ ಸೂತ್ರವನ್ನು ಕೊಡಿಸುತ್ತಾರಂತೆ. ಇದರೊಂದಿಗೆ ಲೇಹ್ ಹಾಗೂ ಲಡಾಖ್​ಗೆ ಬೈಕ್​ನಲ್ಲಿ ಪ್ರಯಾಣಿಸಬೇಕು ಎಂಬ ಕನಸೂ ಅವರಿಗಿದೆಯಂತೆ. ಉಳಿದ ಹಣವನ್ನು ಮತ್ತೆ ಉದ್ಯಮದಲ್ಲಿ ತೊಡಗಿಸುತ್ತಾರಂತೆ.

ಇದನ್ನೂ ಓದಿ:

ಸ್ಪರ್ಧಿ ತನ್ನೊಂದಿಗೆ ಫ್ಲರ್ಟ್ ಮಾಡಿದಾಗ ಕೆಬಿಸಿ ನಿರ್ಮಾಪಕರಿಗೆ ಶೋ ನಿಲ್ಲಿಸಲು ಹೇಳಿದ ಅಮಿತಾಭ್!; ಕಾರಣವೇನು?

ಕೆಬಿಸಿಯಲ್ಲಿ 1 ಕೋಟಿ ಮೊತ್ತದ ಈ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ