ಪತ್ನಿಯ ತಂಟೆಗೆ ಬಂದ ಎಂಎಲ್​ಎಗೆ ಪವನ್ ಕಲ್ಯಾಣ್ ಸ್ಟೈಲ್​ನಲ್ಲಿ ಪಾಠ ಕಲಿಸಿದ ಗೌತಮ್ ದೀವಾನ್

'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ದೀವಾನ್ ಐದು ವರ್ಷಗಳ ನಂತರ ಮರಳಿ ಭೂಮಿಕಾಳನ್ನು ಹುಡುಕಿದ್ದಾನೆ. ಎಂಎಲ್ಎಯಿಂದ ಭೂಮಿಕಾಳಿಗೆ ತೊಂದರೆಯಾದಾಗ, ಗೌತಮ್ ಪವನ್ ಕಲ್ಯಾಣ್ ಶೈಲಿಯಲ್ಲಿ ಆತನಿಗೆ ಪಾಠ ಕಲಿಸಿದ್ದಾನೆ. ತನ್ನ ಪ್ರಭಾವ ಬಳಸಿಕೊಂಡು ಎಂಎಲ್ಎ ಹುದ್ದೆ ಕಳೆದುಕೊಳ್ಳುವಂತೆ ಮಾಡಿದ್ದಾನೆ. ಆ ಬಗ್ಗೆ ಇಲ್ಲಿದೆ ವಿವರ.

ಪತ್ನಿಯ ತಂಟೆಗೆ ಬಂದ ಎಂಎಲ್​ಎಗೆ ಪವನ್ ಕಲ್ಯಾಣ್ ಸ್ಟೈಲ್​ನಲ್ಲಿ ಪಾಠ ಕಲಿಸಿದ ಗೌತಮ್ ದೀವಾನ್
ಅಮೃತಧಾರೆ
Edited By:

Updated on: Oct 03, 2025 | 8:41 AM

‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ದೀವಾನ್ ಮರಳಿ ಫಾರ್ಮ್​ಗೆ ಮರಳಿದ್ದಾನೆ ಎನ್ನಬಹುದು. ಕಳೆದ ಐದು ವರ್ಷಗಳಿಂದ ತಲೆಮರಿಸಿಕೊಂಡು ಬಂದಿದ್ದ ಈತ ಈಗ ಭೂಮಿಕಾಳನ್ನು ಹುಡುಕಿದ್ದಾನೆ. ಆದರೆ, ಭೂಮಿಕಾ ಇವಳನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಹೀಗಿರುವಾಗಲೇ ಎಂಎಲ್​ಎ ಒಬ್ಬವನು ಭೂಮಿಕಾ ಜೊತೆ ಕಿರಿಕ್ ಮಾಡಿಕೊಂಡಿದ್ದ. ಇದಕ್ಕೆ ಗೌತಮ್ ದೀವನ್, ಪವನ್ ಕಲ್ಯಾಣ್ ಸ್ಟೈಲ್​ನಲ್ಲಿ ಉತ್ತರಿಸಿದ್ದಾನೆ.

ಪವನ್ ಕಲ್ಯಾಣ್ ಅವರು ‘ಅತ್ತಾರೆಂಟಿಕಿ ದಾರೀದಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಶ್ರೀಮಂತನಾದರೂ ಕ್ಯಾಬ್ ಡ್ರೈವರ್ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು. ಅವರ ಅತ್ತೆಗೆ ತೊಂದರೆ ಮಾಡುವ ವ್ಯಕ್ತಿಗೆ ಕ್ಯಾಬ್ ಡ್ರೈವರ್ ಆಗಿ ಬಂದು ಪವನ್ ಕಲ್ಯಾಣ್ ಪಾಠ ಕಲಿಸುತ್ತಾರೆ. ತಾವು ಎಂತಹ ಪ್ರಭಾವಿ ಎಂಬುದನ್ನು ದೂರುವಾಣಿ ಕರೆ ಮೂಲಕವೇ ತೋರಿಸುತ್ತಾರೆ.

ಇದನ್ನೂ ಓದಿ
ರಚಿತಾ ರಾಮ್​ಗೆ ಡಿ ಬಾಸ್ ದರ್ಶನ್ ಮೇಲೆ ಯಾಕೆ ಅಷ್ಟು ವಿಶೇಷ ಗೌರವ ಗೊತ್ತಾ?
ಕಾಕ್ರೋಚ್ ಸುಧಿ ಕಾರಣಕ್ಕೆ ಹೊತ್ತಿ ಉರಿಯಿತು ಬಿಗ್ ಬಾಸ್ ಮನೆ
‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಈಗ ‘ಅಮೃತಧಾರೆ’ ಧಾರಾವಾಹಿಯಲ್ಲೂ ಇದೇ ರೀತಿಯ ದೃಶ್ಯ ಬಂದಿದೆ ಎಂದರೂ ತಪ್ಪಾಗಲಾರದರು. ಭೂಮಿಕಾಳಿಗೆ ತೊಂದರೆ ಕೊಡಲು ಬಂದ ಎಂಎಲ್​ಎಗೆ ಗೌತಮ್ ದೀವಾನ್ ಬಂದು ಪಾಠ ಕಲಿಸುತ್ತಾನೆ. ಕಮಿಷನರ್​ಗೆ ಕರೆ ಮಾಡುವಂತೆ ಎಂಎಲ್​ಎ ಗೌತಮ್​​ಗೆ ಹೇಳುತ್ತಾನೆ. ಅವರು ಗೌತಮ್ ಪರ ಮಾತನಾಡುತ್ತಾರೆ. ಆ ಬಳಿಕ ಹೈ ಕಮಿಷನರ್​ಗೆ ಕರೆ ಮಾಡುತ್ತಾನೆ. ಅಲ್ಲಿಯೂ ಹಾಗೆಯೇ ಆಗುತ್ತದೆ. ನಂತರ ಬೇರೆ ದಾರಿ ಇಲ್ಲದೆ, ಹೈ ಕಮಾಂಡ್​ಗೆ ಕರೆ ಹೋಗುತ್ತದೆ. ಎಲ್ಲ ಕಡೆಗಳಲ್ಲೂ ಎಂಎಲ್​ಎಗೆ ಹಿನ್ನಡೆ ಆಗುತ್ತದೆ.

ಕರೆ ಮಾಡಿದವರೆಲ್ಲರೂ ‘ಗೌತಮ್ ಸರ್’ ಎಂದು ಮಾತನಾಡಿಸುತ್ತಾರೆ. ಇದನ್ನು ನೋಡಿ ಎಂಎಲ್​ಎ ಶಾಕ್ ಆಗುತ್ತಾನೆ. ಆ ಬಳಿಕ ಎಂಎಲ್​ಎಯನ್ನು ಹುದ್ದೆಯಿಂದಲೇ ತೆಗೆದು ಹಾಕುವ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತಾನೆ. ಸಿನಿಮೀಯ ಶೈಲಿಯಲ್ಲಿ ಧಾರಾವಾಹಿ ಮೂಡಿ ಬಂದಿದೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ವಿರೋಧದ ನಡುವೆಯೂ ‘ಕಾಂತಾರ’ ಪರ ನಿಂತ ಪವನ್ ಕಲ್ಯಾಣ್: ಹೇಳಿದ್ದೇನು?

ಸದ್ಯ ಭೂಮಿಕಾ ಕುಶಾಲನಗರವನ್ನೇ ಬಿಟ್ಟು ಹೋಗಿದ್ದಾಳೆ. ಈಗ ಆಕೆ ಎಲ್ಲಿ ಹೋಗಿದ್ದಾಳೆ ಎಂಬ ಗೊಂದಲದಲ್ಲಿ ಗೌತಮ್ ಇದ್ದಾನೆ. ಇವರು ಮತ್ತೆ ಮುಖಾಮುಖಿ ಆಗೋದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ. ಇವರು ಆದಷ್ಟು ಬೇಗ ಒಂದಾಗಬೇಕು ಎಂಬುದು ಅಭಿಮಾನಿಗಳ ಕೋರಿಕೆಯಾಗಿದೆ. ಆಕೆ ಮರಳಿ ಬೆಂಗಳೂರಿಗೆ ಬಂದಿದ್ದಾಳೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಂಗಳೂರಲ್ಲೇ ಕಥೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:39 am, Fri, 3 October 25