ಶಾಕ್ನಿಂದ ಭಾಗ್ಯಾಳಿಗೆ ಬಂತು ಮಾತು; ‘ಅಮೃತಧಾರೆ’ ಧಾರಾವಾಹಿಗೆ ದೊಡ್ಡ ಟ್ವಿಸ್ಟ್
ಭೂಮಿಕಾ ಹಾಗೂ ಗೌತಮ್ ಐದು ವರ್ಷ ಬೇರೆ ಆಗಿದ್ದರು. ಈಗ ಇಬ್ಬರೂ ಒಂದೇ ವಠಾರಕ್ಕೆ ಬಂದಿದ್ದಾರೆ. ಈ ವಿಷಯವನ್ನು ಭಾಗ್ಯಾಳಿಂದ ಮುಚ್ಚಿಡಲಾಗಿತ್ತು. ಗೌತಮ್ ಗೆಳೆಯ ಆನಂದ್ ಈ ವಿಷಯವಾಗಿ ಮಾತನಾಡುವಾಗ ಭಾಗ್ಯಾ ಕೇಳಿಸಿಕೊಂಡಿದ್ದಾಳೆ ಮತ್ತು ಭೂಮಿಕಾಳನ್ನು ಹುಡುಕಿ ಹೋಗಿದ್ದಾಳೆ. ದೇವಸ್ಥಾನದಲ್ಲಿ ಭೂಮಿಕಾ ಸಿಕ್ಕಿದ್ದಾಳೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಈಗ ದೊಡ್ಡ ತಿರುವು ಎದುರಾಗುವ ಸಮಯ. ಕಥಾ ನಾಯಕ ಗೌತಮ್ ತಾಯಿ ಭಾಗ್ಯಾಳಿಗೆ ಮಾತು ನಿಂತು ಹೋಗಿತ್ತು. ಈ ಮೊದಲು ಉಂಟಾದ ಶಾಕ್ನಿಂದ ಅವಳಿಗೆ ಈ ರೀತಿ ಆಗಿತ್ತು. ಆದರೆ, ಈಗ ಅವಳಿಗೆ ಮಾತು ಬರುವ ಸಮಯ. ಮತ್ತೆ ಉಂಟಾದ ಶಾಕ್ನಿಂದಲೇ ಭಾಗ್ಯಾಳಿಗೆ ಮಾತು ಬಂದಿದೆ ಎಂಬುದು ವಿಶೇಷ. ಅವಳಿಗೆ ಮಾತು ಬಂದಿರುವುದರಿಂದ ಧಾರಾವಾಹಿಯಲ್ಲಿ ದೊಡ್ಡ ತಿರುವನ್ನು ನಿರೀಕ್ಷಸಬಹುದು ಎನ್ನಲಾಗುತ್ತಿದೆ.
‘ಅಮೃತಧಾರೆ’ ಧಾರಾವಾಹಿ ಕಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಗೌತಮ್ ಹಾಗೂ ಭೂಮಿಕಾ ಒಟ್ಟಾಗಿ ಜೀವನ ನಡೆಸುತ್ತಿದ್ದರು. ಉಳಿದುಕೊಳ್ಳಲು ದೊಡ್ಡ ಬಂಗಲೆ ಇತ್ತು. ಗೌತಮ್ ಬಿಸ್ನೆಸ್ ಮಾಡಿಕೊಂಡು ಹಾಯಾಗಿದ್ದ. ಆದರೆ, ಗೌತಮ್ ಮಲತಾಯಿ ಶಕುಂತಲಾ ಎಲ್ಲವನ್ನೂ ಬದಲಾಯಿಸಿದ್ದಳು. ಹಣ ಹಾಗೂ ಆಸ್ತಿಯನ್ನು ಗೌತಮ್ನಿಂದ ಪಡೆಯಬೇಕು ಎಂಬ ಕಾರಣಕ್ಕೆ ಗೌತಮ್ ಹಾಗೂ ಭೂಮಿಕಾಳನ್ನು ದೂರ ಮಾಡಿ ಮನೆಯಿಂದ ಹೊರಗೆ ಕಳುಹಿಸಿದ್ದಳು ಶಕುಂತಲಾ.
ಭೂಮಿಕಾ ಹಾಗೂ ಗೌತಮ್ ಐದು ವರ್ಷ ಬೇರೆ ಆಗಿದ್ದರು. ಈಗ ಇಬ್ಬರೂ ಒಂದೇ ವಠಾರಕ್ಕೆ ಬಂದಿದ್ದಾರೆ. ಈ ವಿಷಯವನ್ನು ಭಾಗ್ಯಾಳಿಂದ ಮುಚ್ಚಿಡಲಾಗಿತ್ತು. ಗೌತಮ್ ಗೆಳೆಯ ಆನಂದ್ ಈ ವಿಷಯವಾಗಿ ಮಾತನಾಡುವಾಗ ಭಾಗ್ಯಾ ಕೇಳಿಸಿಕೊಂಡಿದ್ದಾಳೆ ಮತ್ತು ಭೂಮಿಕಾಳನ್ನು ಹುಡುಕಿ ಹೋಗಿದ್ದಾಳೆ. ದೇವಸ್ಥಾನದಲ್ಲಿ ಭೂಮಿಕಾ ಸಿಕ್ಕಿದ್ದಾಳೆ.
ಇದನ್ನೂ ಓದಿ: ಪ್ರೀ ವೆಡ್ಡಿಂಗ್ ವಿಡಿಯೋ ಹಂಚಿಕೊಂಡ ‘ಅಮೃತಧಾರೆ’ ಮೇಘಾ ಶೆಣೋಯ್
ಭೂಮಿಕಾ ದೇವರಿಗೆ ನಮಿಸುತ್ತಾ ಇರುತ್ತಾಳೆ. ಈ ವೇಳೆ ಭೂಮಿಕಾ ಸೀರೆಗೆ ಬೆಂಕಿ ಬೀಳುತ್ತದೆ. ಇದನ್ನು ಕಂಡು ಭಾಗ್ಯಾಗೆ ಶಾಕ್ ಆಗುತ್ತದೆ.ಆಕೆ ಕೂಗಬೇಕು ಎಂದರೂ ಮಾತು ಬರೋದಿಲ್ಲ. ಆದರೆ, ಆಗ ಉಂಟಾದ ಶಾಕ್ ಹಾಗೂ ಭೂಮಿಕಾ ಕಂಡ ಖುಷಿಗೆ ಮಾತು ಬಂದೇ ಬಿಡುತ್ತದೆ. ‘ಭೂಮಿಕಾ’ ಎಂದು ಭಾಗ್ಯಾ ಕೂಗುತ್ತಾಳೆ.
View this post on Instagram
ಗೌತಮ್ನಿಂದ ಭೂಮಿಕಾ ದೂರವಾಗುವ ಪ್ರಯತ್ನದಲ್ಲೇ ಇದ್ದಾಳೆ. ಈಗ ಭೂಮಿಕಾ ಹಾಗೂ ಗೌತಮ್ನ ಒಂದು ಮಾಡುವಲ್ಲಿ ಭಾಗ್ಯಾ ಪ್ರಯತ್ನಿಸಬಹುದು. ಆಕೆಗೆ ಈಗ ಮಾತು ಬಂದಿದೆ. ಹೀಗಾಗಿ, ಶಕುಂತಲಾಳ ಕೆಟ್ಟತನವನ್ನು ಬಿಚ್ಚಿಡುವ ಸಾಧ್ಯತೆ ದಟ್ಟವಾಗಿದೆ. ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಸದ್ಯ ಈ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಂಡು ಸಾಗುತ್ತಿದೆ. ಈ ಟ್ವಿಸ್ಟ್ನಿಂದ ಧಾರಾವಾಹಿ ವೀಕ್ಷಕರಿಗೆ ಮತ್ತಷ್ಟು ಇಷ್ಟ ಆಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:40 am, Tue, 2 December 25



