ಜೀ ಕನ್ನಡ ವಾಹಿನಿಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali Serial) ಪ್ರಸಾರ ಕಂಡಿತ್ತು. ಮೇಘಾ ಶೆಟ್ಟಿ, ಅನಿರುದ್ಧ್ ಜತ್ಕರ್ ಆರಂಭದಲ್ಲಿ ಈ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಅನಿರುದ್ಧ್ ಬದಲು ಹರೀಶ್ ರಾಜ್ ಈ ಪಾತ್ರ ಮಾಡಿದರು. ಈ ಧಾರಾವಾಹಿಯಲ್ಲಿ ವಯಸ್ಸಿನ ಅಂತರದ ಕಥೆ ಇತ್ತು. ಈ ಧಾರಾವಾಹಿ ಪೂರ್ಣಗೊಳ್ಳುತ್ತಿದ್ದಂತೆ ‘ಅಮೃತಧಾರೆ’ ಧಾರಾವಾಹಿ (Amruthadhare) ಪ್ರಸಾರ ಕಾಣುತ್ತಿದೆ. ಇದನ್ನು ಅನೇಕರು ‘ಜೊತೆ ಜೊತೆಯಲಿ’ ಧಾರಾವಾಹಿಗೆ ಹೋಲಿಕೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ. ಈ ಬಗ್ಗೆ ರಾಜೇಶ್ ನಟರಂಗ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹೀರೋ ಹಾಗೂ ಹೀರೋಯಿನ್ ಮಧ್ಯೆ ವಯಸ್ಸಿನ ಅಂತರ ಇತ್ತು. ಈ ಕಥೆ ಜನರಿಗೆ ಇಷ್ಟ ಆಗಿತ್ತು. ‘ಅಮೃತಧಾರೆ’ ಧಾರಾವಾಹಿ ಪ್ರೋಮೋ ಹಂಚಿಕೊಂಡಾಗ ಇದು ‘ಜೊತೆ ಜೊತೆಯಲಿ’ ರೀತಿಯ ಕಥೆ ಎಂದು ಪ್ರೇಕ್ಷಕರಿಗೆ ಅನಿಸಿತ್ತು. ಆದರೆ, ಈಗ ಆ ಅಭಿಪ್ರಾಯ ಬದಲಾಗಿದೆ. ಇದು ಸಂಪೂರ್ಣವಾಗಿ ಮದುವೆ ಹಾಗೂ ಸಂಬಂಧಗಳ ಬಗ್ಗೆ ಇರುವ ಧಾರಾವಾಹಿ ಅನ್ನೋದು ವೀಕ್ಷಕರಿಗೆ ಗೊತ್ತಾಗಿದೆ.
ಈ ಬಗ್ಗೆ ರಾಜೇಶ್ ನಟರಂಗ ಮಾತನಾಡಿದ್ದಾರೆ. ‘ಜೊತೆ ಜೊತೆಯಲಿ ಧಾರಾವಾಹಿಗೆ ನಮ್ಮ ಧಾರಾವಾಹಿ ಹೋಲಿಕೆ ಮಾಡಿದ್ದು ನನ್ನ ಗಮನಕ್ಕೂ ಬಂದಿದೆ. ಪ್ರಮೋಷನಲ್ ವಿಡಿಯೋ ಹಾಕಿದಾಗ ಈ ರೀತಿಯ ಮೆಸೇಜ್ಗಳು, ಕಮೆಂಟ್ಗಳು ನನಗೂ ಬಂದಿತ್ತು. ಅದು ಮಧ್ಯ ವಯಸ್ಕ ಪುರುಷ ಹಾಗೂ ಸಣ್ಣ ವಯಸ್ಸಿನ ಯುವತಿಯ ನಡುವಿನ ಕಥೆ. ಆದರೆ, ನಮ್ಮ ಧಾರಾವಾಹಿಯ ಆಯಾಮ ಬೇರೆ’ ಎಂದಿದ್ದಾರೆ ರಾಜೇಶ್ ನಟರಂಗ.
ಇದನ್ನೂ ಓದಿ: ‘ನಿಮ್ಮ ಗುಣಗಳನ್ನೂ ಒಪ್ಪುವ ಹೃದಯಗಳಿರುತ್ತವೆ’; ‘ಅಮೃತಧಾರೆ’ ಕಥಾವಸ್ತು ಬಗ್ಗೆ ರಾಜೇಶ್ ನಟರಂಗ ಮಾತು
‘ಮದುವೆ, ಸಂಬಂಧ ಅನ್ನೋದು ನಮ್ಮ ಕಥೆಯ ಜೀವಾಳ. ಸೋಶಿಯಲ್ ಮೀಡಿಯಾದಲ್ಲಿ ನಾವು ಅದು ಹಾಗಲ್ಲ ಹೀಗೆ ಎಂಬುದನ್ನು ಹೇಳಿ ಪ್ರಯೋಜನ ಇಲ್ಲ. ಅವರ ದೃಷ್ಟಿಕೋನವೇ ಬದಲಾಗುತ್ತದೆ. ಈಗ ಅದೇ ರೀತಿಯಲ್ಲಿ ಬದಲಾಗಿದೆ’ ಎನ್ನುತ್ತಾರೆ ರಾಜೇಶ್ ನಟರಂಗ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ