‘ನಿಮ್ಮ ಗುಣಗಳನ್ನೂ ಒಪ್ಪುವ ಹೃದಯಗಳಿರುತ್ತವೆ’; ‘ಅಮೃತಧಾರೆ’ ಕಥಾವಸ್ತು ಬಗ್ಗೆ ರಾಜೇಶ್ ನಟರಂಗ ಮಾತು

‘ಅಮೃತಧಾರೆ’ ಧಾರಾವಾಹಿ ಬಗ್ಗೆ, ಧಾರಾವಾಹಿ ಒಪ್ಪಿದ್ದರ ಬಗ್ಗೆ, ಬದಲಾದ ಕಿರುತೆರೆಯ ಸ್ವರೂಪದ ಬಗ್ಗೆ ರಾಜೇಶ್ ನಟರಂಗ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

‘ನಿಮ್ಮ ಗುಣಗಳನ್ನೂ ಒಪ್ಪುವ ಹೃದಯಗಳಿರುತ್ತವೆ’; ‘ಅಮೃತಧಾರೆ’ ಕಥಾವಸ್ತು ಬಗ್ಗೆ ರಾಜೇಶ್ ನಟರಂಗ ಮಾತು
ರಾಜೇಶ್-ಛಾಯಾ ಸಿಂಗ್
Follow us
ರಾಜೇಶ್ ದುಗ್ಗುಮನೆ
|

Updated on:Jun 02, 2023 | 2:15 PM

ಜೀ ಕನ್ನಡ ಧಾರಾವಾಹಿಯಲ್ಲಿ ‘ಅಮೃತಧಾರೆ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ಮಾಡುತ್ತಿದ್ದಾರೆ. ಮದುವೆ ಆಗದೇ ಇರುವ ಆಗರ್ಭ ಶ್ರೀಮಂತ ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ (Rajesh Nataranga) ನಟಿಸುತ್ತಿದ್ದಾರೆ. ‘ಅಮೃತಧಾರೆ’ ಧಾರಾವಾಹಿ (Amruthadhare Serial) ಬಗ್ಗೆ, ಧಾರಾವಾಹಿ ಒಪ್ಪಿದ್ದರ ಬಗ್ಗೆ, ಬದಲಾದ ಕಿರುತೆರೆಯ ಸ್ವರೂಪದ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

‘ಅಮೃತಧಾರೆ’ ಧಾರಾವಾಹಿ ಇಷ್ಟ ಆಗೋಕೆ ಕಾರಣ?

ನಾನು ಮಾಡುತ್ತಿರುವ ಪಾತ್ರಗಳಲ್ಲಿ ಏಕತಾನತೆ ಇತ್ತು. ಪೊಲೀಸ್ ಪಾತ್ರಗಳು, ತನಿಖಾಧಿಕಾರಿ ಪಾತ್ರಗಳು ನನ್ನನ್ನು ಅರಸಿ ಬರುತ್ತಿದ್ದವು. ಅನ್ವೇಷಣೆ ಮಾಡಲು ಅವಕಾಶ ಕಡಿಮೆ ಇತ್ತು. ಇಂಥ ಸಂದರ್ಭದಲ್ಲಿ ನನ್ನನ್ನು ಹುಡುಕಿ ಬಂದಿದ್ದು ‘ಅಮೃತಧಾರೆ’ ಧಾರಾವಾಹಿ. ಈ ರೀತಿ ಕಂಟಿನ್ಯೂ ಪಾತ್ರಗಳನ್ನು ಮಾಡಿ ಬಹಳ ಸಮಯ ಕಳೆದಿತ್ತು. ಟಿವಿಯಲ್ಲಿ ಏಕೆ ಮಾಡುತ್ತಿಲ್ಲಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಆದರೆ ನನಗೆ ಯಾವ ಪಾತ್ರಗಳೂ ಇಷ್ಟ ಆಗಿರಲಿಲ್ಲ. ಈಗ ಆ ರೀತಿಯ ಪಾತ್ರ ಸಿಕ್ಕಿದೆ. ಧಾರಾವಾಹಿಯ ಭಾಷೆ, ಅದನ್ನು ಪ್ರೆಸೆಂಟ್ ಮಾಡುವ ರೀತಿ ಬದಲಾಗಿದೆ. ಇದೊಂದು ಚಾಲೆಂಜ್​. ಇದೆಲ್ಲವೂ ಧಾರಾವಾಹಿ ಒಪ್ಪಿಕೊಳ್ಳಲು ನನ್ನನು ಪ್ರೇರೇಪಿಸಿತು.

ಧಾರಾವಾಹಿಗಳಲ್ಲಿ ನಟಿಸುವಾಗ ಹೇಗನಿಸುತ್ತದೆ?

ಸಿನಿಮಾಗಳಲ್ಲಿ ಪಾತ್ರಕ್ಕೆ ಸೀಮಿತತೆ ಇರುತ್ತದೆ. ಆದರೆ, ಧಾರಾವಾಹಿಯಲ್ಲಿ ಹಾಗಿಲ್ಲ. ನಿತ್ಯ ಅದನ್ನು ಜೀವಿಸಬೇಕು. ಜನರು ಅದನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದರ ಮೇಲೆ ಎಷ್ಟು ವರ್ಷ ಈ ಧಾರಾವಾಹಿ ಸಾಗುತ್ತದೆ ಅನ್ನೋದು ನಿರ್ಧಾರ ಆಗುತ್ತದೆ. ಏಕತಾನತೆ ಕಾಡದೆ ಇದ್ದರೆ ಯಾವುದೇ ಪಾತ್ರ ಆದರೂ ಬೇಸರ ಬರುವುದಿಲ್ಲ. ಈ ಧಾರಾವಾಹಿಯಲ್ಲಿ ಏಕತಾನತೆ ಕಾಡುವುದಿಲ್ಲ ಎಂಬುದು ನನ್ನ ಭಾವನೆ

ಕಿರುತೆರೆ ನಿಮಗೆ ಹೊಸದಲ್ಲ, ಆದರೆ, ಹೊಸ ಧಾರಾವಾಹಿ ಮಾಡುವಾಗ ಏನಾದರೂ ಅಳುಕು ಇರುತ್ತಾ?

ನಿಜವಾಗಲೂ ಅಳುಕು ಇದ್ದೇ ಇರುತ್ತದೆ. ಧಾರಾವಾಹಿಗಳಲ್ಲಿ ಒಂದು ಸಮಯದ ಚೌಕಟ್ಟಿನಲ್ಲಿ ಶೂಟಿಂಗ್ ನಡೆಯುತ್ತದೆ. ನಮ್ಮ ಸೃಜನಶೀಲತೆ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಏನಾದರೂ ಬದಲಾಯಿಸಲು ಹೇಳೋಣ ಎಂದರೆ ಇಲ್ಲಿ ಅಷ್ಟು ಸಮಯ ಇರುವುದಿಲ್ಲ. ಈ ದೃಶ್ಯ ಹೀಗೆ ಬರಬೇಕು ಎಂದು ಹಠ ಹಿಡಿದು ಕೂರಲು ಆಗಲ್ಲ. ಟಿಆರ್​​ಪಿ ಅನ್ನೋದು ಸ್ವಲ್ಪ ಒತ್ತಡ ಎನಿಸುತ್ತದೆ. ನಮಗೆ ಜವಾಬ್ದಾರಿ ಜಾಸ್ತಿ ಆಗಿದೆ.

ನಿಮ್ಮ ಪಾತ್ರವನ್ನು ವಿವರಿಸಿ..

ನನ್ನ ಪಾತ್ರವನ್ನು ಹೇಗೇ ತೋರಿಸಲಾಗುತ್ತಿದೆಯೋ ಹಾಗೆಯೇ ಇದೆ. ಹಲವು ಕಾರಣದಿಂದ ಗೌತಮ್ ಮದುವೆ ಆಗಿರುವುದಿಲ್ಲ. ಆತನಿಗೆ ಎಲ್ಲವೂ ಕ್ಲೀನ್ ಆಗಿರಬೇಕು. ಯಾರನ್ನಾದರೂ ಮುಟ್ಟಿದರೆ ಸ್ಯಾನಿಟೈಸರ್ ಹಾಕಿಕೊಳ್ಳುತ್ತಾನೆ. ನನ್ನನ್ನು ಯಾರೂ ಮದುವೆ ಆಗಲ್ಲ, ನನಗೆ ಏನೋ ಪ್ರಾಬ್ಲಂ ಇದೆ ಎಂದೆಲ್ಲ ಅನಿಸುತ್ತಿರುತ್ತದೆ. ಈ ರೀತಿಯ ಜೀವಗಳನ್ನು ಒಪ್ಪುವ ಮತ್ತೊಂದಷ್ಟು ಹೃದಯಗಳು ಇರುತ್ತವೆ. ಇದನ್ನೇ ನಾವು ಹೇಳುತ್ತಿರುವುದು.

‘ಅಮೃತಧಾರೆ’ಯನ್ನು ‘ಜೊತೆ ಜೊತೆಯಲಿ’ ಧಾರಾವಾಹಿಗೆ ಹೋಲಿಕೆ ಮಾಡಲಾಯ್ತಲ್ಲ..

‘ಜೊತೆ ಜೊತೆಯಲಿ’ ಧಾರಾವಾಹಿಗೆ ನಮ್ಮ ಧಾರಾವಾಹಿ ಹೋಲಿಕೆ ಮಾಡಿದ್ದು ನನ್ನ ಗಮನಕ್ಕೂ ಬಂದಿದೆ. ಪ್ರಮೋಷನಲ್ ವಿಡಿಯೋ ಹಾಕಿದಾಗ ಈ ರೀತಿಯ ಮೆಸೇಜ್​ಗಳು, ಕಮೆಂಟ್​ಗಳು ನನಗೂ ಬಂದಿತ್ತು. ಅದು ಮಧ್ಯ ವಯಸ್ಕ ಪುರುಷ ಹಾಗೂ ಸಣ್ಣ ವಯಸ್ಸಿನ ಯುವತಿಯ ನಡುವಿನ ಕಥೆ. ಆದರೆ, ನಮ್ಮ ಧಾರಾವಾಹಿಯ ಆಯಾಮ ಬೇರೆ. ಮದುವೆ, ಸಂಬಂಧ ಅನ್ನೋದರ ಮೇಲೆ ನಮ್ಮ ಕಥೆಯ ಜೀವಾಳ. ಸೋಶಿಯಲ್ ಮೀಡಿಯಾದಲ್ಲಿ ನಾವು ಅದು ಹಾಗಲ್ಲ ಹೀಗೆ ಎಂಬುದನ್ನು ಹೇಳಿ ಪ್ರಯೋಜನ ಇಲ್ಲ. ಅವರ ದೃಷ್ಟಿಕೋನವೇ ಬದಲಾಗುತ್ತದೆ.

ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿ: ಇಲ್ಲಿ ನಾಯಕ-ನಾಯಕಿ ಪಡುತ್ತಿರುವ ಕಷ್ಟಗಳು ಒಂದೇ

ಛಾಯಾ ಸಿಂಗ್ ಜೊತೆಗಿನ ನಿಮ್ಮ ಕೆಮಿಸ್ಟ್ರಿ ಬಗ್ಗೆ ಹೇಳೋದಾದರೆ.. ಛಾಯಾ ಅದ್ಭುತ ನಟಿ. ನಮ್ಮದ 23 ವರ್ಷ ಹಳೆಯ ಪರಿಚಯ. ಇಟಿವಿಯಲ್ಲಿ ಧಾರಾವಾಹಿ ಆರಂಭ ಆಗಿತ್ತು. ದತ್ತಣ್ಣ, ವೈಶಾಲಿ ಕಾಸರವಳ್ಳಿ ಮೊದಲಾದವರು ನಟಿಸಿದ್ದರು. ಛಾಯಾ ನನ್ನ ತಂಗಿ ಪಾತ್ರ ಮಾಡಿದ್ದರು. ನಂತರ ಅವರು ತಮಿಳಿಗೆ ಹೋದರು, ಕನ್ನಡದಲ್ಲೂ ಸಿನಿಮಾ ಮಾಡಿದರು. ಅವರ ಬಳಿ ಒಳ್ಳೆಯ ಟ್ಯಾಲೆಂಟ್ ಇದೆ. ಕಣ್ಣಿನಲ್ಲೇ ಭಾವನೆ ಹೊರಹಾಕುತ್ತಾರೆ. ಸೆಟ್​ನಲ್ಲಿ ಆ ರೀತಿಯ ಕಲಾವಿದರು ಸಿಕ್ಕಾಗ ಖುಷಿ ಆಗುತ್ತದೆ.

ಸಿನಿಮಾ-ಧಾರಾವಾಹಿ ಆಯ್ಕೆಗೆ ನಿಮ್ಮ ಮಾನದಂಡ ಏನು?

ನಾನು ಧಾರಾವಾಹಿ, ಸಿನಿಮಾ ಒಪ್ಪಿಕೊಳ್ಳೋದು ತುಂಬಾನೇ ಸಿಂಪಲ್. ಸಿನಿಮಾಗೆ ಆ ಪಾತ್ರದ ಕೊಡುಗೆ ಇರಬೇಕು. ಇದರ ಜೊತೆಗೆ ದುಡ್ಡು ಕೂಡ ಮುಖ್ಯ. ಮೊದಲು ಕಥೆ, ಆ ಪಾತ್ರದ ಕೊಡುಗೆ ನೋಡ್ತೀನಿ. ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇರಬೇಕು ಎನಿಸುತ್ತದೆ. ಆದರೆ, ಅದನ್ನು ಮೀರಿ ನಟಿಸಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:15 pm, Fri, 2 June 23

ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ