ಕಿರುತೆರೆ ಇತಿಹಾಸದಲ್ಲಿ ‘ಅಮೃತಧಾರೆ’ ಹೊಸ ದಾಖಲೆ; ಧಾರಾವಾಹಿ ಹಾಡುಗಳಿಗೊಂದು ಜೂಕ್ ​ಬಾಕ್ಸ್

|

Updated on: Jul 31, 2023 | 1:14 PM

‘ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಕಿರುತೆರೆ ಇತಿಹಾಸದಲ್ಲಿ ‘ಅಮೃತಧಾರೆ’ ಹೊಸ ದಾಖಲೆ; ಧಾರಾವಾಹಿ ಹಾಡುಗಳಿಗೊಂದು ಜೂಕ್ ​ಬಾಕ್ಸ್
ರಾಜೇಶ್ ನಟರಂಗ
Follow us on

‘ಅಮೃತಧಾರೆ’ ಧಾರಾವಾಹಿ (Amruthadhare Serial) ಪ್ರಸಾರ ಆರಂಭಿಸಿ ಹಲವು ದಿನಗಳು ಕಳೆದಿವೆ. ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಈ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಈಗ ಈ ಧಾರಾವಾಹಿ ಹೊಸ ಸಾಧನೆ ಮಾಡಿದೆ. ಧಾರಾವಾಹಿಗಳಿಗೆ ಟೈಟಲ್ ಸಾಂಗ್ ಬಹಳ ಮುಖ್ಯವಾಗುತ್ತದೆ. ಅದು ಹಿಟ್ ಆದರೆ ಧಾರಾವಾಹಿಗೆ ಮೈಲೇಜ್ ಸಿಗುತ್ತದೆ. ಈಗ ‘ಅಮೃತಧಾರೆ’ ತಂಡದವರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈ ಧಾರಾವಾಹಿಯ ಜೂಕ್ ​ಬಾಕ್ಸ್ ರಿಲೀಸ್ ಮಾಡಲಾಗಿದೆ. ಕಿರುತೆರೆ ಇತಿಹಾಸದಲ್ಲಿ ಧಾರಾವಾಹಿಯ ಹಾಡಿಗೆ ಜೂಕ್ ​ಬಾಕ್ಸ್ ರಿಲೀಸ್ ಆಗಿದ್ದು ಇದೇ ಮೊದಲು ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ.

ಸಾಮಾನ್ಯವಾಗಿ ಸಿನಿಮಾ ಹಾಡುಗಳಿಗೆ ಜೂಕ್ ​ಬಾಕ್ಸ್ ಸಿದ್ಧಪಡಿಸಲಾಗುತ್ತದೆ. ಅಂದರೆ ಎಲ್ಲಾ ಹಾಡುಗಳು ಒಂದೇ ಕಡೆಗೆ ಲಭ್ಯವಾಗುತ್ತವೆ. ಅದೇ ರೀತಿ, ಧಾರಾವಾಹಿಗೂ ಜ್ಯೂಕ್​ಬಾಕ್ಸ್ ಸಿದ್ಧಪಡಿಸಲಾಗಿದೆ. ‘ಅಮೃತಧಾರೆ’ ಧಾರಾವಾಹಿಯ ‘ನಾ ಭುವಿಯಂತೆ ಕಾದೆ..’ ‘ಏನೋ ನವಿರಾದ ಭಾವ..’, ‘ನಿನ್ನವರ ನಗುವಲಿ..’, ‘ಒಡನಾಡಿ ಬೇಕಿದೆ..’, ‘ಸನಿಹ ಸೆಳೆದಂತೆ..’ ‘ಬೆಳಗುವ ದೀಪವು..’ ‘ಜೊತೆ ಸಾಗೋ ಕನಸಿದೆ..’, ‘ತನ್ನವರ ಬದುಕಲಿ..’, ‘ಯಾರೋ ಕರೆದಂತೆ ಹೆಸರ..’ ಹಾಡುಗಳು ಈ ಜೂಕ್ ​ಬಾಕ್ಸ್​ನಲ್ಲಿ ಇದೆ. ಒಟ್ಟೂ ‘ಅಮೃತಧಾರೆ’ ಧಾರಾವಾಹಿಯ ಜೂಕ್ ​ಬಾಕ್ಸ್ ಅವಧಿ  14:46 ನಿಮಿಷ ಇದೆ.

ಈ ಹಾಡುಗಳಿಗೆ ಸುಧೀಂದ್ರ ಭಾರದ್ವಾಜ್, ಚೇತನ್ ಸೊಲಗಿ ಅವರು ಸಾಹಿತ್ಯ ಬರೆದಿದ್ದಾರೆ. ಸುನಾದ್ ಗೌತಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿಹಾಲ್ ತಾವ್ರೋ, ಐಶ್ವರ್ಯ ರಂಗರಾಜನ್, ರಜತ್ ಹೆಗಡೆ ಅವರು ಹಾಡಿದ್ದಾರೆ. ನವೀನ್ ವಿಶರಾಧ್, ಇಂಚರ ಶೆಟ್ಟಿ ಅವರ ಕೋರಸ್ ಇದೆ. ಸುಮಂತ್ ಗ್ರಾಫಿಕ್ಸ್ ನೀಡಿದ್ದಾರೆ.

ಇದನ್ನೂ ಓದಿ: ಟಾಪ್​ 5 ಸ್ಥಾನದಿಂದ ಹೊರ ನಡೆದ ಅಕ್ಕ-ತಂಗಿ ಕಥೆ; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?

‘ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ವನಿತಾ ವಾಸು, ಚೈತ್ರಾ ಶೆಣೋಯ್, ಸಿಹಿಕಹಿ ಚಂದ್ರು, ಸಾರಾ ಅಣ್ಣಯ್ಯ, ಶಶಿ, ಅಮೃತಾ ನಾಯಕ್ ಮೊದಲಾದವರು ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ