ಟಾಪ್​ 5 ಸ್ಥಾನದಿಂದ ಹೊರ ನಡೆದ ಅಕ್ಕ-ತಂಗಿ ಕಥೆ; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?

Kannada Serials TRP: ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಕಳೆದ ಕೆಲ ದಿನಗಳಿಂದ ಒಳ್ಳೆಯ ಟಿಆರ್​ಪಿ ಪಡೆಯುತ್ತಿದೆ. ಈ ಧಾರಾವಾಹಿ ಮೊದಲ ಸ್ಥಾನದಲ್ಲಿದೆ.

ಟಾಪ್​ 5 ಸ್ಥಾನದಿಂದ ಹೊರ ನಡೆದ ಅಕ್ಕ-ತಂಗಿ ಕಥೆ; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?
ಕನ್ನಡ ಧಾರಾವಾಹಿಗಳು
Follow us
|

Updated on: Jul 13, 2023 | 12:30 PM

ಒಳ್ಳೆಯ ಟಿಆರ್​ಪಿ (TRP Serial) ಪಡೆಯಬೇಕು ಎನ್ನುವ ಉದ್ದೇಶದಿಂದ ಎಲ್ಲಾ ವಾಹಿನಿಗಳು ರೇಸ್​ಗೆ ಇಳಿದಿವೆ. ಬೇಡಿಕೆ ಇರುವ ಧಾರಾವಾಹಿಯ ಕಥೆಯಲ್ಲಿ ಕೊಂಚ ವ್ಯತ್ಯಾಸ ಆದರೂ ವೀಕ್ಷಕರಿಗೆ ಇಷ್ಟವಾಗದೇ ಇರಬಹುದು. ಆ ಸಂದರ್ಭದಲ್ಲಿ ಟಿಆರ್​ಪಿ ಕಡಿಮೆ ಆಗುತ್ತದೆ. ಸದ್ಯ ಕನ್ನಡ ಕಿರುತೆರೆಯಲ್ಲಿ (Kannada Serials) ಸ್ಪರ್ಧೆ ಜೋರಾಗಿದೆ. ಹೊಸಹೊಸ ಧಾರಾವಾಹಿಗಳ ಜೊತೆ ಈ ಮೊದಲು ಪ್ರಸಾರ ಆರಂಭಿಸಿದ ಧಾರಾವಾಹಿಗಳು ರೇಸ್​ಗೆ ಇಳಿದಿವೆ. ಕಳೆದ ವಾರದ (ಜೂನ್​ 30-ಜುಲೈ 6) ಟಿಆರ್​ಪಿ ರೇಟಿಂಗ್ ರಿವೀಲ್ ಆಗಿದೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಕಳೆದ ಕೆಲ ದಿನಗಳಿಂದ ಒಳ್ಳೆಯ ಟಿಆರ್​ಪಿ ಪಡೆಯುತ್ತಿದೆ. ಪುಟ್ಟಕ್ಕನ ಮಗಳ ಮದುವೆ ವಿಚಾರ ಹೈಲೈಟ್​ ಆಗುತ್ತಿದೆ. ಈ ಕಾರಣಕ್ಕೆ ಹೆಚ್ಚಿನ ವೀಕ್ಷಕರು ಈ ಧಾರಾವಾಹಿಯನ್ನು ನೋಡೋಕೆ ಆರಂಭಿಸಿದ್ದರು. ಇದರಿಂದ ಸಹಜವಾಗಿಯೇ ಟಿಆರ್​ಪಿ ಹೆಚ್ಚಿದೆ. ಈ ಕಾರಣಕ್ಕೆ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಕಳೆದ ಹಲವು ವಾರಗಳಿಂದ ಈ ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬಂದಿದೆ.

ಎರಡನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಇದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್​ ಅವರು ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಧಾರಾವಾಹಿಗೆ ಟಿಆರ್​ಪಿ ಪಟ್ಟಿಯಲ್ಲಿ ಎರಡನೇ ಸ್ಥಾನ ಸಿಕ್ಕಿದೆ. ಕಳೆದ ವಾರ ಮೂರನೇ ಸ್ಥಾನದಲ್ಲಿದ್ದ ‘ಅಮೃತಧಾರೆ’ ಧಾರಾವಾಹಿ, ಈ ವಾರವೂ ಅದೇ ಸ್ಥಾನ ಕಾಯ್ದುಕೊಂಡಿದೆ. ಈ ಧಾರಾವಾಹಿಗೆ ಒಳ್ಳೆಯ ಟಿಆರ್​ಪಿ ಸಿಗುತ್ತಿದೆ. ರಾಜೇಶ್ ನಟರಂಗ, ಛಾಯಾ ಸಿಂಗ್ ಮೊದಲಾದವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಟಿಆರ್​ಪಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದ ‘ಗಟ್ಟಿಮೇಳ’; ಇಲ್ಲಿದೆ ಟಾಪ್ 3 ಸೀರಿಯಲ್ಸ್

ನಾಲ್ಕನೇ ಸ್ಥಾನದಲ್ಲಿ ಈ ವಾರ ಎರಡು ಧಾರಾವಾಹಿಗಳು ಇವೆ. ಜೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಹಾಗೂ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಗಳು ಇವೆ. ಎರಡೂ ಧಾರಾವಾಹಿಗೆ ಒಂದೇ ರೀತಿಯ ರೇಟಿಂಗ್ ಸಿಕ್ಕಿದೆ. ಐದನೇ ಸ್ಥಾನದಲ್ಲಿ ‘ನಮ್ಮ ಲಚ್ಚಿ’ಧಾರಾವಾಹಿ ಇದೆ. ಈ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದೆ. ಈ ವಾರ ಟಾಪ್​ ಐದರಲ್ಲಿ ಸುವರ್ಣ ವಾಹಿನಿಯ ಎರಡು ಧಾರಾವಾಹಿಗಳು ಇರೋದು ವಿಶೇಷ.

ಆರು ಹಾಗೂ ಏಳನೇ ಸ್ಥಾನದಲ್ಲಿ ಅನುಕ್ರಮವಾಗಿ ‘ಭಾಗ್ಯಲಕ್ಷ್ಮೀ’ ಹಾಗೂ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗಳು ಇವೆ. ದಿನ ಕಳೆದಂತೆ ಅಕ್ಕ-ತಂಗಿ ಕಥೆಯ ಧಾರಾವಾಹಿಗಳಿಗೆ ಹಿನ್ನಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ