ಅನನ್ಯಾ ಅಮರ್ ಅಭಿಮಾನ ನೋಡಿ ಭಾವುಕರಾದ ಶಿವರಾಜ್​ಕುಮಾರ್

"ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5" ವೇದಿಕೆ ಮೇಲೆ ನಟಿ ಅನನ್ಯಾ ಅಮರ್ ಶಿವಣ್ಣನ 'ಜೋಗಿ' ಹಾಡಿಗೆ ಅದ್ಭುತವಾಗಿ ನರ್ತಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಅವರ ಅಚಲ ಅಭಿಮಾನತ್ವದಿಂದ ಶಿವಣ್ಣ ಭಾವುಕರಾದರು. ಶಿವಣ್ಣರ ಮಾರ್ಗದರ್ಶನ ಸ್ಪರ್ಧಿಗಳಿಗೆ ಖುಷಿ ನೀಡಿದೆ. ಸದ್ಯ ಹಿರಿತೆರೆಯಲ್ಲಿ 'ಪೆದ್ದಿ' ಹಾಗೂ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.

ಅನನ್ಯಾ ಅಮರ್ ಅಭಿಮಾನ ನೋಡಿ ಭಾವುಕರಾದ ಶಿವರಾಜ್​ಕುಮಾರ್
ಅನನ್ಯಾ-ಶಿವಣ್ಣ
Updated By: ರಾಜೇಶ್ ದುಗ್ಗುಮನೆ

Updated on: Nov 14, 2025 | 7:50 AM

ಅಭಿಮಾನ ಎನ್ನೋದು ಹಲವರು ಹೊರಗೆ ತೋರಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತಾರೆ. ಶಿವರಾಜ್​ಕುಮಾರ್​ಗೆ ಈ ಎರಡೂ ವರ್ಗದಲ್ಲಿ ಅಭಿಮಾನಿಗಳು ಇದ್ದಾರೆ. ಶಿವರಾಜ್​ಕುಮಾರ್​ ಅವರು ಎದುರು ಸಿಕ್ಕರೆ ಭಾವುಕರಾಗುವವರು ಅದೆಷ್ಟೋ ಮಂದಿ. ಈಗ ಅನನ್ಯಾ ಅಮರ್ ಅವರು ತಮ್ಮ ಅಭಿಮಾನತ್ವ ತೋರಿಸಿದ್ದಾರೆ. ಶಿವಣ್ಣ ಅವರನ್ನು ಕಂಡರೆ ಎಷ್ಟು ಇಷ್ಟ ಎಂಬುದನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಶಿವಣ್ಣ ಖುಷಿಯಿಂದ ಭಾವುಕರಾದರು.

ಅನನ್ಯಾ ಅಮರ್ ಅವರು ಅನೇಕ ರಿಯಾಲಿಟಿ ಶೋಗಳನ್ನು ಮಾಡಿ ಗಮನ ಸೆಳೆದವರು. ಅವರು ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ರ ಭಾಗ ಆಗುತ್ತಿದ್ದಾರೆ. ವೇದಿಕೆ ಮೇಲೆ ಅವರು ಪರ್ಫಾರ್ಮೆನ್ಸ್ ನೀಡಿದ್ದಾರೆ. ಶಿವರಾಜ್​ಕುಮಾರ್ ನಟನೆಯ ‘ಜೋಗಿ’ ಸಿನಿಮಾದ ‘ಎಲ್ಲೋ ಜೋಗಪ್ಪ ನಿನ್ ಅರಮನೆ’ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಡ್ಯಾನ್ಸ್ ನೋಡಿ ಶಿವಣ್ಣ ಖುಷಿ ಪಟ್ಟರು. ಅದೇ ರೀತಿ ಒಂದು ವಿಚಾರ ಕೇಳಿ ಅವರಿಗೆ ಅಚ್ಚರಿ ಆಗಿದೆ.

‘ನಿಮ್ಮ ಅತ್ಯಂತ ದೊಡ್ಡ ಅಭಿಮಾನಿ ಅಂಕಿತಾ’ ಎಂದರು ಅನುಶ್ರೀ. ‘ಮೀರಾ ಹೇಗೆ ಕೃಷ್ಣನ ಪೂಜಿಸ್ತಾಳೋ, ಶಬರಿ ಹೇಗೆ ರಾಮನ ಇಷ್ಟ ಪಡ್ತಾರೋ ನಂಗೆ ನಿಮ್ಮನ್ನು ನೋಡಿದರೆ ಅದೇ ಅಭಿಮಾನ’ ಎಂದು ಹೇಳಿದರು ಅನನ್ಯಾ. ‘ನಿಮ್ಮಂಥ ಅಭಿಮಾನಿ ಪಡೆದ ನಾವೇ ಧನ್ಯ’ ಎಂದು ಶಿವರಾಜ್​ಕುಮಾರ್ ಅವರು ಹೆಮ್ಮೆಯಿಂದ ಹೇಳಿಕೊಂಡರು.

ಶಿವರಾಜ್​ಕುಮಾರ್ ಅವರು ಹಿರಿತೆರೆಯಲ್ಲಿ ಬ್ಯುಸಿ ಇದ್ದಾರೆ. ಅವರು ಡ್ಯಾನ್ಸ್​ನ ಅದ್ಭುತವಾಗಿ ಮಾಡುತ್ತಾರೆ. ಇದೇ ಕಾರಣಕ್ಕೆ ಅವರು ಡಿಕೆಡಿಯ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಅವರು ಜಡ್ಜ್​ ಆಗಿ ಕುಳಿತಾಗ ಅನೇಕರಿಗೆ ಅವರಿಂದ ಮಾರ್ಗದರ್ಶನ ಸಿಕ್ಕಿದೆ. ಈ ವಿಚಾರದಲ್ಲಿ ಸ್ಪರ್ಧಿಗಳಿಗೂ ಖುಷಿ ಇದೆ. ಶಿವಣ್ಣ ಅವರಿಂದ ನಾವು ಮಾರ್ಗದರ್ಶನ ಪಡೆದವಲ್ಲ ಎಂಬ ಖುಷಿ ಅವರಿಗೆ ಯಾವಾಗಲೂ ಇರುತ್ತದೆ.

ಇದನ್ನೂ ಓದಿ: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮೂಲಕ ಮತ್ತೆ ಕಿರುತೆರೆಗೆ ಬರಲು ಶಿವರಾಜ್​ಕುಮಾರ್ ರೆಡಿ

ಶಿವರಾಜ್​ಕುಮಾರ್ ಅವರು ವಿವಿಧ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ‘ಪೆದ್ದಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ ಅವರು. ಇದೇ ರೀತಿ, ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದಲ್ಲೂ ಶಿವಣ್ಣ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ರೆಟ್ರೋ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಆ್ಯಂಗಲ್​ನಲ್ಲಿ ಅವರು ರಾಜ್​ಕುಮಾರ್ ರೀತಿಯೇ ಕಾಣಿಸಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.