ಅನಿರುದ್ಧ್ (Aniruddha Jatkar) ಅವರನ್ನು ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಹೊರಗಿಡುವ ಬಗ್ಗೆ ಇಂದು (ಆಗಸ್ಟ್ 20) ಘೋಷಣೆ ಮಾಡಲಾಯಿತು. ಆ ಬಳಿಕ ಸುದ್ದಿಗೋಷ್ಠಿ ನಡೆಸಿ ಅನಿರುದ್ಧ್ ಸ್ಪಷ್ಟನೆ ನೀಡಿದ್ದರು. ‘ಧಾರಾವಾಹಿಗಾಗಿ ನಾನು ಎಲ್ಲವನ್ನೂ ಮಾಡಿದ್ದೇನೆ. ನಾನು ಮತ್ತೆ ನಟಿಸಲು ಸಿದ್ಧ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ನಿರ್ಮಾಪಕ ಆರೂರು ಜಗದೀಶ್ (Aroor Jagadish) ಅವರು ಸುದ್ದಿಗೋಷ್ಠಿ ನಡೆಸಿ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.
‘ಅನಿರುದ್ಧ್ ಅವರಿಂದ ಶೂಟಿಂಗ್ಗೆ ತುಂಬಾ ಅಡಚಣೆ ಆಗಿದೆ. ಎದುರು ಮಾತನಾಡುವ ರೀತಿಯಲ್ಲಿ ಅವರು ಇಲ್ಲ. ಕಥೆಗೆ ಅಡೆಚಣೆ ಉಂಟು ಮಾಡುತ್ತಿದ್ದಾರೆ. ಅವರ ಕ್ಯಾರೆಕ್ಟರ್ ಮಾತ್ರ ಬಿಲ್ಡ್ ಆಗಬೇಕು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದರು’ ಎಂದು ಆರೂರು ಜಗದೀಶ್ ಹೇಳಿದ್ದಾರೆ.
‘ನಮ್ಮ ಮಧ್ಯೆ ಮನಸ್ತಾಪ ಇರಲಿಲ್ಲ. ಧಾರಾವಾಹಿಗೆ ಸಾಕಷ್ಟು ದುಡ್ಡು ಹಾಕಿದ್ದೇನೆ. 24 ಗಂಟೆ ಕೆಲಸ ಮಾಡಿದ್ದೇನೆ. ಹೀಗಿದ್ದರೂ ನಿರ್ಮಾಪಕರಿಗೆ ಸಾಥ್ ಕೊಡಬೇಕು ಎಂದು ಅವರಿಗೆ ಯಾವಾಗಲೂ ಅನಿಸಿಲ್ಲ. ಕೊವಿಡ್ ಟೈಮ್ನಲ್ಲಿ ಎಲ್ಲರಿಗೂ ಸಂಭಾವನೆಯಲ್ಲಿ ಶೇ.15 ಕಟ್ ಮಾಡಿದ್ದೆವು. ಆಗ ನಾನು ಆಸ್ಪತ್ರೆಯಲ್ಲಿ ಇದ್ದೆ. ಅವರು ನನ್ನ ಸ್ಯಾಲರಿ ಯಾಕೆ ಕಟ್ ಮಾಡಿದ್ರಿ ಅಂತ ಕಾಲ್ ಮಾಡಿ ಕೂಗಾಡಿದ್ರು. ಸೆಟ್ನಲ್ಲೂ ಬಂದು ಕೂಗಾಡಿದರು. ನನ್ನ ದುಡ್ಡು ತಿಂದು ಬುದಕುತ್ತಿದ್ದಾರೆ ಅಂತ ಕೂಗಾಡಿದ್ದರು. ಅದನ್ನು ಕೇಳಿ ಬೇಸರ ಆಯ್ತು’ ಎಂದಿದ್ದಾರೆ ಜಗದೀಶ್.
ಇದನ್ನೂ ಓದಿ: ‘ಜೊತೆ ಜೊತೆಯಲಿ ಧಾರಾವಾಹಿ 2-3 ತಿಂಗಳಲ್ಲಿ ಮುಗಿಯಲಿದೆ’: ಅನಿರುದ್ಧ್
‘ನನಗಾಗಿರುವ ಪ್ರತಿ ನೋವನ್ನು ಚಾನೆಲ್ ಗಮನಕ್ಕೆ ತಂದಿದ್ದೇನೆ. ಹೇಳೋಕೆ ಹೋದ್ರೆ ತುಂಬಾ ಇದೆ. ನನಗೆ ಇನ್ನು ಆರೋಗ್ಯ ಹಾಳುಮಾಡಿಕೊಳ್ಳಲು ಇಷ್ಟವಿಲ್ಲ. ಅವರನ್ನು ಈ ಸೀರಿಯಲ್ನಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಸಲ್ಲ. ನನಗೆ ಗೌರವ ಸಿಕ್ಕಿಲ್ಲ. ಅವರು ಮಾತಿನಲ್ಲಿ ಹೇಳುವಂತೆ ಕೃತಿಯಲ್ಲಿ ಇಲ್ಲ. ಅನೇಕ ಬಾರಿ ಶೂಟಿಂಗ್ನಿಂದ ಅರ್ಧಕ್ಕೆ ಹೊರಹೋಗಿದ್ದಾರೆ. ಇದರಿಂದ ನನಗೆ ನಷ್ಟ ಉಂಟಾಗಿದೆ’ ಎಂದು ಜಗದೀಶ್ ಆರೋಪಿಸಿದ್ದಾರೆ.
‘ಕ್ಯಾರವಾನ್ ಇಲ್ಲ ಎಂದು ಶೂಟಿಂಗ್ಇಂದ ಎದ್ದು ಹೋಗಿದ್ದರು. ಹೆಣ್ಣು ಮಕ್ಕಳ ಕೇರ್ ನಾವು ತೆಗೆದುಕೊಳ್ಳುತ್ತೇವೆ. ಆ ಬಗ್ಗೆ ಅವರಿಗೆ ಯಾಕೆ ಚಿಂತೆ? ನನಗೆ ಆಗಿರೋ ಅವಮಾನ, ನೋವಿಗೆ ನಟರೇ ಸ್ಪಂದಿಸಲಿಲ್ಲ ಅಂದರೆ ಹೇಗೆ? ಈ ಸೀರಿಯಲ್ ಮಧ್ಯಭಾಗದಲ್ಲಿ ಟಿಆರ್ಪಿ ಕಡಿಮೆ ಆಗಲು ಅವರೇ ಕಾರಣ. ಈ ಧಾರಾವಾಹಿ ನಿಲ್ಲಲು ಅವರೇ ಕಾರಣ’ ಎಂದಿದ್ದಾರೆ ಜಗದೀಶ್.
Published On - 7:16 pm, Sat, 20 August 22