‘ನನ್ನನ್ನು ಕೆಟ್ಟದಾಗಿ ತೋರಿಸಲಾಗಿದೆ’; ‘ಹಳ್ಳಿ ಪವರ್​’ ಶೋನಿಂದ ಹೊರ ಬಂದು ಗಂಭೀರ ಆರೋಪ ಮಾಡಿದ ‘ಭೀಮ’ ನಟಿ ಆ್ಯಶ್

‘ಹಳ್ಳಿ ಪವರ್’ ಶೋನಿಂದ ಆಶ್ ಮೆಲೋ ಸ್ಕೈಲರ್ ಹಾಗೂ ಇತರ ಸ್ಪರ್ಧಿಗಳು ನಿರ್ಗಮಿಸಿದ್ದಾರೆ. ಆಶ್ ಮೆಲೋ ಸ್ಕೈಲರ್ ಅವರು ತಮ್ಮ ಮಾತುಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಶೋನಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾಗಿ ಅವರು ಹೇಳಿದ್ದಾರೆ. ಆ ಬಗ್ಗೆ ಚರ್ಚೆ ನಡೆಯುತ್ತಿದೆ.

‘ನನ್ನನ್ನು ಕೆಟ್ಟದಾಗಿ ತೋರಿಸಲಾಗಿದೆ’; ‘ಹಳ್ಳಿ ಪವರ್​’ ಶೋನಿಂದ ಹೊರ ಬಂದು ಗಂಭೀರ ಆರೋಪ ಮಾಡಿದ ‘ಭೀಮ’ ನಟಿ ಆ್ಯಶ್
ಆ್ಯಶ್

Updated on: Sep 10, 2025 | 11:28 AM

ನಗರ ಮಂದಿ ಹಳ್ಳಿಗೆ ಹೋಗಿ ಜೀವನ ನಡೆಸೋದು ಎಂದರೆ ಅದು ಸುಲಭ ಅಲ್ಲವೇ ಅಲ್ಲ. ಹಳ್ಳಿ ಜೀವನದಲ್ಲಿ ಸಾಕಷ್ಟು ಚಾಲೆಂಜ್​ಗಳು ಇರುತ್ತವೆ. ‘ಹಳ್ಳಿ’ ಪವರ್​ನಲ್ಲಿ 12 ಸ್ಪರ್ಧಿಗಳು ತೆರಳಿದ್ದರು. ಈ ಪೈಕಿ ನಾಲ್ವರು ಶೋನಿಂದ ಹೊರ ನಡೆದಿದ್ದಾರೆ. ಒಬ್ಬರು ಎಲಿಮಿನೇಟ್, ಒಬ್ಬರು ಗಾಯಾಳು ಹಾಗೂ ಮತ್ತಿಬ್ಬರು ವೈಯಕ್ತಿಕ ಕಾರಣ ನೀಡಿ ಈ ಆಟದಿಂದ ಹಿಂದೆ ಸರಿದಿದ್ದಾರೆ. ಈ ಮಧ್ಯೆ ಶೋನಿಂದ ಹೊರ ಬಂದ ಆ್ಯಶ್ ಮೆಲೋ ಸ್ಕೈಲರ್ (Ash Melo Skyler) ಒಂದು ಗಂಭೀರ ಆರೋಪ ಮಾಡಿದ್ದಾರೆ.

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ ‘ಭೀಮ’ ಸಿನಿಮಾದಲ್ಲಿ ಆ್ಯಶ್ ಮೆಲೋ ಸ್ಕೈಲರ್ ಅವರು ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರೀಲ್ಸ್ ಮಾಡಿಸಿಕೊಂಡು ಫೇಮಸ್ ಆಗಿದ್ದ ಅವರಿಗೆ ಸಿನಿಮಾದಿಂದ ಜನಪ್ರಿಯತೆ ಸಿಕ್ಕಿತು. ಅವರನ್ನು ಬರೋಬ್ಬರಿ 10 ಲಕ್ಷ ಜನರು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದಾರೆ. ಅವರು ಹಳ್ಳಿ ಪವರ್ ಶೋನಲ್ಲಿ ಮಿಂಚಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಏಳೇ ದಿನಕ್ಕೆ ಅವರು ಸುಸ್ತಾಗಿದ್ದಾರೆ.

ಇದನ್ನೂ ಓದಿ: ‘ಹಳ್ಳಿ ಪವರ್​’ಗೆ ಸುಸ್ತಾದ ಪ್ಯಾಟೆ ಹುಡ್ಗೀರು; ಏಳೇ ದಿನಕ್ಕೆ ನಾಲ್ವರು ಔಟ್

ಇದನ್ನೂ ಓದಿ
Video: ‘ತಡ ಮಾಡದೇ ಮಗು ಮಾಡಿಕೊಳ್ಳಿ’ ಎಂದು ಸಲಹೆ; ಓಕೆ ಎಂದ ಅನುಶ್ರೀ
ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್​​ಗೆ ಪಾಠ ಮಾಡಿದ ನೆಟ್ಟಿಗರು
‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್
ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದವರಿಗೆ ಉತ್ತರಿಸಿದ ನಟಿ

‘ಹಳ್ಳಿ ಪವರ್’ ಶೋನಲ್ಲಿ ವೈಯಕ್ತಿಕ ಕಾರಣ ನೀಡಿ ಮಂಗಳೂರಿನ ಸ್ನೇಹಾ ಶೆಟ್ಟಿ ಹೊರ ಹೋಗೋದಾಗಿ ಅಕುಲ್ ಬಾಲಾಜಿ ಎದುರು ಹೇಳಿದರು. ಮತ್ತೆ ಯಾರಾದರೂ ಶೋನಿಂದ ಹೊರ ಹೋಗ್ತೀರಿ ಎಂದಾದರೆ ಕೈ ಎತ್ತಿ ಎಂದು ಅಕುಲ್ ಕೇಳಿದರು. ಆಗ, ಆ್ಯಶ್ ಕೈ ಎತ್ತಿದರು. ಈ ವೇಳೆ ಅವರು, ವೈಯಕ್ತಿಕ ಕಾರಣ ಎಂದಷ್ಟೇ ಹೇಳಿದ್ದರು.

ಆ್ಯಶ್ ಪೋಸ್ಟ್

 

ಶೋನಿಂದ ಹೊರ ಬಂದು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಶ್ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ವಿವರವಾಗಿ ಬರೆದುಕೊಂಡಿದ್ದಾರೆ. ‘ನಾನು ನನ್ನ ಎಲ್ಲಾ ಪ್ರೇಕ್ಷಕರನ್ನು ಮತ್ತು ಕಾರ್ಯಕ್ರಮದ ವೀಕ್ಷಕರನ್ನು ನಿಜವಾಗಿಯೂ ಗೌರವಿಸುತ್ತೇನೆ. ನನ್ನನ್ನು ಕೆಟ್ಟ ರೀತಿಯಲ್ಲಿ ತೋರಿಸಿದ್ದರಿಂದ ಕಾರ್ಯಕ್ರಮವನ್ನು ತೊರೆದಿದ್ದೇನೆ. ನಾನು ಮಾತನಾಡಿದ ಎಲ್ಲಾ ಮಾತುಗಳನ್ನು ನೀವು ನೋಡಿರಬಹುದು. ಅದರಲ್ಲಿ ನಾನು ನನ್ನ ಎಲ್ಲಾ ಪ್ರೇಕ್ಷಕರನ್ನು ಮತ್ತು ಹಳ್ಳಿ ಪವರ್ ಶೋನ ಗೌರವಿಸಿದೆ. ಆದರೆ ನನ್ನ ಮಾತುಗಳನ್ನು ತಪ್ಪಾಗಿ ಚಿತ್ರಿಸಿ, ಕೆಳಕ್ಕೆ ಹಾಕುವ ರೀತಿಯಲ್ಲಿ ತೋರಿಸಲಾಯಿತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:26 am, Wed, 10 September 25