ಜೈಲಿಗೆ ಹೋದರೂ ಬುದ್ಧಿ ಕಲಿಯಲಿಲ್ಲ ಅಶ್ವಿನಿ ಗೌಡ; ಕ್ಯಾಪ್ಟನ್ ಆದ ರಘು

ಬಿಗ್ ಬಾಸ್ ಮನೆಯ ಕೆಲವು ಮೂಲ ನಿಯಮಗಳನ್ನು ಅಶ್ವಿನಿ ಗೌಡ ಅವರು ಮುರಿಯುತ್ತಿದ್ದಾರೆ. ಈ ವಾರ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದರೂ ಕೂಡ ಅವರು ತಗ್ಗಿ ಬಗ್ಗಿ ನಡೆದುಕೊಂಡಿಲ್ಲ. ಕ್ಯಾಪ್ಟನ್ ಆದ ರಘು ಹಾಗೂ ಕಳಪೆ ಆದ ಅಶ್ವಿನಿ ಗೌಡ ನಡುವಿನ ಕಿರಿಕ್ ಮುಂದುವರಿದಿದೆ.

ಜೈಲಿಗೆ ಹೋದರೂ ಬುದ್ಧಿ ಕಲಿಯಲಿಲ್ಲ ಅಶ್ವಿನಿ ಗೌಡ; ಕ್ಯಾಪ್ಟನ್ ಆದ ರಘು
Ashwini Gowda, Raghu

Updated on: Oct 24, 2025 | 10:41 PM

ನಟಿ, ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ (Ashwini Gowda) ಅವರು ಬಿಗ್ ಬಾಸ್ ಮನೆಯಲ್ಲಿ ಹಲವರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಎಲ್ಲರ ಜಗಳದ ಮಧ್ಯೆ ಅವರು ಮೂಗು ತೂರಿಸುತ್ತಾರೆ. ಈ ಮೊದಲು ರಕ್ಷಿತಾ ಶೆಟ್ಟಿ ವಿರುದ್ಧ ಷಡ್ಯಂತ್ರ ಮಾಡಿದ್ದಕ್ಕೆ ಅಶ್ವಿನಿ ಗೌಡ ಅವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಆ ನಂತರ ಕೂಡ ಅಶ್ವಿನಿ ಗೌಡ ವರ್ತನೆ ಹೆಚ್ಚೇನೂ ಸುಧಾರಿಸಿದಂತೆ ಕಾಣಿಸಿಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಅವರ ಈವರೆಗಿನ ಆಟವನ್ನು ಪರಿಗಣಿಸಿ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ಕಳಪೆ ಪಟ್ಟ ಪಡೆದು ಜೈಲು ಸೇರಿದ ಬಳಿಕವೂ ಅವರು ನಿಯಮ ಮುರಿದಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ರಘು ಅವರು ಕ್ಯಾಪ್ಟನ್ ಪಟ್ಟಕ್ಕೆ ಏರಿದರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಮೊದಲ ಕ್ಯಾಪ್ಟನ್ ಆಗಿ ಅವರು ಆಯ್ಕೆ ಆಗಿದ್ದಾರೆ. ಅವರ ಆಟ ಹಲವರಿಗೆ ಇಷ್ಟ ಆಗಿದೆ. ರಘು ಕ್ಯಾಪ್ಟನ್ ಆಗಿದ್ದಕ್ಕೆ ಗಿಲ್ಲಿ ನಟ ಖುಷಿಪಟ್ಟಿದ್ದಾರೆ. ಅಶ್ವಿನಿ ಗೌಡ ಅವರು ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡು ಮೂಲೆ ಸೇರಿದ್ದಾರೆ. ರಘು ವಿರುದ್ಧ ಜಾಹ್ನವಿ ಧಿಕ್ಕಾರ ಕೂಗಿದ್ದಾರೆ.

ರಘು ಅವರು ಕ್ಯಾಪ್ಟನ್ ಆಗುತ್ತಿದ್ದಂತೆಯೇ ಅಶ್ವಿನಿ ಅವರನ್ನು ಬಾತ್​ ರೂಮ್ ಕ್ಲೀನ್ ಮಾಡಲು ಹಾಕಿದ್ದಾರೆ. ಈ ವಾರ ಯಾರು ಕಳಪೆ ಎಂಬುದನ್ನು ನಿರ್ಧರಿಸುವ ಅಧಿಕಾರ ಕ್ಯಾಪ್ಟನ್ ರಘು ಅವರಿಗೆ ನೀಡಲಾಯಿತು. ಅವರು ನೇರವಾಗಿ ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡರು. ಹಾಗಾಗಿ ಅಶ್ವಿನಿ ಗೌಡ ಅವರು ಕಳಪೆ ಸಮವಸ್ತ್ರ ಧರಿಸಿ ಜೈಲು ಸೇರಿದ್ದಾರೆ.

ಅಶ್ವಿನಿ ಗೌಡ ಅವರು ಜೈಲು ಸೇರಿದರೂ ಕೂಡ ಬುದ್ಧಿ ಕಲಿತಿಲ್ಲ. ನಿಯಮದ ಪ್ರಕಾರ, ಕಳಪೆ ಆಗಿ ಜೈಲು ಸೇರಿದ ಸ್ಪರ್ಧಿಗಳು ತರಕಾರಿ ಹೆಚ್ಚಿ ಕೊಡಬೇಕು. ಆದರೆ ಅಶ್ವಿನಿ ಗೌಡ ಅವರು ಈ ವಿಚಾರದಲ್ಲಿ ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ತರಕಾರಿ ಕಟ್ ಮಾಡಿ ಕೊಡಲು ವಿಳಂಬ ಮಾಡಿದ್ದಾರೆ. ಅಶ್ವಿನಿ ಗೌಡ ಅವರು ಜೈಲು ಸೇರಿದ್ದಕ್ಕೆ ಗಿಲ್ಲಿ ನಟ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ‘ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಇನ್ನೂ ಸ್ವಲ್ಪ ಕ್ಲಾಸ್ ತಗೋಬೇಕು’: ವಾರಂತ್ಯಕ್ಕೆ ಕಾದ ವೀಕ್ಷಕರು

ನಿಯಮದ ಪ್ರಕಾರ ಕಳಪೆ ಪಟ್ಟ ಪಡೆದವರು ಕೇವಲ ರಾಗಿ ಗಂಜಿ ಕುಡಿಯಬೇಕು. ಆದರೆ ಅಶ್ವಿನಿ ಗೌಡ ಅವರು ನಿಯಮ ಮುರಿದ ಆ್ಯಪಲ್ ತಿಂದಿದ್ದಾರೆ. ಇದನ್ನು ಅವರು ಬೇಕಂತಲೇ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಬಳಿಕ ಅವರು ಕಜ್ಜಾಯ ತಿಂದಿದ್ದಾರೆ. ಈ ಎಲ್ಲ ನಿಯಮ ಮುರಿದಿದ್ದಕ್ಕೆ ಇಡೀ ಮನೆಗೆ ಬಿಗ್ ಬಾಸ್ ಶಿಕ್ಷೆ ನೀಡಬಹುದು. ಆ ವಿಷಯ ಗೊತ್ತಿದ್ದರೂ ಕೂಡ ಅಶ್ವಿನಿ ಗೌಡ ಅವರು ಈ ರೀತಿ ನಡೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.