‘ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು’; ಅಶ್ವಿನಿ ಹೆಣ್ಣು ಮಕ್ಕಳ ಪರ ನಿಲ್ಲೋದು ಅಂದ್ರೆ ಇದೇನಾ?

ಮಹಿಳೆಯರ ಪರ ನಿಲ್ಲುತ್ತೇನೆ ಎಂದಿದ್ದ ಅಶ್ವಿನಿ ಗೌಡ, ರಾಶಿಕಾ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ. 'ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು' ಎಂಬ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ರಾಶಿಕಾ ಕೂಡ ಈ ಹೇಳಿಕೆಯನ್ನು ಖಂಡಿಸಿ, ಅಶ್ವಿನಿಗೆ ಸವಾಲು ಹಾಕಿದ್ದಾರೆ.

‘ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು’; ಅಶ್ವಿನಿ ಹೆಣ್ಣು ಮಕ್ಕಳ ಪರ ನಿಲ್ಲೋದು ಅಂದ್ರೆ ಇದೇನಾ?
ಅಶ್ವಿನಿ, ರಘು, ರಾಶಿಕಾ

Updated on: Jan 05, 2026 | 3:03 PM

ಕೆಲ ವಾರಗಳ ಹಿಂದಿನ ಮಾತು. ಬಿಗ್ ಬಾಸ್ (Bigg Boss)  ಮನೆಯಲ್ಲಿ ಉಂಟಾದ ಗಲಾಟೆಯಲ್ಲಿ ‘ನಾನು ಹೆಣ್ಣುಮಕ್ಕಳ ಪರವಾಗಿ ನಿಲ್ಲುತ್ತಿದ್ದೇನೆ’ ಎಂದು ಅಶ್ವಿನಿ ಗೌಡ ಹೇಳಿಕೊಂಡಿದ್ದರು. ಆದರೆ, ಈಗ ಹೆಣ್ಣು ಮಕ್ಕಳ ಬಗ್ಗೆಯೇ ಕೆಟ್ಟದಾಗಿ ಮಾತನಾಡಿ ಚರ್ಚೆಗೆ ಕಾರಣರಾಗಿದ್ದಾರೆ. ‘ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು’ ಎಂಬ ಮಾತು ಚರ್ಚೆಗೆ ಕಾರಣ ಆಗಿದೆ. ಅವರು ಆ ರೀತಿ ಮಾತನಾಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ‘ಅಶ್ವಿನಿ ಮಹಿಳೆಯರ ಪರ ನಿಲ್ಲೋದು ಅಂದ್ರೆ ಇದೇನಾ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ವೀಕೆಂಡ್​​ನಲ್ಲಿ ಚಟುವಟಿಕೆ ಒಂದನ್ನು ನೀಡಲಾಯಿತು. ಇದರ ಅನುಸಾರ ಪಂಚಿಂಗ್ ಬ್ಯಾಗ್ ಮೇಲೆ ತಮಗೆ ಇಷ್ಟ ಇಲ್ಲದವರ ಫೋಟೋ ಹಾಕಬೇಕು. ಆ ಬಳಿಕ ಕೈಗೆ ಪಂಚಿಂಗ್ ಬಾಕ್ಸ್ ಹಾಕಿಕೊಂಡು ಗುದ್ದಬೇಕು. ಅಶ್ವಿನಿ ಅವರು ರಾಶಿಕಾ ಹೆಸರು ತೆಗೆದುಕೊಂಡರು. ಅವರು ನೀಡಿದ ಕಾರಣ ಚರ್ಚೆಗೆ ಕಾರಣ ಆಗಿದೆ.

‘ರಾಶಿಕಾ ತನ್ನನ್ನು ತಾನು ಮಿಸ್ ಯೂನಿವರ್ಸ್ ಎಂದುಕೊಂಡಿದ್ದಾರೆ. ನಿನ್ನ ವಯಸ್ಸಿಗೂ ನನ್ನ ವಯಸ್ಸಿಗೂ ತುಂಬಾ ಅಂತರ ಇದೆ. ನೀನೆ ಸ್ಟ್ರಾಂಗ್ ಎಂದು ಹೇಳಿ ಕೊಳ್ಳುತ್ತಾ ಇದ್ದೀಯಾ. ಆದರೆ ನೀನು ಸ್ಟ್ರಾಂಗ್ ಅಲ್ಲ. ಕಳೆದ ವಾರ ನಿಮ್ಮನ್ನು ನಾವು ಸೋಲಿಸಿದ್ದೇವೆ’ ಎಂದು ಅಶ್ವಿನಿ ಗೌಡ ಹೇಳಿದರು.

‘ನಿನ್ನ ರೀತಿ ಬಿಗ್ ಬಾಸ್ ಅಲ್ಲಿ ಮತ್ತೊಂದು ಟ್ರ್ಯಾಕ್​ನ ನಾನು ಶುರು ಮಾಡಿಕೊಂಡಿಲ್ಲ. ನಿನಗೆ ನಿಯತ್ತಿಲ್ಲ ಎಂಬುದಕ್ಕು ಸೂರಜ್ ದೊಡ್ಡ ಉದಾಹರಣೆ. ನಿನಗೆ ಒರಗಿಕೊಳ್ಳೋಕೆ ರಘು ತೊಡೆ ಬೇಕು, ಹೆಗಲು ಬೇಕು. ನನಗೆ ಬೇಡ’ ಎಂದು ಅಶ್ವಿನಿ ಗೌಡ ಹೇಳಿದರು.

ಇದನ್ನೂ ಓದಿ: ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ

ರಾಶಿಕಾ ಬಗ್ಗೆ ಅಶ್ವಿನಿ ಆಡಿದ ಮಾತು ಚರ್ಚೆ ಹುಟ್ಟುಹಾಕಿದೆ. ರಾಶಿಕಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ‘ಧನುಷ್ ಆಡಿದ್ದಕ್ಕೆ ಅಶ್ವಿನಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಹೋಗಿದ್ದು. ಧೈರ್ಯ ಇದ್ದರೆ ಅವರು ನನ್ನ ಜೊತೆ ಟಾಸ್ಕ್ ಆಡಿ ಗೆಲ್ಲಲಿ’ ಎಂದು ರಾಶಿಕಾ ಸವಾಲು ಹಾಕಿದ್ದಾರೆ. ‘ಅಶ್ವಿನಿ ಗೌಡ ತುಂಬಾ ಅಸಹ್ಯವಾಗಿ ಯೋಚಿಸ್ತಾರೆ’ ಎಂದು ರಾಶಿಕಾ ಅಭಿಪ್ರಾಯಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನಿಗೆ ಅನೇಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.