AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಿತಾ ಶೆಟ್ಟಿಗೆ ಗಿಲ್ಲಿ ಮೇಲೆ ಸೀಕ್ರೆಟ್ ಲವ್? ಗಿಲ್ಲಿಗೆ ಶುರುವಾಗಿದೆ ಭಯ

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರಿಗೆ ಗಿಲ್ಲಿ ನಟನ ಬಗ್ಗೆ ವಿಶೇಷ ಒಲವು ಮೂಡಿದೆ. ಅವರ ಹಾಸ್ಯಪ್ರಜ್ಞೆ ಹಾಗೂ ಕಿತಾಪತಿ ಸ್ವಭಾವ ರಕ್ಷಿತಾರಿಗೆ ಅಚ್ಚುಮೆಚ್ಚು. ಸುದೀಪ್ ಈ ಕುರಿತು ಪ್ರಶ್ನಿಸಿದಾಗ ಗಿಲ್ಲಿ ನಡುಗಿ ಹೋಗಿದ್ದಾರೆ. ಇವರ ಬಾಂಧವ್ಯ ಮನೆಯ ಹೊರಗೂ ಮುಂದುವರೆಯುವುದೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ರಕ್ಷಿತಾ ಶೆಟ್ಟಿಗೆ ಗಿಲ್ಲಿ ಮೇಲೆ ಸೀಕ್ರೆಟ್ ಲವ್? ಗಿಲ್ಲಿಗೆ ಶುರುವಾಗಿದೆ ಭಯ
Gill Nata Kavya
ರಾಜೇಶ್ ದುಗ್ಗುಮನೆ
|

Updated on: Jan 05, 2026 | 10:08 AM

Share

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ (Rakshitha Shetty) ಅವರ ಪರವಾಗಿ ಮೊದಲಿನಿಂದಲೂ ನಿಲ್ಲುತ್ತಾ ಬಂದಿರೋದು ಗಿಲ್ಲಿ ನಟ. ಇದಕ್ಕಾಗಿ ಅವರಿಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು. ಇಬ್ಬರ ಮಧ್ಯೆ ಈಗ ಉತ್ತಮ ಬಾಂಡಿಂಗ್ ಬೆಳೆದಿದೆ. ಗಿಲ್ಲಿ ನಟ ಅವರ ಮೇಲೆ ರಕ್ಷಿತಾಗೆ ಸೀಕ್ರೆಟ್ ಲವ್ ಬೆಳೆದಿದೆಯೇ ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಯನ್ನು ಸುದೀಪ್ ಕೂಡ ಎತ್ತಿದ್ದಾರೆ. ಇದರಿಂದ ಗಿಲ್ಲಿಗೆ ನಡುಕ ಶುರುವಾಗಿದೆ.

ಯೆಸ್ ಆರ್ ನೋ ಸೆಷನ್ ವೇಳೆ ರಕ್ಷಿತಾಗೆ ಕಿತಾಪತಿ ಮಾಡೋ ಹುಡುಗರು ಎಂದರೆ ತುಂಬಾ ಇಷ್ಟ’ ಎಂದು ಸುದೀಪ್ ಕೇಳಿದರು. ಇದಕ್ಕೆ ರಕ್ಷಿತಾ ಶೆಟ್ಟಿ ನಾಚಿ ನೀರಾದರು. ‘ಗಿಲ್ಲಿ ಈ ಮನೆಯಲ್ಲಿ ಹೆಚ್ಚು ಕಿತಾಪತಿ ಮಾಡುತ್ತಾರೆ. ಅವರು ಯಾವಾಗಲೂ ಗಂಭೀರವಾಗಿ ಇರೋದಿಲ್ಲ. ಅದಕ್ಕೆ ನಂಗೆ ಗಿಲ್ಲಿ ಅಂದ್ರೆ ಇಷ್ಟ’ ಎಂದರು ರಕ್ಷಿತಾ.

ಈ ವಿಷಯ ಗಿಲ್ಲಿಗೆ ಸರಿಯಾಗಿ ಗೊತ್ತಿಲ್ಲರಲಿಲ್ಲ ಎನಿಸುತ್ತದೆ. ‘ಜೀವನದಲ್ಲಿ ರಾಂಗ್ ಕನೆಕ್ಷನ್ ಆಗಿದೆ ಎಂದು ಅನಿಸುತ್ತಿದೆ’ ಎಂದರು. ಆಗ ಸ್ಪಂದನಾ ಅವರು, ‘ಗಿಲ್ಲಿ ಮೊದಲ ಬಾರಿಗೆ ನಗುತ್ತಾ ಇಲ್ಲ’ ಎಂದರು. ಆ ಸಂದರ್ಭದಲ್ಲಿ ಗಿಲ್ಲಿ ಮುಖ ತುಂಬಾನೇ ಗಂಭೀರವಾಗಿತ್ತು.

‘ಜಾಸ್ತಿ ಯೋಚಿಸದೆ ಇರುವ, ಸೆನ್ಸ್ ಆಫ್ ಹ್ಯೂಮರ್ ಇರುವವರು ಇಷ್ಟ ಆಗುತ್ತಾರೆ. ಹೀಗಾಗಿ ಗಿಲ್ಲಿ ನಂಗೆ ಇಷ್ಟ’ ಎಂದರು ರಕ್ಷಿತಾ. ಈ ಮೊದಲು ಕೂಡ ಅವರು, ‘ಗಿಲ್ಲಿ ರೀತಿಯ ಹುಡುಗ ಬೇಕು’ ಎಂದು ಹೇಳಿದ್ದರು. ರಕ್ಷಿತಾ ಶೆಟ್ಟಿಯ ಮಾತು ಕೇಳಿ ಗಿಲ್ಲಿಗೆ ನಡುಕ ಶುರುವಾಗಿದೆ. ‘ನಂಗೆ ಬೆಳಿಗ್ಗೆ ಇಂದ ಏಕೋ ಮಿಸ್ ಹೊಡೆಯುತ್ತಿದೆ ಎಂದಿದ್ದಾರೆ. ಅವರು ಈ ಸಂದರ್ಭದಲ್ಲಿ ಭಯದಲ್ಲಿ ಕುಳಿತಿದ್ದರು. ಅವರ ಮುಖ ನೋಡಿ ಎಲ್ಲರಿಗೂ ನಗು ಬಂದಿದೆ.

ಇದನ್ನೂ ಓದಿ: ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಬಿಗ್ ಬಾಸ್ ಬಾಗಿಲು?

ರಕ್ಷಿತಾ ಶೆಟ್ಟಿ ಹಾಗೂ ಗಿಲ್ಲಿ ನಟ ಅವರ ಮಧ್ಯೆ ಇರೋ ಬಾಂಡ್ ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕವೂ ಮುಂದುವರಿಯುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.