ಬಿಗ್ ಬಾಸ್ (Bigg Boss) ಖ್ಯಾತಿಯ ಕಿರಿಕ್ ಕೀರ್ತಿ (Kirik Keerthi) ಮೇಲೆ ಹಲ್ಲೆ ಮಾಡಲಾಗಿದೆ. ಬೆಂಗಳೂರಿನ ಸದಾಶಿವನಗರದ ಪಬ್‌ನಲ್ಲಿ ಈ ಘಟನೆ ನಡೆದಿದೆ. ಗುರುವಾರ (ಡಿ.2) ರಾತ್ರಿ ಸ್ನೇಹಿತರ ಜತೆ ಕಿರಿಕ್ ಕೀರ್ತಿ ಅವರು ಪಬ್‌ಗೆ ತೆರಳಿದ್ದರು. ಪಕ್ಕದ ಟೇಬಲ್‌ನಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಅವರ ಫೋಟೋ ಕ್ಲಿಕ್ಕಿಸಿದ್ದ. ಫೋಟೋ ಕ್ಲಿಕ್ಕಿಸಿದ್ದನ್ನು ಕೀರ್ತಿ ಪ್ರಶ್ನೆ ಮಾಡಿದ್ದಾರೆ. ಆ ಕಾರಣಕ್ಕೆ ಜಗಳ ಆರಂಭ ಆಯಿತು. ಫೋಟೋ ಕ್ಲಿಕ್ಕಿಸಿದ ವ್ಯಕ್ತಿ ಕ್ಷಮೆ ಕೇಳಿದ್ರೂ ಕೂಡ ಬಿಡದೇ ಕೀರ್ತಿ ಬೈಯ್ಯಲು ಶುರು ಮಾಡಿದ್ದರು. ಬಾಯಿಗೆ ಬಂದಂತೆ ಮಾತನಾಡಿದ್ದ ಕಿರಿಕ್ ಕೀರ್ತಿ ವರ್ತನೆಗೆ ಆ ವ್ಯಕ್ತಿ ರೋಸಿ ಹೋಗಿದ್ದ. ಫೋಟೋ ಕ್ಲಿಕ್ಕಿಸಿದವನ ಮೊಬೈಲ್ ಕಸಿದುಕೊಳ್ಳಲು ಕೂಡ ಕೀರ್ತಿ ಪ್ರಯತ್ನಿದರು. ಇದರಿಂದ ಕೋಪಗೊಂಡ ಆ ವ್ಯಕ್ತಿಯು ಕಿರಿಕ್ ಕೀರ್ತಿಯ ತಲೆಗೆ ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದಾನೆ.
ಗುರುವಾರ ತಡರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಹಲ್ಲೆ ಮಾಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಕಿರುತೆರೆ ನಿರೂಪಕನಾಗಿ ಕಿರಿಕ್ ಕೀರ್ತಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಆ ನಂತರ ಅವರು ಕೆಲವು ಸಿನಿಮಾಗಳಲ್ಲೂ ನಟಿಸಿದರು. ಸೋಶಿಯಲ್ ಮೀಡಿಯಾದಲ್ಲೂ ಅವರನ್ನು ಅನೇಕರ ಫಾಲೋ ಮಾಡುತ್ತಾರೆ. ಕಿರಿಕ್ ಕೀರ್ತಿ ಹೋದಲ್ಲಿ ಬಂದಲ್ಲಿ ಕೆಲವು ಅಭಿಮಾನಿಗಳು ಫೋಟೋಗಾಗಿ ಹಂಬಲಿಸುವುದು ಸಹಜ. ಸದಾಶಿವನಗರದ ಪಬ್‌ನಲ್ಲಿ ಫೋಟೋ ತೆಗೆಯಲು ಬಂದು ವ್ಯಕ್ತಿ ಕೂಡ ಕಿರಿಕ್ ಕೀರ್ತಿಯ ಅಭಿಮಾನಿ ಎನ್ನಲಾಗಿದೆ.
ಕಿರಿಕ್ ಕೀರ್ತಿ ಮೇಲಿನ ಅಭಿಮಾನಕ್ಕಾಗಿ ಆತ ಫೋಟೋ ಕ್ಲಿಕ್ಕಿಸಿದ್ದಾನೆ. ಆದರೆ ಅದನ್ನು ಕೀರ್ತಿ ಸಹಿಸಿಲ್ಲ. ಫೋಟೋ ತೆಗೆದ ಅಭಿಮಾನಿಯ ವಿರುದ್ಧ ಅವರು ಕೋಪಗೊಂಡು ಮನಬಂದಂತೆ ಮಾತನಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕಾಗಿ ಆ ವ್ಯಕ್ತಿ ಹಲ್ಲೆ ಮಾಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ:
ಮಾಸ್ ಮದಗಜ: ವಿಶೇಷ ಸಂದರ್ಶನದಲ್ಲಿ ಶ್ರೀಮುರಳಿ, ಆಶಿಕಾ, ಗರುಡ ರಾಮ್ ಮಸ್ತ್ ಮಾತುಕತೆ
Published On - 9:57 am, Fri, 3 December 21