ಬಿಗ್ ಬಾಸ್ ಮನೆಗೆ ಬಂದ ಭವ್ಯಾ ಗೌಡ ತಂದೆ; ಮನದೊಳಗೆ ಇದೆ ನೋವಿನ ಕಥೆ

|

Updated on: Jan 22, 2025 | 10:58 PM

ಕಿರುತೆರೆ ನಟಿ ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗಷ್ಟೇ ತಂದೆಯ ಬಗ್ಗೆ ಮಾತನಾಡಿದ್ದರು. ತಂದೆಯ ಧ್ವನಿ ಪೆಟ್ಟಿಗೆಗೆ ತೊಂದರೆ ಆಗಿದ್ದರ ಬಗ್ಗೆ ಹೇಳಿಕೊಂಡು ಅವರು ಕಣ್ಣೀರು ಹಾಕಿದ್ದರು. ಬುಧವಾರದ (ಜನವರಿ 22) ಸಂಚಿಕೆಯಲ್ಲಿ ಭವ್ಯಾ ಗೌಡ ಅವರ ತಂದೆ ಬಿಗ್​ ಬಾಸ್ ಮನೆಗೆ ಬಂದಿದ್ದಾರೆ. ಈ ಕ್ಷಣ ಅವರ ಪಾಲಿಗೆ ಸಖತ್ ಎಮೋಷನಲ್ ಆಗಿತ್ತು.

ಬಿಗ್ ಬಾಸ್ ಮನೆಗೆ ಬಂದ ಭವ್ಯಾ ಗೌಡ ತಂದೆ; ಮನದೊಳಗೆ ಇದೆ ನೋವಿನ ಕಥೆ
Venkatesh, Bhavya Gowda
Follow us on

ಬಿಗ್ ಬಾಸ್ ಆಟದಲ್ಲಿ ಉಳಿದಿರುವುದು ಕೆಲವೇ ಗಂಟೆಗಳು ಮಾತ್ರ. ಶೀಘ್ರದಲ್ಲೇ ಫಿನಾಲೆ ಬರಲಿದೆ. ಭವ್ಯಾ ಗೌಡ ಅವರು ಕೆಲವೇ ದಿನಗಳ ಹಿಂದೆ ತಂದೆಯ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದರು. ಬಿಗ್ ಬಾಸ್ ಮನೆಗೆ ತಂದೆ ಬರಬೇಕು ಎಂದು ಅವರು ಕೋರಿಕೆ ಸಲ್ಲಿಸಿದ್ದರು. ಆದರೆ ಆ ಕೋರಿಕೆ ಈಡೇರುತ್ತೋ ಇಲ್ಲವೋ ಎಂಬ ಬಗ್ಗೆ ಅವರಿಗೆ ಅನುಮಾನ ಇತ್ತು. ಅಚ್ಚರಿ ಎಂಬಂತೆ ಜ.22ರ ಎಪಿಸೋಡ್​ನಲ್ಲಿ ಭವ್ಯಾ ಗೌಡ ಅವರ ತಂದೆ ವೆಂಕಟೇಶ್ ಅವರು ಬಿಗ್ ಬಾಸ್ ಮನೆಗೆ ಬಂದರು. ಆ ಕ್ಷಣದಲ್ಲಿ ಭವ್ಯಾ ಗೌಡ ತುಂಬ ಭಾವುಕರಾದರು.

‘ಇದು ಬರೀ ಬಿಗ್ ಬಾಸ್ ಮನೆ ಅಲ್ಲ. ಜ್ಞಾನ ಭಂಡಾರ. ಈ ಅವಕಾಶ ನೀಡಿದ ಬಿಗ್ ಬಾಸ್​​ಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಜನ್ಮಜನ್ಮಕ್ಕೂ ಕೃತಜ್ಞನಾಗಿ ಇರುತ್ತೇನೆ’ ಎಂದು ವೆಂಕಟೇಶ್ ಅವರು ಹೇಳಿದರು. ತಂದೆ ಬಂದಿದ್ದಕ್ಕೆ ‘ನನ್ನ ಜೀವನದ ದೊಡ್ಡ ಕನಸು ಈಡೇರಿದೆ’ ಎಂದು ಭವ್ಯ ಗೌಡ ಅವರು ಹೇಳಿದರು. ಎಲ್ಲರ ಜೊತೆಗೂ ವೆಂಕಟೇಶ್ ಅವರು ಚೆನ್ನಾಗಿ ಬೆರೆತರು. ‘ಎಲ್ಲರೂ ಚೆನ್ನಾಗಿ ಆಡುತ್ತಿದ್ದೀರಿ. ನನ್ನ ಮಗಳೇ ಗೆಲ್ಲಬೇಕು ಎಂಬ ಸ್ವಾರ್ಥ ನನಗೆ ಇಲ್ಲ’ ಎಂದು ವೆಂಕಟೇಶ್ ಅವರು ಹೇಳಿದ್ದು ಎಲ್ಲರ ಮೆಚ್ಚುಗೆಗೆ ಕಾರಣ ಆಯಿತು.

ಭವ್ಯಾ ಗೌಡ ಅವರ ತಂದೆ 3 ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದರು. ಆದರೆ ಅಪಘಾತವೊಂದರ ಬಳಿಕ ಧ್ವನಿ ಪೆಟ್ಟಿಗೆಗೆ ತೊಂದರೆ ಆಯಿತು. ಆ ಹಿಂಜರಿಕೆಯಲ್ಲಿ ಅವರು ಸಾರ್ವಜನಿಕವಾಗಿ ಬೆರೆಯುತ್ತಿರಲಿಲ್ಲ. ಆ ಬಗ್ಗೆ ಭವ್ಯಾ ಗೌಡ ಅವರಿಗೆ ತುಂಬ ನೋವು ಇತ್ತು. ಆದರೆ ಈಗ ಕೋಟ್ಯಂತರ ಜನರು ನೋಡುತ್ತಿರುವ ಬಿಗ್ ಬಾಸ್ ಶೋಗೆ ಬರುವ ಮೂಲಕ ಅವರು ಮಗಳಿಗೆ ಖುಷಿ ನೀಡಿದರು.

ಇದನ್ನೂ ಓದಿ: ಹನುಮಂತ, ಭವ್ಯಾ ಗೌಡ, ತ್ರಿವಿಕ್ರಮ್​ಗೆ ಬಿಗ್ ಬಾಸ್ ಟ್ರೋಫಿ ಯಾಕೆ ಮುಖ್ಯ?

‘ಯಾವ ಕಾರ್ಯಕ್ರಮಕ್ಕೂ ಅಪ್ಪ ಬರುತ್ತಿರಲಿಲ್ಲ. ಧ್ವನಿ ಕಾರಣಕ್ಕೆ ಹಿಂಜರಿಯುತ್ತಿದ್ದರು. ಈಗ ಅವರಿಗೆ ಹ್ಯಾಟ್ಸಾಫ್ ಹೇಳುತ್ತಿದ್ದೇನೆ. 3 ಹೆಣ್ಮಕ್ಕಳನ್ನು ಚೆನ್ನಾಗಿ ಸಾಗಿದ್ದಾರೆ. ರಕ್ತ ಸುರಿಸಿ ದುಡಿದು ನಮಗೆ ಒಳ್ಳೆಯ ಶಿಕ್ಷಣ ಕೊಡಿಸಿದರು. ಅಪ್ಪ ಕಪ್ಪಾಗಿದ್ದಾರೆ. ಎಲ್ಲಿಗೆ ಕರೆದರೂ ಬರುತ್ತಿರಲಿಲ್ಲ. ನೀನು ಕಲಾವಿದೆ ಆದ್ದರಿಂದ ನಾನು ಹೀಗೆ ಬಂದರೆ ಸರಿ ಆಗಲ್ಲ ಎನ್ನುತ್ತಿದ್ದರು. ಈಗಲೂ ಅವರು ಇಲ್ಲಿಗೆ ಬರಲ್ಲ ಅಂದುಕೊಂಡಿದ್ದೆ. ಆದರೆ ಈಗ ಬಂದಿದ್ದಾರೆ. ನನಗೆ ಅವರೇ ಹೀರೋ’ ಎಂದು ಭವ್ಯಾ ಗೌಡ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.