‘ಹಿಂದುವೋ ಅಥವಾ ಮುಸಲ್ಮಾನರೋ’; ಮನೆ ಹುಡುಕ ಹೋದ ಬಿಗ್ ಬಾಸ್ ಸ್ಪರ್ಧಿಗೆ ಧರ್ಮದ ಬಗ್ಗೆ ಪ್ರಶ್ನೆ
ಹಿಂದಿ ಬಿಗ್ ಬಾಸ್ ಖ್ಯಾತಿಯ ನಟಿ ಯಾಮಿನಿ ಮಲ್ಹೋತ್ರಾ ಅವರು ಮುಂಬೈನಲ್ಲಿ ಮನೆ ಹುಡುಕುವಾಗ ಧರ್ಮ ಆಧಾರಿತ ತಾರತಮ್ಯ ಎದುರಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ನಟಿಯಾಗಿ ಅವರ ಜನಪ್ರಿಯತೆಯ ಹೊರತಾಗಿಯೂ, ಮನೆ ಮಾಲೀಕರು ಅವರ ಧರ್ಮವನ್ನು ಪ್ರಶ್ನಿಸಿ ಮನೆ ನೀಡಲು ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸೆಲೆಬ್ರಿಟಿಗಳ ಜೀವನ ಸುಖಕರಾಗವಿರುತ್ತದೆ, ಇರಲು ಸ್ವಂತ ಮನೆ ಇರುತ್ತದೆ.. ಹೀಗೆ ಹಲವು ಕಲ್ಪನೆಗಳು ಅಭಿಮಾನಿಗಳಲ್ಲಿ ಇದೆ. ಆದರೆ, ಎಲ್ಲರ ಜೀವನ ಇದೇ ರೀತಿ ಇಲ್ಲ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಕೆಲವು ಸೆಲೆಬ್ರಿಟಿಗಳು ಸಾಕಷ್ಟು ಜನಪ್ರಿಯತೆ ಪಡೆದ ಹೊರತಾಗಿಯೂ ತುಂಬಾನೇ ಕಷ್ಟಗಳನ್ನು ಎದುರಿಸಿದ ಉದಾಹರಣೆ ಇದೆ. ಇದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ. ‘ಹಿಂದಿ ಬಿಗ್ ಬಾಸ್ 18’ರಲ್ಲಿ ಭಾಗವಹಿಸಿದ್ದ ಯಾಮಿನಿ ಮಲ್ಹೋತ್ರ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮನೆ ಕೇಳಲು ಹೋದರೆ ಧರ್ಮದ ಬಗ್ಗೆ ಪಶ್ನೆ ಮಾಡುತ್ತಿದ್ದಾರೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
ಯಾಮಿನಿ ಅವರು ಈ ಬಾರಿ ಬಿಗ್ ಬಾಸ್ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದರು. 44ನೇ ದಿನ ದೊಡ್ಮನೆ ಪ್ರವೇಶಿಸಿದ ಅವರು 77ನೇ ದಿನಕ್ಕೆ ಎಲಿಮಿನೇಟ್ ಆಗಿ ಹೊರ ಬಂದರು. ಅವರು ದೊಡ್ಮನೆಯಲ್ಲಿ ಇದ್ದಿದ್ದು ಒಂದೇ ತಿಂಗಳಾದರೂ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಆದರೆ, ಮನೆ ಹುಡುಕಲು ಅವರಿಗೆ ಈ ಜನಪ್ರಿಯತೆ ಸಹಾಯಕ್ಕೆ ಬರುತ್ತಿಲ್ಲ. ಅದರಿಂದ ಅಡ್ಡಿಯೇ ಆಗುತ್ತಿದೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯಾಮಿನಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನಾನು ನಿಮ್ಮ ಜೊತೆ ಒಂದು ಕೆಟ್ಟ ಅನುಭವವ ಹಂಚಿಕೊಳ್ಳಬೇಕು. ಮುಂಬೈನ ನಾನು ಸಾಕಷ್ಟು ಪ್ರೀತಿಸುತ್ತೇನೆ. ಆದರೆ, ಇಲ್ಲಿ ಮನೆ ಹುಡುಕುವುದು ತುಂಬಾನೇ ಕಷ್ಟ. ನೀವು ಹಿಂದೂನಾ ಅಥವಾ ಮುಸಲ್ಮಾನರಾ? ಗುಜರಾತಿಯಾ ಅಥವಾ ಮಾರ್ವಾಡಿಯಾ ಎಂಬ ಪ್ರಶ್ನೆ ಕೇಳುತ್ತಾರೆ’ ಎಂದು ಬರಹ ಆರಂಭಿಸಿದ್ದಾರೆ ಯಾಮಿನಿ.
‘ನಾನು ನಟಿ ಎಂಬ ವಿಚಾರ ತಿಳಿಯುತ್ತಿದ್ದಂತೆ ಮನೆ ಕೊಡಲು ನೇರವಾಗಿ ನಿರಾಕರಿಸುತ್ತಿದ್ದಾರೆ. ನಟಿ ಆದ ಮಾತ್ರಕ್ಕೆ ಮನೆ ಹೊಂದಲು ಅರ್ಹತೆ ಇಲ್ಲವೇ? 2025ರಲ್ಲೂ ಈ ರೀತಿ ಪ್ರಶ್ನೆಗಳನ್ನು ಕೇಳುತ್ತಾರಲ್ಲ ಎಂಬುದು ಶಾಕಿಂಗ್ ವಿಚಾರ. ಕನಸುಗಳಿಗೆ ಷರತ್ತು ವಿಧಿಸುವಾಗ ಇದನ್ನು ನಾವು ಇದನ್ನು ಕನಸಿನ ನಗರ ಎಂದು ಕರೆಯಬಹುದೇ’ ಎಂಬ ಪ್ರಶ್ನೆಯನ್ನು ಅವರು ಅಭಿಮಾನಿಗಳ ಎದುರು ಇಟ್ಟಿದ್ದಾರೆ.
ಇದನ್ನೂ ಓದಿ: ಕಪ್ ಗೆಲ್ಲೋ ಸನಿಹದಲ್ಲಿ ತ್ರಿವಿಕ್ರಂ; ಇವರಿಗೆ ಹಿನ್ನಡೆ ಆಗುವ ಅಂಶಗಳೇನು?
ಯಾಮಿನಿ ನಟಿ ಮಾತ್ರವಲ್ಲದೆ ದಂತ ವೈದ್ಯೆಯೂ ಹೌದು. ‘ಮೇ ತೇರಿ ತೂ ಮೇರಾ’, ‘ಗಮ್ ಹೈ ಕಿಸಿ ಕೆ ಪ್ಯಾರ್ ಮೇ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ತೆಲುಗಿನ ‘ಚುಟ್ಟಾಲ ಅಬ್ಬಾಯಿ’ ಚಿತ್ರದಲ್ಲೂ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.