AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK 11 Elimination: ಎಲಿಮಿನೇಷನ್ ವಿಷಯ ತಿಳಿದ ಕೂಡಲೇ ಅಳುತ್ತಾ ಕುಸಿದು ಕುಳಿತ ಐಶ್ವರ್ಯಾ

ಪ್ರತಿ ಭಾನುವಾರ ಬಂದರೆ ಬಿಗ್ ಬಾಸ್ ಸ್ಪರ್ಧಿಗಳ ಎದೆಯಲ್ಲಿ ಢವಢವ ಶುರು ಆಗುತ್ತದೆ. ಈ ವಾರ ಐಶ್ವರ್ಯಾ ಸಿಂಧೋಗಿ ಮತ್ತು ಚೈತ್ರಾ ಕುಂದಾಪುರ ಅವರು ಡೇಂಜರ್​ ಝೋನ್ ತಲುಪಿದ್ದರು. ಎಲಿಮಿನೇಷನ್​ ಪ್ರಕ್ರಿಯೆ ಬಗ್ಗೆ ಐಶ್ವರ್ಯಾ ಸಿಂಧೋಗಿ ಅವರಿಗೆ ಅಸಲಿ ವಿಚಾರ ತಿಳಿದಾಗ ಅವರು ಕಣ್ಣೀರು ಹಾಕುತ್ತಾ ಅಲ್ಲಿಯೇ ಕುಸಿದು ಕುಳಿತುಕೊಂಡರು.

BBK 11 Elimination: ಎಲಿಮಿನೇಷನ್ ವಿಷಯ ತಿಳಿದ ಕೂಡಲೇ ಅಳುತ್ತಾ ಕುಸಿದು ಕುಳಿತ ಐಶ್ವರ್ಯಾ
ಐಶ್ವರ್ಯಾ ಸಿಂಧೋಗಿ
ಮದನ್​ ಕುಮಾರ್​
|

Updated on: Dec 08, 2024 | 11:19 PM

Share

‘ಬಿಗ್ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ 70 ದಿನಗಳು ಕಳೆದಿವೆ. ದಿನದಿಂದ ದಿನಕ್ಕೆ ಆಟದ ರೋಚಕತೆ ಹೆಚ್ಚಾಗುತ್ತಿದೆ. ಪ್ರತಿ ಸಂಡೇ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಆದರೆ ಕೆಲವು ವಾರ ವಿನಾಯಿತಿ ಇರುತ್ತದೆ. ಈ ವಾರ (ಡಿಸೆಂಬರ್​ 8) ಕೂಡ ಯಾರೂ ಎಲಿಮಿನೇಟ್ ಆಗಿಲ್ಲ. ಆದರೆ ಈ ವಿಚಾರವನ್ನು ಬಿಗ್ ಬಾಸ್​ ಮನೆಯೊಳಗಿನ ಸದಸ್ಯರಿಗೆ ಇನ್ನೂ ತಿಳಿಸಿಲ್ಲ. ನಾಮಿನೇಷನ್ ಆಗಿದ್ದವರ ಪೈಕಿ ಈ ವಾರ ಚೈತ್ರಾ ಕುಂದಾಪುರ ಮತ್ತು ಐಶ್ವರ್ಯಾ ಸಿಂಧೋಗಿ ಅವರು ಡೇಂಜರ್​ ಜೋನ್ ತಲುಪಿದ್ದರು. ಆದರೆ ಕೊನೇ ಕ್ಷಣದಲ್ಲಿ ಐಶ್ವರ್ಯಾ ಅವರಿಗೆ ಒಂದು ಟ್ವಿಸ್ಟ್​ ನೀಡಲಾಯಿತು.

ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಸ್ವಲ್ಪ ಬೇರೆ ರೀತಿ ಇರಲಿದೆ ಎಂದು ಕಿಚ್ಚ ಸುದೀಪ್ ಅವರು ತಿಳಿಸಿದರು. ಡೇಂಜರ್​ ಜೋನ್​ನಲ್ಲಿ ಇರುವ ಚೈತ್ರಾ ಕುಂದಾಪುರ ಅವರು ಕನ್ಫೆಷನ್​ ರೂಮ್​ಗೆ ಬರಬೇಕು. ಐಶ್ವರ್ಯಾ ಸಿಂಧೋಗಿ ಅವರು ಆ್ಯಕ್ಟಿವಿಟಿ ಏರಿಯಾಗೆ ಬರಬೇಕು ಎಂದು ಆದೇಶಿಸಲಾಯಿತು. ಟೆನ್ಷನ್​ ಮಾಡಿಕೊಂಡ ಐಶ್ವರ್ಯಾ ಅವರು ಆ್ಯಕ್ಟಿವಿಟಿ ಏರಿಯಾದಲ್ಲಿ ಬಂದು ನಿಂತುಕೊಂಡರು.

ಇನ್ನೇನು ತಾವು ಎಲಿಮಿನೇಟ್​ ಆಗಬಹುದು ಎಂದುಕೊಂಡಿದ್ದ ಐಶ್ವರ್ಯಾ ಅವರಿಗೆ ಕೊನೇ ಹಂತದಲ್ಲಿ ಸರ್ಪ್ರೈಸ್​ ಸಿಕ್ಕಿತು. ‘ವಾಪಸ್ ಹೋಗಿ ಆಟ ಆಡಿ’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು. ಆ ಮಾತು ಕೇಳಿ ಐಶ್ವರ್ಯಾ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಕೂಡಲೇ ಅವರು ಅಳಲು ಆರಂಭಿಸಿದರು. ನಿಂತಲ್ಲೇ ಅವರು ಕುಸಿದರು. ಬಳಿಕ ಕುಳಿತುಕೊಂಡು ಕಣ್ಣೀರು ಹಾಕಿದರು. ವಾಪಸ್ ಅವರು ಬಿಗ್ ಬಾಸ್​ ಮನೆಯ ಒಳಗೆ ಬಂದಾಗ ಎಲ್ಲರಿಗೂ ಅಚ್ಚರಿ ಆಯಿತು.

ಚೈತ್ರಾ ಕುಂದಾಪುರ ಎಲಿಮಿನೇಟ್​ ಆಗಿದ್ದಾರೆ ಎಂದೇ ಬಹುತೇಕರು ಭಾವಿಸಿದ್ದಾರೆ. ಸದ್ಯಕ್ಕೆ ಅವರನ್ನು ಕನ್ಫೆಷನ್​ ರೂಮ್​ನಲ್ಲಿ ಇರಿಸಲಾಗಿದೆ. ಅಸಲಿ ವಿಷಯ ಏನೆಂದರೆ, ಈ ವಾರ ಎಲಿಮಿನೇಷನ್ ಇಲ್ಲ. ಓಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ. ಜನರ ವೋಟಿಂಗ್ ಬಂದಿದ್ದು ಟಾಸ್ಕ್​ಗೆ ಮಾತ್ರ. ಹಾಗಾಗಿ ಚೈತ್ರಾ ಕೂಡ ವಾಪಸ್ ಮನೆಯ ಒಳಗೆ ಹೋಗಲಿದ್ದಾರೆ. ಆದರೆ ಆ ವಿಷಯನ್ನು ಸೋಮವಾರದ (ಡಿ.9) ಸಂಚಿಕೆಯಲ್ಲಿ ತೋರಿಸಲಾಗುವುದು.

ಇದನ್ನೂ ಓದಿ: ದಿನದಿನಕ್ಕೂ ಚೈತ್ರಾಗೆ ಹುಚ್ಚು ಜಾಸ್ತಿ ಆಗುತ್ತಿದೆ: ಮುಲಾಜಿಲ್ಲದೇ ಹೇಳಿದ ರಜತ್​

ಸದ್ಯಕ್ಕೆ ಚೈತ್ರಾ ಕುಂದಾಪುರ ಅವರು ಕನ್ಫೆಷನ್​ ರೂಮ್​ನಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದಾರೆ. ಕೆಲವರು ಒಂದು ನಿಮಿಷ ಕೂಡ ಚೈತ್ರಾ ಅವರನ್ನು ನೆನಪಿಸಿಕೊಳ್ಳತ್ತಿಲ್ಲ. ಆ ವಿಚಾರ ತಿಳಿದ ಚೈತ್ರಾ ಅವರಿಗೆ ಬೇಸರ ಆಗಿದೆ. ಕೆಲವರು ಮಾತ್ರ ಚೈತ್ರಾ ಬಗ್ಗೆ ಮಾತನಾಡುತ್ತಿದರು. ‘ಕನಿಷ್ಠ ಇಷ್ಟು ಜನರಾದರೂ ಮಿಸ್ ಮಾಡಿಕೊಳ್ಳುವ ಹಾಗೆ ನಾನು ಬದುಕಿದ್ದೇನಲ್ಲ’ ಎಂದು ಚೈತ್ರಾ ಅವರು ಎಮೋಷನಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.