ಹೊಸ ನೀರು ಬಂದಾಗ ಹಳೆ ನೀರ ಮರೆತ ಗಿಲ್ಲಿ; ರಿಷಾಗಾಗಿ ಕಾವ್ಯಾನಿಂದ ದೂರ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಾವ್ಯಾ ಶೈವ ಮತ್ತು ಗಿಲ್ಲಿ ನಡುವಿನ ಬಾಂಧವ್ಯ ಹದಗೆಟ್ಟಿದೆ. ರಿಷಾ ಗೌಡ ವೈಲ್ಡ್ ಕಾರ್ಡ್ ಎಂಟ್ರಿ ನಂತರ ಗಿಲ್ಲಿ ಕಾವ್ಯಾ ಅವರಿಂದ ದೂರವಾಗಿದ್ದಾರೆ. ಇದು ಬಿಗ್ ಬಾಸ್ ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ತ್ರಿಕೋನ ಕಥೆ ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ.

ಹೊಸ ನೀರು ಬಂದಾಗ ಹಳೆ ನೀರ ಮರೆತ ಗಿಲ್ಲಿ; ರಿಷಾಗಾಗಿ ಕಾವ್ಯಾನಿಂದ ದೂರ
ಬಿಗ್ ಬಾಸ್

Updated on: Oct 21, 2025 | 8:54 AM

‘ಬಿಗ್ ಬಾಸ್’ ಮನೆಯಲ್ಲಿ ಕಾವ್ಯಾ ಶೈವ (Kavya Shaiva) ಹಾಗೂ ಗಿಲ್ಲಿ ನಟ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಈ ಬಾಂಡಿಂಗ್ ಎಲ್ಲವನ್ನೂ ಮೀರಿದೆ. ಈಗ ಕಾವ್ಯಾ ಶೈವ ಅವರಿಂದ ಗಿಲ್ಲಿ ನಟ ದೂರವೇ ಆಗಿದ್ದಾರೆ. ಈ ವಿಚಾರದಲ್ಲಿ ಕಾವ್ಯಾಗೂ ಸ್ವಲ್ಪ ಬೇಸರ ಇದೆ. ಆದರೆ, ಅವರು ಅದನ್ನು ತೋರಿಸಿಕೊಳ್ಳದೆ ಆಟ ಮುಂದುವರಿಸಿದ್ದಾರೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಕಾವ್ಯಾ ಶೈವ ಹಾಗೂ ಗಿಲ್ಲಿ ಜಂಟಿ ಆದರು. ಇವರ ನಡುವೆ ಇರೋ ಕೆಮಿಸ್ಟ್ರಿ ಅಭಿಮಾನಿಗಳಿಗೆ ಸಾಕಷ್ಟು ಇಷ್ಟ ಆಗಿದೆ. ಈ ಕೆಮಿಸ್ಟ್ರಿಯನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಆದರೆ, ಈಗ ರಿಶಾ ಗೌಡ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದು, ಗಿಲ್ಲಿ ಅವರ ಹಿಂದೆ ಓಡಾಡುತ್ತಾ ಇದ್ದಾರೆ.

ಕಾವ್ಯಾ ಶೈವ ಅವರನ್ನು ಕಂಡಂರೆ ಗಿಲ್ಲಿಗೆ ತುಂಬಾನೇ ಇಷ್ಟ. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಆದರೆ, ಕಾವ್ಯಾ ಆಗಾಗ ಗಿಲ್ಲಿಯನ್ನು ಸಹೋದರ ಎಂದು ಕರೆಯುವ ಪ್ರಯತ್ನ ಮಾಡಿದ್ದು ಇದೆ. ಇದು ಗಿಲ್ಲಿಗೆ ಇಷ್ಟ ಆಗುತ್ತಿಲ್ಲ. ಈ ಕಾರಣಕ್ಕೆ ಕಾವ್ಯಾನ ರೇಗಿಸಬೇಕು ಎಂದು ಗಿಲ್ಲಿ ನಿರ್ಧರಿಸಿಯಾಗಿದೆ. ಹೀಗಾಗಿ, ರಿಷಾ ಗೌಡ ಹಿಂದೆ ಸುತ್ತಾಡುತ್ತಿದ್ದಾರೆ.

ಇದನ್ನೂ ಓದಿ
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಪರಿಣಿತಿ ಚೋಪ್ರಾ
ಶಾಲಲ್ಲಿ ಚಪ್ಪಲಿ ಸುತ್ತಿ ಹೊಡೆದ ಗಿಲ್ಲಿ ನಟ; ಅಶ್ವಿನಿ-ಜಾನ್ವಿ ಗಪ್ ಚುಪ್
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ರಿಷಾ ಹಿಂದೆ ಗಿಲ್ಲಿ ಸುತ್ತಾಡುತ್ತಿರುವುದನ್ನು ನೋಡಿದ ಕಾವ್ಯಾ ಅವರು ಬೇಸರ ಮಾಡಿಕೊಂಡರು. ಈ ಕಾರಣಕ್ಕೆ ಗಿಲ್ಲಿಗೆ ಕಾವ್ಯಾ ಅವರು ರಾಕಿ ಕೂಡ ಕಟ್ಟಿದರು. ಈ ರಾಖಿನ ಕಿತ್ತೆಸೆದರು ರಕ್ಷಿತಾ. ಆ ಬಳಿಕ ಗಿಲ್ಲಿ ಅವರು, ರಿಷಾಗೆ ಬಿಸಿನೀರು ಕುಡಿಸಿದರು. ಈ ವಿಡಿಯೋಗಳು ವೈರಲ್ ಆಗುತ್ತಿವೆ.

ಇದನ್ನೂ ಓದಿ: ಸೋಲುವ ವೇಳೆಯಲ್ಲೂ ಕಾವ್ಯಾನ ಬಿಟ್ಟುಕೊಡಲಿಲ್ಲ ಗಿಲ್ಲಿ ನಟ

ಕಾವ್ಯಾಗೆ ಉರಿಸಬೇಕು ಎಂಬ ಕಾರಣಕ್ಕೆ ಗಿಲ್ಲಿ ಅವರು ಈ ರೀತಿ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಜಾನ್ವಿ ಹಾಗೂ ಅಶ್ವಿನಿ ಗೌಡ ಕೂಡ ಇದೇ ವಿಚಾರವನ್ನು ಚರ್ಚೆ ಮಾಡಿದ್ದಾರೆ. ‘ಹೊಸ ನೀರು ಬಂದಾಗ, ಹಳೆ ನೀರನ್ನು ಗಿಲ್ಲಿ ಮರೆತಿದ್ದಾರೆ’ ಎಂಬ ಮಾತುಗಳು ಚರ್ಚೆಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:52 am, Tue, 21 October 25