ನಿತ್ಯಾ ಹಾಗೂ ಕರ್ಣ ವಿವಾಹಕ್ಕೆ ದೊಡ್ಡ ಟ್ವಿಸ್ಟ್; ನಿಧಿ ಫ್ಯಾನ್ಸ್ ಫುಲ್ ಖುಷ್
Karna Serial: ನಿತ್ಯಾ-ಕರ್ಣ ಮದುವೆಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ರಮೇಶ್‌ನ ದುಷ್ಕೃತ್ಯದಿಂದ ವಿವಾಹದ ಪರಿಸ್ಥಿತಿ ಎದುರಾಗಿತ್ತು. ಆದರೆ, ಕರ್ಣನ ಚಾತುರ್ಯದಿಂದ ಮದುವೆ ನಿಜವಾಗಿ ನಡೆಯುತ್ತಿಲ್ಲ. ನಿತ್ಯಾ ತಾನೇ ತಾಳಿ ಕಟ್ಟಿಕೊಂಡಿದ್ದು, ಈ ಸತ್ಯ ನಿಧಿಗೆ ತಿಳಿದಿಲ್ಲ. ನಿಧಿ ಅಭಿಮಾನಿಗಳಿಗೆ ಇದು ಖುಷಿ ಸುದ್ದಿ.

ನಿತ್ಯಾ ಹಾಗೂ ಕರ್ಣ (Karna Serial) ವಿವಾಹ ಆಗುವ ಪರಿಸ್ಥಿತಿ ಬಂದಿದೆ ಎಂಬುದು ಗೊತ್ತೇ ಇದೆ. ಅಸಲಿಗೆ ಇಲ್ಲಿ ನಿಧಿ ಹಾಗೂ ನಿತ್ಯಾ ವಿವಾಹ ಆಗಬೇಕಿತ್ತು. ಆದರೆ, ಅಲ್ಲಾಗಿದ್ದೇ ಬೇರೆ. ಕರ್ಣನ ತಂದೆ ರಮೇಶ್ ಮಾಡಿದ ಕೆಟ್ಟ ಕೆಲಸದಿಂದ ನಿತ್ಯಾ ಹಾಗೂ ಕರ್ಣ ವಿವಾಹ ಆಗಬೇಕಾದ ಪರಿಸ್ಥಿತಿ ಬಂದಿದೆ. ಹೀಗಿರುವಾಗಲೇ ನಿತ್ಯಾ ಹಾಗೂ ಕರ್ಣನ ಮದುವೆ ವಿಚಾರಕ್ಕೆ ದೊಡ್ಡ ಟ್ವಿಸ್ಟ್ ಎದುರಾಗಿದೆ. ಇಬ್ಬರೂ ನಿಜವಾಗಿಯೂ ವಿವಾಹ ಆಗುತ್ತಿಲ್ಲ ಎಂಬ ವಿಚಾರ ತಿಳಿದು ನಿಧಿ ಫ್ಯಾನ್ಸ್ ಖುಷಿ ಆಗಿದ್ದಾರೆ.
ನಿತ್ಯಾ ಹಾಗೂ ನಿಧಿ ಅಕ್ಕ ತಂಗಿ. ನಿತ್ಯಾ ಹಾಗೂ ತೇಜಸ್ ಮದುವೆ ಫಿಕ್ಸ್ ಆಗಿತ್ತು. ಆದರೆ, ಅವನನ್ನು ಕಿಡ್ನ್ಯಾಪ್ ಮಾಡಿ, ನಿತ್ಯಾ ಹಾಗೂ ಕರ್ಣ ಮದುವೆ ಆಗುವಂತೆ ಮಾಡಿದ್ದು ರಮೇಶ್. ಕರ್ಣ ಹಾಗೂ ನಿತ್ಯಾ ವಿವಾಹದ ಬಗ್ಗೆ ನಿಧಿ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಇದ್ದಿದ್ದಂತೂ ಸುಳ್ಳಲ್ಲ. ಈಗ ಅವರಿಗೆ ಒಂದು ಖುಷಿ ಸುದ್ದಿ ಸಿಕ್ಕಿದೆ ಎಂದೇ ಹೇಳಬಹುದು.
View this post on Instagram
‘ನೀವು ನನ್ನ ಯಾವಾಗಲೂ ದೂರವೇ ನಿಲ್ಲಿಸಿದ್ದೀರಾ. ನಾನು ನಿಮ್ಮನ್ನು ಮದುವೆ ಆಗೋದು ನಿಮಗೆ ಕನಸಲ್ಲೂ ಇಷ್ಟ ಇಲ್ಲ. ಈಗ ಮುಖ್ಯ ಎನಿಸೋದು ನನ್ನಜ್ಜಿ ಹಾಗೂ ನಿಮ್ಮಜ್ಜಿ ಜೀವ’ ಎಂದು ಕರ್ಣ ಹೇಳಿದನು. ಆ ಬಳಿಕ ನಿತ್ಯಾ ಸಾಕಷ್ಟು ನೊಂದುಕೊಂಡಳು. ‘ನನ್ನಂತವಳಿಗೆ ಸಾವೇ ಪರಿಹಾರ’ ಎಂದು ನಿತ್ಯಾ ಹೇಳಿದಳು. ಆಗ ಕರ್ಣ ಒಂದು ಐಡಿಯಾ ನೀಡಿದನು.
ಇದನ್ನೂ ಓದಿ: ಸಪ್ತಪದಿ ತುಳಿಯುವಾಗಲೇ ಕರ್ಣನಿಗೆ ಗೊತ್ತಾಯ್ತು ನಿಧಿ ಪ್ರೆಗ್ನೆನ್ಸಿ ವಿಚಾರ
‘ನಿತ್ಯಾ ಬಳಿ ನೀವೇ ತಾಳಿ ಕಟ್ಟಿಕೊಳ್ಳಿ’ ಎಂದು ಕರ್ಣ ಹೇಳಿದ್ದಾನೆ. ನಿತ್ಯಾ ಅದೇ ರೀತಿ ಮಾಡಿದ್ದಾಳೆ. ನಾಲ್ಕು ಗೋಡೆಯ ಮಧ್ಯೆಯೇ ಇದು ನಡೆದು ಹೋಗಿದೆ. ಹೀಗಾಗಿ, ಹೆಚ್ಚು ಚಿಂತಿಸೋ ಅಗತ್ಯವೇ ಇಲ್ಲ ಎನ್ನಬಹುದು. ಆದರೆ, ಈ ವಿಚಾರ ನಿಧಿಗೆ ಇನ್ನೂ ತಿಳಿದಿಲ್ಲ. ಅದು ಅವಳಿಗೆ ತಿಳಿಯಲು ಸಾಕಷ್ಟು ಸಮಯ ಬೇಕಾಗಬಹುದು. ಸದ್ಯಕ್ಕಂತೂ ನಿಧಿ ಸಾಕಷ್ಟು ಅಪ್ಸೆಟ್ ಆಗಿದ್ದಾಳೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಮುಂದೊಂದು ದಿನ ನಿಧಿ ಹಾಗೂ ಕರ್ಣನ ವಿವಾಹ ನೆರವೇರಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







