‘ಬೇರೆಯವರನ್ನು ಅಸಹ್ಯ ಮಾಡಲು ಹೋದಷ್ಟು, ನೀವು ಅಸಹ್ಯ ಆಗ್ತೀರಾ’; ಅಶ್ವಿನಿ ಹಳೇ ವಿಡಿಯೋ ವೈರಲ್
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರ ವರ್ತನೆ, ವಿಶೇಷವಾಗಿ ರಕ್ಷಿತಾ ಶೆಟ್ಟಿ ಅವರೊಂದಿಗಿನ ಜಗಳ, ಅನೇಕರಿಗೆ ಇಷ್ಟವಾಗಿಲ್ಲ. ಇತರರನ್ನು ತುಳಿಯಬಾರದು ಎಂದು ಹೇಳಿದ್ದ ಅಶ್ವಿನಿ ಅವರ ಹಳೆಯ ವಿಡಿಯೋ ಈಗ ವೈರಲ್ ಆಗಿದೆ. ಅವರ ನಡೆಯ ಬಗ್ಗೆ ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗಿದೆ.

ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಆ್ಯಂಕರ್ ಜಾನ್ವಿ ಜೊತೆ ಸೇರಿ ಅವರು ಕೂಡ ದಾರಿ ತಪ್ಪುತ್ತಿದ್ದಾರಾ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಬಿಗ್ ಬಾಸ್ ಮನೆಯಲ್ಲಿ ಅವರು ರಕ್ಷಿತಾ ಗೌಡ ಅವರನ್ನು ತುಳಿಯಲು ಪ್ರಯತ್ನಿಸಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ಈಗ ಅಶ್ವಿನಿ ಗೌಡ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಜೀವನದ ನೀತಿ ಪಾಠ ಮಾಡಿದ್ದರು. ಈ ವಿಡಿಯೋ ನೋಡಿದ ಅನೇಕರು ಅಶ್ವಿನಿ ಅವರನ್ನು ಟೀಕಿಸುತ್ತಿದ್ದಾರೆ.
ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಸಾಕಷ್ಟು ಟಗ್ ಆಫ್ ವಾರ್ ನಡೆದಿತ್ತು. ರಕ್ಷಿತಾ ಶೆಟ್ಟಿ ವಿರುದ್ಧ ಸಾಕಷ್ಟು ಕೆಟ್ಟ ಪದಗಳ ಬಳಕೆಯನ್ನು ಅಶ್ವಿನಿ ಅವರು ಮಾಡಿದ್ದರು. ಈ ಕೀಳು ಪದಗಳು ಅಶ್ವಿನಿ ಗೌಡ ಅವರ ಘನತೆಗೆ ಸರಿ ಹೊಂದುವಂತದ್ದು ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಅಶ್ವಿನಿ ಗೌಡ ಅವರ ಮಾತ್ರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಇದನ್ನೂ ಓದಿ: ಜಾನ್ವಿ-ಅಶ್ವಿನಿ ಗೌಡಗೆ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚಿತು ಹೇಟ್ ಕಮೆಂಟ್
ರಕ್ಷಿತಾ ಶೆಟ್ಟಿಯನ್ನು ತುಳಿಯಲು ಅಶ್ವಿನಿ ಪ್ರಯತ್ನಿಸಿದರು. ಆದರೆ, ರಕ್ಷಿತಾ ಅವರು ಅಶ್ವಿನಿ ವಿರುದ್ಧವೇ ತಿರುಗಿ ಬಿದ್ದರು. ಇದು ಅಶ್ವಿನಿ ಗೌಡ ಅವರ ಅಹಂಗೆ ಪೆಟ್ಟು ಕೊಟ್ಟಂತೆ ಆಯಿತು. ಹೀಗಾಗಿ, ರಕ್ಷಿತಾ ಅವರನ್ನು ಕೆಳಕ್ಕೆ ಹಾಕಲು ಸಾಕಷ್ಟು ಪ್ರಯತ್ನಗಳು ಅಶ್ವಿನಿ ಕಡೆಯಿಂದ ನಡೆದವು. ಆದರೆ, ಸಮಾಜದ ದೃಷ್ಟಿಯಲ್ಲಿ ಅಶ್ವಿನಿ ಅವರು ಕೆಳಕ್ಕೆ ಹೋದರೆ, ರಕ್ಷಿತಾ ಶೆಟ್ಟಿ ಮೇಲಕ್ಕೆ ಬರುತ್ತಾ ಹೋದರು.
View this post on Instagram
ಈಗ ಅಶ್ವಿನಿ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು, ಬೇರೆಯವರಿಗೆ ಕೆಟ್ಟದ್ದು ಬಯಸಬಾರದು, ಬೇರೆಯವರನ್ನು ತುಳಿಯಬಾರದು ಎಂದು ಹೇಳಿದ್ದರು. ‘ಬೇರೆಯವರ ಅಸಹ್ಯ ಮಾಡಲು ಹೋದಷ್ಟು, ನೀವು ಅಸಹ್ಯ ಆಗ್ತೀರಾ. ನೀವು ಮೊದಲು ತಿಳಿದುಕೊಳ್ಳಬೇಕು. ನಿಮ್ಮ ವ್ಯಕ್ತಿತ್ವ ಎತ್ತಿ ಹಿಡಿಯಬೇಕು. ಯಾವುದೋ ವ್ಯಕ್ತಿಯನ್ನು ಕೀಳು ಮಾಡಲು ಹೋಗಿ ನಿಮ್ಮ ವ್ಯಕ್ತಿತ್ವನ ಹಾಳು ಮಾಡಿಕೊಳ್ಳಬೇಡಿ. ಅವರು ಬದುಕಲಿ, ನೀವು ಬದುಕಿ’ ಎಂದಿದ್ದರು ಅಶ್ವಿನಿ ಗೌಡ. ಇಷ್ಟೆಲ್ಲ ಗೊತ್ತಿದ್ದವರು ದಾರಿ ತಪ್ಪಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








