ಸುದೀಪ್ ಬುದ್ಧಿ ಮಾತಿಗೂ ಬದಲಾಗಲಿಲ್ಲ ಜಾನ್ವಿ; ಅದೇ ಹಾಡು, ಅದೇ ರಾಗ
ಬಿಗ್ ಬಾಸ್ ಕನ್ನಡ 12ರಲ್ಲಿ ಜಾನ್ವಿ ವರ್ತನೆ ಚರ್ಚೆಯ ವಿಷಯವಾಗಿದೆ. ಸುದೀಪ್ ಅವರು ಬುದ್ಧಿವಾದ ಹೇಳಿದರೂ ಜಾನ್ವಿ ಬದಲಾಗುತ್ತಿಲ್ಲ. ಅಶ್ವಿನಿ ವಿಷಯದಲ್ಲಿ ತಮ್ಮ ಸಮರ್ಥನೆ ಮುಂದುವರಿಸಿ, ರಘು-ಅಶ್ವಿನಿ ಜಗಳದಲ್ಲೂ ಮೂಗು ತೂರಿಸಿ ಟ್ರೋಲ್ ಆಗುತ್ತಿದ್ದಾರೆ. ಇದರಿಂದ ಅವರಿಗೆ ಸಾಕಷ್ಟು ಹೇಟ್ ಕಮೆಂಟ್‌ಗಳು ಬರುತ್ತಿದ್ದು, ಕುಟುಂಬದವರ ಮೇಲೂ ಪರಿಣಾಮ ಬೀರುತ್ತಿದೆ.

ಕಿಚ್ಚ ಸುದೀಪ್ ಅವರು ವೀಕೆಂಡ್ನಲ್ಲಿ ಯಾವುವಾದರೂ ವಿಷಯ ಹೇಳುತ್ತಾರೆ ಎಂದರೆ ಅದಕ್ಕೊಂದು ಆಳವಾದ ಅರ್ಥ ಇರುತ್ತದೆ. ಎಲ್ಲಾ ಸ್ಪರ್ಧಿಗಳಿಗೂ ಇದು ಅರ್ಥ ಆಗಿಯೇಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಜಾನ್ವಿ. ಅವರಿಗೆ ಸುದೀಪ್ ಅವರು ಸಾರಿ ಸಾರಿ ಬುದ್ಧಿ ಹೇಳಿದ್ದರು. ಆದರೂ ಅವರು ಬದಲಾಗುವ ಸೂಚನೆಯೇ ಸಿಗುತ್ತಿಲ್ಲ. ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೂರನೇ ವೀಕೆಂಡ್ನಲ್ಲಿ ಜಾನ್ವಿಗೆ ಕಿವಿಮಾತೊಂದನ್ನು ಹೇಳಿದ್ದರು. ‘ಅಶ್ವಿನಿ ಅವರನ್ನು ಜಾಸ್ತಿ ಪುಶ್ ಮಾಡುತ್ತಾ ಹೋದರೆ, ಪುಶ್ ಆಗಿ ಈಕಡೆ ಬರ್ತೀರಾ’ ಎಂದಿದ್ದರು. ಆದರೆ, ಜಾನ್ವಿ ಇದನ್ನು ಅರ್ಥೈಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಮತ್ತದೇ ಹಳೆ ರಾಗ ಆರಂಭಿಸಿದ್ದಾರೆ.
ರಕ್ಷಿತಾ ಶೆಟ್ಟಿ ಅವರನ್ನು ಜಾನ್ವಿ ಅವರು ರೇಗಿಸಿದ್ದರು. ಇದು ಬೇರೆಯದೇ ಹಂತಕ್ಕೆ ಹೋಗಿತ್ತು. ಈ ವಿಚಾರದಲ್ಲಿ ಅಶ್ವಿನಿ ಕನಿಷ್ಠ ಕ್ಷಮೆಯನ್ನಾದರೂ ಕೇಳಿದ್ದಾರೆ. ಆದರೆ, ಜಾನ್ವಿ ಮಾತ್ರ ಇನ್ನೂ ಈ ವಿಚಾರದಲ್ಲಿ ಸಮರ್ಥನೆ ಕೊಡುತ್ತಲೇ ಬರುತ್ತಿದ್ದಾರೆ. ಈಗ ಅವರು ಅಶ್ವಿನಿ ಅವರನ್ನು ಬೆಂಬಲಿಸೋದನ್ನು ಮುಂದುವರಿಸಿದ್ದಾರೆ.
ರಘು ಹಾಗೂ ಅಶ್ವಿನಿ ಮಧ್ಯೆ ಫೈಟ್ ನಡೆಯುತ್ತಿತ್ತು. ಏಕವಚನ ಬಳಸಿದ ಆರೋಪಕ್ಕೆ ಅಶ್ವಿನಿ ಅವರು ಸಿಟ್ಟಾದರು. ಅಶ್ವಿನಿ ಹಾಗೂ ರಘು ಫೈಟ್ ಮಾಡುವಾಗ ತಮಗೆ ಸಂಬಂಧವೇ ಇಲ್ಲದಿದ್ದರೂ ಅಶ್ವಿನಿ ಪರವಾಗಿ ಮಾತನಾಡಲು ಬಂದು ಶೇಪ್ಔಟ್ ಮಾಡಿಸಿಕೊಂಡಿದ್ದಾರೆ. ಆ ಬಳಿಕ ರಘು ಬಳಿ ಬಂದು, ಬೆಣ್ಣೆ ಹಚ್ಚುವ ಕೆಲಸ ಮಾಡಿದ್ದಾರೆ. ಇಷ್ಟೇ ಅಲ್ಲ, ‘ಸಮಯ ಸಿಕ್ಕಾಗ ಅಶ್ವಿನಿ ಬಳಿ ಮಾತನಾಡಿ ಈ ವಿಚಾರವನ್ನು ಬಗೆಹರಿಸಿಕೊಳ್ಳಿ’ ಎಂದು ಕೂಡ ಕೋರಿದ್ದಾರೆ.
ಇದನ್ನೂ ಓದಿ: ಸುದೀಪ್ ಬಿಗ್ ಬಾಸ್ ಸಂಭಾವನೆ ಡೇಟಾ ಡಿಲೀಟ್; ಈ ಕಿತಾಪತಿ ಮಾಡಿದ್ದು ಯಾರು?
ಸೋಶಿಯಲ್ ಮೀಡಿಯಾದಲ್ಲಿ ಜಾನ್ವಿ ಅವರಿಗೆ ಸಾಕಷ್ಟು ಹೇಟ್ ಕಮೆಂಟ್‌ಗಳು ಬರುತ್ತಿವೆ. ಇದು ಅವರ ಕುಟುಂಬದವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ತಪ್ಪನ್ನು ತಿದ್ದಿಕೊಳ್ಳದಿದ್ದರೆ ಅವರಿಗೆ ಸಾಕಷ್ಟು ಸಮಸ್ಯೆ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




