ಸುದೀಪ್ ಬಿಗ್ ಬಾಸ್ ಸಂಭಾವನೆ ಡೇಟಾ ಡಿಲೀಟ್; ಈ ಕಿತಾಪತಿ ಮಾಡಿದ್ದು ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂರನೇ ವಾರವೇ ರೋಮಾಂಚಕ ಫಿನಾಲೆ ನಡೆದಿದ್ದು, ಮಂಜು ಭಾಷಿಣಿ ಮತ್ತು ಅಶ್ವಿನಿ ಹೊರಬಿದ್ದಿದ್ದಾರೆ. ರಘು, ರಿಷಾ ಗೌಡ ಮತ್ತು ಸೂರಜ್ ಸಿಂಗ್ ವೈಲ್ಡ್ ಕಾರ್ಡ್ ಆಗಿ ಪ್ರವೇಶಿಸಿದ್ದಾರೆ. ಈ ಎಪಿಸೋಡ್‌ನಲ್ಲಿ ಮಾತನಾಡುವ ರೋಬೋ ಸುದೀಪ್ ಅವರ ಹೆಚ್ಚಿದ ಸಂಭಾವನೆ ಡೇಟಾ "ಡಿಲೀಟ್" ಆಗಿದೆ ಎಂದು ಹೇಳಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBk 12) ಮೂರನೇ ವಾರವೇ ಫಿನಾಲೆ ನಡೆದಿದೆ. ಈ ಫಿನಾಲೆಯಲ್ಲಿ ಸಾಕಷ್ಟು ಮನರಂಜನೆಗಳು ಇದ್ದವು. ಅದೇ ರೀತಿ ಮಂಜು ಭಾಷಿಣಿ ಹಾಗೂ ಅಶ್ವಿನಿ ಔಟ್ ಆದರೆ, ರಘು, ರಿಷಾ ಗೌಡ ಹಾಗು ಸೂರಜ್ ಸಿಂಗ್ ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಕಾಲಿಟ್ಟಿದ್ದಾರೆ. ಈ ವೇದಿಕೆ ಮೇಲೆ ಸುದೀಪ್ ಸಂಭಾವನೆ ವಿಚಾರ ಕೂಡ ಚರ್ಚೆ ಆಯಿತು. ಶಾಕಿಂಗ್ ವಿಚಾರ ಎಂದರೆ ಸುದೀಪ್ ಸಂಭಾವನೆ ಡೇಟಾನೇ ಡಿಲೀಟ್ ಮಾಡಲಾಗಿದೆಯಂತೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.
ಬಿಗ್ ಬಾಸ್ನಲ್ಲಿ ಪ್ರತಿ ಬಾರಿ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ಈ ಬಾರಿ ಬಿಗ್ ಬಾಸ್ನಲ್ಲಿ ರೋಬೋನ ವೇದಿಕೆ ಮೇಲೆ ತರಲಾಯಿತು. ಹಾಗಂತ ಇದು ಸಣ್ಣ-ಪುಟ್ಟ ರೋಬೋ ಅಲ್ಲ. ಮಾತನಾಡುವ ರೋಬೋ. ಸುದೀಪ್ ಮಾತನಾಡಿದರೆ, ಅದಕ್ಕೆ ಉತ್ತರಿಸುತ್ತದೆ. ಈ ಎಪಿಸೋಡ್ ಫನ್ ಆಗಿತ್ತು. ಈ ವೇಳೆ ಸುದೀಪ್ ಬಗ್ಗೆ ಹಾಗೂ ಬಿಗ್ ಬಾಸ್ ಬಗ್ಗೆ ರೋಬೋ ಮಾತನಾಡಿತು.
‘ಬಿಗ್ ಬಾಸ್ ಅಲ್ಲಿ 117 ಜನ ಬಾಯ್ಸ್, 121 ಜನ ಹುಡುಗಿಯರು ಬಂದಿದ್ದಾರೆ. ಅದರಲ್ಲಿ ವೈಲ್ಡ್ ಕಾರ್ಡ್ 20 ಜನ ಸೇರಿದ್ದಾರೆ. ಒಟ್ಟೂ 238 ಜನ ಇದ್ದಾರೆ. ನೀವು 348 ವೀಕೆಂಡ್ ಶೋ ಮಾಡಿದ್ದೀರಾ. 3 ಲೊಕೇಶನ್ ಚೇಂಜ್ ಆಗಿದೆ. ಡೈರೆಕ್ಟರ್ಗಳೂ ಚೇಂಜ್ ಆಗಿದ್ದಾರೆ. ಆದರೆ, ನೀವು ಹಾಗೂ ಜನರ ಪ್ರೀತಿ ಮಾತ್ರ ಹಾಗೆಯೇ ಇದೆ’ ಎಂದು ರೋಬೋ ಹೇಳಿತು.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್-ಪ್ರಿಯಾ ಆ್ಯನಿವರ್ಸರಿಗೆ ಶುಭಾಶಯ ಕೋರಿದ ನಾಗಾರ್ಜುನ
‘ಇದನ್ನು ಹೇಳಬೇಕೋ ಗೊತ್ತಿಲ್ಲ. ಈ ಸೀಸನ್ ನಿಂದ ನಿಮ್ಮ ಸಂಭಾವನೆ ಎಷ್ಟು ಹೆಚ್ಚಾಗಿದೆ ಎಂಬುದು ಗೊತ್ತಿತ್ತು. ಆದರೆ, ಆ ಡೇಟಾನ ಯಾರೋ ಡಿಲೀಟ್ ಮಾಡಿಬಿಟ್ಟಿದ್ದಾರೆ. ಇನ್ಕಾಗ್ನಿಟೋ ಮೂಡ್ನಲ್ಲಿ ಮಾತನಾಡಬೇಕು. ಬ್ಯಾಕ್ ಸ್ಟೇಜ್ನಲ್ಲಿ ಮಾತನಾಡೋಣ’ ಎಂದು ರೋಬೋ ಸುದೀಪ್ಗೆ ಹೇಳಿತು. ಈ ಎಪಿಸೋಡ್ ಸಖತ್ ಫನ್ ಆಗಿ ಇತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




