ಜಾನ್ವಿ-ಅಶ್ವಿನಿ ಗೌಡಗೆ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚಿತು ಹೇಟ್ ಕಮೆಂಟ್
Bigg Boss Kannada 12: ‘ಬಿಗ್ ಬಾಸ್ ಕನ್ನಡ 12’ರ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾನ್ವಿ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೇಟ್ ಕಮೆಂಟ್ಸ್ ಸುರಿಮಳೆಗೈಯಲಾಗಿದೆ. ಇವರು ‘ವಿಲನ್’ ಪಟ್ಟ ಗಳಿಸಿದ್ದಾರೆ. ಇವರ ಕುಟುಂಬಗಳ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆಯಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಸ್ಪರ್ಧಿ ಆಗಿರೋ ಅಶ್ವಿನಿ ಗೌಡ ಹಾಗೂ ಜಾನ್ವಿ ಒಟ್ಟಿಗೇ ಇರುತ್ತಿದ್ದಾರೆ. ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ ಸಾಗುತ್ತಿದ್ದಾರೆ. ಇವರು ಮಾಡಿದ ಆ ಒಂದು ತಪ್ಪು ಸಾಕಷ್ಟು ದುಬಾರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಸಾಕಷ್ಟು ಹೇಟ್ ಕಮೆಂಟ್ಗಳು ಬರುತ್ತಿವೆ. ಇದು ಅವರ ಕುಟುಂಬದ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.
ಜಾನ್ವಿ ಹಾಗೂ ಅಶ್ವಿನಿ ಗೌಡ ಒಂಟಿಗಳೇ ಆದರೂ ಇಬ್ಬರೂ ಸೇರಿಕೊಂಡು ಜಂಟಿ ಆಗಿದ್ದಾರೆ. ಅಶ್ವಿನಿ ಅವರು ಜಾನ್ವಿ ಪರವಾಗಿ ಸಾಕಷ್ಟು ಫೇವರಿಸಂ ಮಾಡಿದ್ದು ಸ್ಪಷ್ಟವಾಗಿ ಕಾಣಿಸಿದೆ. ಜಾನ್ವಿ ಹಾಗೂ ಅಶ್ವಿನಿ ಗೌಡ ಅವರು ಒಟ್ಟಾಗಿ ರಕ್ಷಿತಾ ಶೆಟ್ಟಿ ಮೇಲೆ ಮುಗಿ ಬಿದ್ದಿದ್ದರು. ರಕ್ಷಿತಾನ ದ್ವೇಷ ಮಾಡುವವರು ಕೂಡ ಅವರನ್ನು ಇಷ್ಟ ಪಡುವಂತೆ ಮಾಡಿದರು. ಕೆಳಮಟ್ಟದ ಶಬ್ದಗಳಿಂದ ರಕ್ಷಿತಾನ ಇಬ್ಬರೂ ಹೀಯಾಳಿಸಿದ್ದರು. ಈ ಎಲ್ಲಾ ಕಾರಣದಿಂದ ಜಾನ್ವಿ ಹಾಗೂ ಅಶ್ವಿನಿ ಗೌಡ ಅವರು ವಿಲನ್ ಆದರು.
View this post on Instagram
ಜಾನ್ವಿ ಹಾಗೂ ಅಶ್ವಿನಿ ಗೌಡ ಅವರು ಮಾಡಿದ ತಪ್ಪಿಗೆ ದೊಡ್ಡ ದಂದ ತೆತ್ತುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಾಕಷ್ಟು ಹೇಟ್ ಕಮೆಂಟ್ಗಳು ಬರುತ್ತಿವೆ. ಬಿಗ್ ಬಾಸ್ ಮನೆಯಲ್ಲಿ ಇರುವುದರಿಂದ ಇದು ಅವರ ಗಮನಕ್ಕೆ ಬಂದಿರೋದಿಲ್ಲ. ಆದರೆ, ಅವರ ಕುಟುಂಬದ ಮೇಲೆ ಇದು ನೇರವಾಗಿ ಪರಿಣಾಮ ಬಿರುವ ಸಾಧ್ಯತೆ ಇದೆ.
ಇದನ್ನೂ ಓದಿ: ಸುದೀಪ್ ಬಿಗ್ ಬಾಸ್ ಸಂಭಾವನೆ ಡೇಟಾ ಡಿಲೀಟ್; ಈ ಕಿತಾಪತಿ ಮಾಡಿದ್ದು ಯಾರು?
ಸಮಾಜದಲ್ಲಿ ಒಳ್ಳೆಯ ಹೆಸರು ಇಟ್ಟುಕೊಂಡವರು ಬಿಗ್ ಬಾಸ್ಗೆ ಹೋದ ಬಳಿಕ ವಿಲನ್ ಆದ ಉದಾಹರಣೆ ಸಾಕಷ್ಟಿದೆ. ಅದೇ ರೀತಿ, ಹೊರಗೆ ಟ್ರೋಲ್ ಆದವರು ಬಿಗ್ ಬಾಸ್ಗೆ ಬಂದು ಫೇವರಿಟ್ ಆದ ಸ್ಪರ್ಧಿಗಳೂ ಇದ್ದಾರೆ. ಅಶ್ವಿನಿ ಗೌಡ ಅವರು ಕನ್ನಡ ಹೋರಾಟಗಾರ್ತಿ ಎಂಬ ಪಟ್ಟ ಪಡೆದುಕೊಂಡಿದ್ದರು. ಆದರೆ, ಬಿಗ್ ಬಾಸ್ ಮನೆ ಬಂದು ಅವರ ವಿರುದ್ಧ ನೆಗೆಟಿವಿಟಿ ಹಬ್ಬುತ್ತಿದೆ. ರಕ್ಷಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದವರು. ಆದರೆ, ಈಗ ಅವರ ಬಗ್ಗೆ ಸಿಂಪತಿ ಮೂಡುವಂತೆ ಆಗಿದೆ. ಜಾನ್ವಿ ಹಾಗೂ ಅಶ್ವಿನಿ ಗೌಡ ಅವರು ಮಾಡಿದ ತಪ್ಪಿಗೆ ಹೇಟ್ ಕಮೆಂಟ್ ಪಡೆಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








