‘ಮರ್ಯಾದೆ, ಗೌರವ ಕಳೆದುಕೊಂಡಾಗ ಜಗಳ ಕೊನೆ ಆಗುತ್ತೆ’; ಸ್ಪರ್ಧಿಗಳಿಗೆ ಸುದೀಪ್ ನೇರ ಎಚ್ಚರಿಕೆ

Kichcha Sudeep: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಗಳ ಜಗಳ ಹೆಚ್ಚಾಗಿದೆ. ಆಟ ಶುರುವಾಗಿಲ್ಲ ಎಂದು ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ಗೌರವ ಕಳೆದುಕೊಂಡ ಮೇಲೆ ಜಗಳ ನಿಲ್ಲುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದಾ ಕಿತ್ತಾಟದಲ್ಲಿ ತೊಡಗಿರುವ ಸ್ಪರ್ಧಿಗಳಿಂದ ವೀಕ್ಷಕರಿಗೂ ಬೇಸರವಾಗಿದೆ.

‘ಮರ್ಯಾದೆ, ಗೌರವ ಕಳೆದುಕೊಂಡಾಗ ಜಗಳ ಕೊನೆ ಆಗುತ್ತೆ’; ಸ್ಪರ್ಧಿಗಳಿಗೆ ಸುದೀಪ್ ನೇರ ಎಚ್ಚರಿಕೆ
ಬಿಗ್ ಬಾಸ್

Updated on: Oct 12, 2025 | 8:18 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶುರುವಾಗಿ ಎರಡು ವಾರಗಳು ಕಳೆದಿವೆ. ಆದರೆ, ಈವರೆಗೆ ಸ್ಪರ್ಧಿಗಳ ಮಧ್ಯೆ ಸಾಮರಸ್ಯ ಎಂಬುದು ಬರಲೇ ಇಲ್ಲ. ಜೊತೆಗೆ ಆಟ ಕೂಡ ಟೇಕ್ ಆಫ್ ಆಗಿಲ್ಲ. ಈ ಬಗ್ಗೆ ಸುದೀಪ್​ ಅವರಿಗೆ ಬೇಸರ ಇದೆ. ಈ ಕಾರಣಕ್ಕೆ ಎಲ್ಲಾ ಸ್ಪರ್ಧಿಗಳಿಗೆ ಒಂದು ನೇರ ಎಚ್ಚರಿಕೆ ನೀಡಿದ್ದಾರೆ. ಮರ್ಯಾದೆ, ಗೌರವ, ಕೀರ್ತಿ ಕಳೆದುಕೊಂಡ ಮೇಲೆ ಈ ಜಗಳ ಕೊನೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.

‘ಬಿಗ್ ಬಾಸ್​’ನಲ್ಲಿ ಜಂಟಿ ಹಾಗೂ ಒಂಟಿ ಎಂದು ಎರಡು ಗುಂಪು ಮಾಡಲಾಗಿದೆ. ಯಾವ ಸ್ಪರ್ಧಿಗಳು ಯಾವಾಗ ಕಿತ್ತಾಡಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಂಡು ಒಬ್ಬರ ಮೇಲೆ ಮತ್ತೊಬ್ಬರು ಪರಸ್ಪರ ಆರೋಪ ಹೊರಿಸುತ್ತಿದ್ದಾರೆ. ಇದನ್ನು ನೋಡಿ ಸುದೀಪ್ ಕೂಡ ಬೇಸರಗೊಂಡಿದ್ದಾರೆ. ಅವರು ನೇರವಾಗಿ ಎಲ್ಲಾ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

‘ನೀವು ಯಾವಾಗ ಆಟ ಶುರು ಮಾಡುತ್ತೀರಿ ಎಂಬುದನ್ನು ನೀವೇ ನಿರ್ಧರಿಸಿ. ಇಷ್ಟು ದಿನ ಎಲ್ಲಾ ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಳ್ಳೋದೇ ಆಗಿದೆ. ಒಬ್ಬರ ಮೇಲೆ ಒಬ್ಬರು ಆರೋಪ ಹೊರಿಸಿಕೊಳ್ಳುತ್ತಿದ್ದೀರಾ. ಕಾಮನ್​ಸೆನ್ಸ್ ಅನ್ನೋದು ಇಲ್ಲಿ ಯಾರಿಗೂ ಇಲ್ಲ’ ಎಂದು ಸುದೀಪ್ ಅವರು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ
‘ನಂದ ಗೋಕುಲ’ ಧಾರಾವಾಹಿಯಲ್ಲಿ ವಲ್ಲಭ-ಅಮೂಲ್ಯ ವಿವಾಹ; ದೊಡ್ಡ ಟ್ವಿಸ್ಟ್
ಈ ವಾರ ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ
ಒಂದಲ್ಲ, ಎರಡಲ್ಲ ಆರು ಗಂಟೆ ಸ್ನಾನ ಮಾಡಿದ ಸತೀಶ್; ಒಡೆಯಿತು ತಾಳ್ಮೆಯ ಕಟ್ಟೆ

‘ಸಮಸ್ಯೆ ಎಲ್ಲಿಂದ ಆಗುತ್ತಿದೆ ಎಂಬುದರ ಮೂಲ ಪತ್ತೆ ಹಚ್ಚಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮರ್ಯಾದೆ, ಗೌರವ, ಕೀರ್ತಿ ಕಳೆದುಕೊಂಡ ಮೇಲೆ ಈ ವಾರ್ ಎಂಡ್ ಆಗುತ್ತೆ’ ಎಂದು ಸುದೀಪ್ ಹೇಳಿದ್ದಾರೆ. ಈ ಮೂಲಕ ಸ್ಪರ್ಧಿಗಳು ಎಚ್ಚೆತ್ತುಕೊಂಡು ಆ ರೀತಿ ಆಗದಂತೆ ನಡೆದುಕೊಳ್ಳಲಿ ಎಂಬುದು ಅವರ ಆಶಯ.

ಇದನ್ನೂ ಓದಿ: ಈ ವಾರ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್ಟ್

ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳು ಪ್ರತಿ ಮಾತು ಮಾತಿಗೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಇಡೀ ದಿನ ಜಗಳವನ್ನು ನೋಡಿ ವೀಕ್ಷಕರಿಗೂ ಬೇಸರ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲ ಫಿನಾಲೆ ಬಳಿಕ ಒಂದಷ್ಟು ಸ್ಪರ್ಧಿಗಳು ಎಲಿಮಿನೇಟ್ ಆಗುವ ಸೂಚನೆಯನ್ನು ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.